ರಾಹುಲ್ ಗಾಂಧಿಗೆ ದೇಶದ ಬಗ್ಗೆ ನಿಯತ್ತಿಲ್ಲ: ಸಿ.ಟಿ ರವಿ

Public TV
2 Min Read

ಯಾದಗಿರಿ: ರಾಹುಲ್ ಗಾಂಧಿಗೆ (Rahul Gandhi) ದೇಶದ ನಿಯತ್ತು ಇದ್ದಿದ್ರೆ ವಿದೇಶದಲ್ಲಿ ಭಾರತವನ್ನ ಟೀಕೆ ಮಾಡುತ್ತಿರಲಿಲ್ಲ ಎಂದು ಕಾಂಗ್ರೆಸ್‌ ಮುಖಂಡ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ (CT Ravi) ವಾಗ್ದಾಳಿ ನಡೆಸಿದರು.

ಯಾದಗಿರಿಯ ಶಹಪುರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ (Congress) ಅವರಿಗೆ ನೀತಿ ನಿಯತ್ತು ಇಲ್ಲ. ಯಾರು ನಮ್ಮ ದೇಶವನ್ನು ಇನ್ನೂರು ವರ್ಷಗಳ ಕಾಲ ಕೊಳ್ಳೆ ಹೊಡೆದರೋ ಅವರ ಬಳಿ ಸಹಾಯ ಕೇಳುತ್ತಿದ್ದಾರೆ. ವಿದೇಶಿಗರಿಂದ ಸಹಾಯ ಕೇಳುವ ಸ್ಥಿತಿಗೆ ದೇಶ ಬಂದಿಲ್ಲ. ವಿದೇಶಿಗರ ಸಹಾಯ ಕೇಳುವುದು ದೇಶ ದ್ರೋಹ. ಹೀಗಾಗಿ ರಾಹುಲ್‌ ಗಾಂಧಿ ದೇಶದ ಜನರ ಕ್ಷಮೆ ಯಾಚಿಸಬೇಕು. ಇಲ್ಲದಿದ್ದರೆ ಅವರಿಗೆ ದೇಶಕ್ಕೆ ಬರುವ ಯೋಗ್ಯತೆ ಇಲ್ಲ ಎಂದು ಕಿಡಿಕಾರಿದರು.

ಪಾರ್ಲಿಮೆಂಟ್‌ನಲ್ಲಿ ಗಂಟೆಗಟ್ಟಲೇ ಮಾತಾಡುತ್ತಾರೆ. ಆದರೆ ಭಾರತದಲ್ಲಿ ಮುಕ್ತ ಚರ್ಚೆಗೆ ಅವಕಾಶ ಇಲ್ಲ ಎಂದು ಹೇಳುತ್ತಾರೆ. ಮುಕ್ತ ಚರ್ಚೆಗೆ ಅವಕಾಶ ಇಲ್ಲ ಎಂದಿದ್ದರೇ ದೇಶದ ಪ್ರಧಾನಿ ಬಗ್ಗೆ ಮಾತಾಡಲು ಅವಕಾಶ ಇರುತ್ತಿರಲಿಲ್ಲ. ಅಫ್ಘಾನಿಸ್ತಾನದಲ್ಲಿ ಈ ರೀತಿ ಮಾತಾಡಿದ್ರೆ ಏನಾಗುತ್ತಿತ್ತು?. ರಾಹುಲ್ ಗಾಂಧಿಗೆ ದೇಶದ ಬಗ್ಗೆ ನಿಯತ್ತು ಇಲ್ಲ. ಅವರ ಕೈಯಲ್ಲಿ, ಕುಟುಂಬದ ಕೈಯಲ್ಲಿ ಅಧಿಕಾರ ಇದ್ರೆ ಮಾತ್ರ ಇವರ ಪ್ರಕಾರ ಪ್ರಜಾಪ್ರಭುತ್ವ ಎಂದು ತೀವ್ರ ವಾಗ್ದಾಳಿ ನಡೆಸಿದರು.

ಸದ್ಯ ಕಾಂಗ್ರೆಸ್‌ನಲ್ಲಿ ಖರ್ಗೆ ಅವರು ನಾಮಕಾವಸ್ಥೆ ಅಧ್ಯಕ್ಷ. ವಯಸ್ಸಿನಲ್ಲಿ, ಅನುಭವದಲ್ಲಿ ಮಾತ್ರ ಖರ್ಗೆ ಅವರು ಹಿರಿಯರು. ಆದರೆ ಬರೀ ಕೊಡೆ ಹಿಡಿತಾರೆ ಅಂತಾ ಪ್ರಧಾನಿ ಮೋದಿ ಅವರು ಹೇಳಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಪವರ್ ಲೆಸ್ ಅಧ್ಯಕ್ಷ. ನೀತಿ, ನೇತೃತ್ವ, ನಿಯತ್ತು ಇಲ್ಲದ್ದು ಕಾಂಗ್ರೆಸ್ ಪಕ್ಷವಾಗಿದೆ. ಆದರೆ ನೀತಿ, ನಿಯತ್ತು, ನೇತೃತ್ವ ಇರುವ ಪಕ್ಷ ಬಿಜೆಪಿಯಾಗಿದೆ. ಇದೇ ವಿಚಾರ ಇಟ್ಕೊಂಡು ಜನರ ಬಳಿ ಹೋಗುತ್ತೇವೆ ಎಂದ ಅವರು, ಕಾಂಗ್ರೆಸ್ ಫಾಲ್ಸ್ ಗ್ಯಾರಂಟಿ ಕಾರ್ಡ್ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ:  LACಯಲ್ಲಿ ಸಂಘರ್ಷ, ಭಾರತದಲ್ಲಿ ಉಗ್ರ ದಾಳಿ- ಅಮೆರಿಕ ಗುಪ್ತಚರ ಸಂಸ್ಥೆಯ ಎಚ್ಚರಿಕೆ

ಜನರಿಗೆ ಕಾಂಗ್ರೆಸ್ ಮೋಸ ಮಾಡುತ್ತಿದೆ. 32 ಹಿಂದೂ ಕಾರ್ಯಕರ್ತರ ಹತ್ಯೆ ಮಾಡಿದ್ದು, ಪವರ್ ಕಟ್ ಮಾಡಿ ಜನರಿಗೆ ಮೋಸ ಮಾಡಿರುವುದು ಮಾತ್ರ ಕಾಂಗ್ರೆಸ್‌ನವರ ಕಾಲದ್ದು ನೆನಪಿಗೆ ಬರುತ್ತೆ ಎಂದು ಹೇಳಿದರು‌. ಇದನ್ನೂ ಓದಿ: 1,487 ಗ್ರಾಂ ಚಿನ್ನ ಸಾಗಾಟ ಮಾಡ್ತಿದ್ದ ಏರ್ ಇಂಡಿಯಾ ಸಿಬ್ಬಂದಿ ಅರೆಸ್ಟ್

Share This Article
Leave a Comment

Leave a Reply

Your email address will not be published. Required fields are marked *