ಬೆಂಗಳೂರು: ಕಾಂಗ್ರೆಸ್‌ನವರು ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಸುಳ್ಳು ಆರೋಪ ಮಾಡಿರುವ ರಾಹುಲ್ ಗಾಂಧಿ (Rahul Gandhi) ಮೆಡಿಕಲ್ ಚೆಕಪ್ ಮಾಡಿಸಲಿ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ (C T Ravi) ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರಿನಲ್ಲಿ (Bengaluru) ಮಾತಾಡಿದ ಅವರು, ಕರ್ನಾಟಕದಲ್ಲಿ ಮತದಾರರ ರದ್ದಿಗಿಂತ ಸೇರ್ಪಡೆ ಹೆಚ್ಚಾಗಿದೆ. ಜನನ ಪ್ರಮಾಣಕ್ಕಿಂತಲೂ ಹೆಚ್ಚು ಹೆಸರು ಸೇರ್ಪಡೆ ಆಗಿದೆ. ಮರಣ ಪ್ರಮಾಣಕ್ಕಿಂತಲೂ ಕಡಿಮೆ ಹೆಸರು ರದ್ದಾಗಿದೆ. ಬಹುತೇಕ ಸಂದರ್ಭಗಳಲ್ಲಿ ಕಾಂಗ್ರೆಸ್ (Congress) ಅಧಿಕಾರದಲ್ಲಿದ್ದಾಗಲೇ ಹೆಸರು ಸೇರ್ಪಡೆ ಮತ್ತು ರದ್ದಾಗಿದೆ. 2014ಕ್ಕೂ ಮುನ್ನ ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರದಲ್ಲಿತ್ತು. 2013ರಲ್ಲಿ ರಾಜ್ಯದಲ್ಲೂ ಕಾಂಗ್ರೆಸ್ ಇತ್ತು. 2014ರ ಲೋಕಸಭೆ (Lok Sabha) ವೇಳೆ ಕಾಂಗ್ರೆಸ್ ಕೇಂದ್ರದಲ್ಲಿತ್ತು. 2019ರ ಲೋಕಸಭೆ ವೇಳೆ ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಇತ್ತು. ಅಕ್ರಮ ಮಾಡಿದ್ರೆ ಕಾಂಗ್ರೆಸ್ ನವ್ರೇ ಮಾಡಿರಬೇಕು, ಯಾಕಂದ್ರೆ ಬಹುತೇಕ ಅವಧಿಯಲ್ಲಿ ಅವರೇ ಅಧಿಕಾರದಲ್ಲಿದ್ರು ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ಮಲಯಾಳಂ ನಟ ಕಲಾಭವನ್ ನವಾಸ್ ಹೋಟೆಲ್ ರೂಮ್‌ನಲ್ಲಿ ಶವವಾಗಿ ಪತ್ತೆ – ಹೃದಯಾಘಾತ ಶಂಕೆ
ಕಾಂಗ್ರೆಸ್ ನೇಮಿಸಿದ ಅಧಿಕಾರಿಗಳೇ ಚುನಾವಣಾ ಆಯೋಗದಲ್ಲಿದ್ರು. ಚುನಾವಣಾ (Election) ಅಕ್ರಮದ ಇತಿಹಾಸ ಕಾಂಗ್ರೆಸ್‌ನಲ್ಲೇ ಇದೆ. ಇನ್ನು ಅಲಹಾಬಾದ್ ಕೋರ್ಟ್ ರಾಯ್‌ಬರೇಲಿಯಲ್ಲಿ ಇಂದಿರಾ ಚುನಾವಣಾ ಅಕ್ರಮ ಬಗ್ಗೆ ತೀರ್ಪು ಕೊಟ್ಟಿತ್ತು. ರಾಹುಲ್ ತಾನು ಕಳ್ಳ ಆಗಿದ್ರೂ ಪರರ ನಂಬ ಎಂಬ ಗಾದೆ ಮಾತಿನಂತೆ ನಡ್ಕೊಳ್ತಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಕಾಂಗ್ರೆಸ್ ಹೋರಾಟಕ್ಕೆ ಟಕ್ಕರ್ – ಆ.5ರಂದು ಗಾಂಧಿ ಪ್ರತಿಮೆ ಬಳಿ ಬಿಜೆಪಿಯೂ ಪ್ರತಿಭಟನೆ: ಬಿವೈವಿ
ಮಹಾದೇವಪುರದಲ್ಲಿ ಮತದಾರರ ಸಂಖ್ಯೆ ಹೆಚ್ಚಾಗಿದೆ. ಕಳೆದ ಲೋಕಸಭೆಗೂ ಕಳೆದ ವಿಧಾನಸಭೆಗೂ 60 ಸಾವಿರ ಮತದಾರರು ಹೆಚ್ಚಾಗಿದ್ದಾರೆ. ಇಲ್ಲಿ ಹೆಸರು ರದ್ದಾಗಿಲ್ಲ, ಸೇರ್ಪಡೆ ಆಗಿದೆ. ಇಲ್ಲಿ ಮತಗಳ್ಳತನ ಎಲ್ಲಾಗಿದೆ ಹೇಳಲಿ. ರಾಜಾಜಿನಗರದಲ್ಲೂ (Rajajinagara) 3 ಲಕ್ಷ ಮತದಾರರು ಕಳೆದ ಚುನಾವಣೆಗಳಲ್ಲಿ ಹೆಚ್ಚಾಗಿದ್ದಾರೆ. ಇಲ್ಲೂ ಮತಗಳ್ಳತನ ಆಗಿಲ್ಲ. ಕಾಂಗ್ರೆಸ್, ರಾಹುಲ್‌ಗೆ ಅಹಂ ಭಾವವಿದೆ. ತಾವು ಗೆದ್ರೆ ಮಾತ್ರ ಸಕ್ರಮ, ಬೇರೆಯವ್ರು ಗೆದ್ರೆ ಅದು ಅಕ್ರಮ ಎಂಬ ಮಾನಸಿಕ ರೋಗ ರಾಹುಲ್‌ಗಿದೆ ಎಂದು ಆರೋಪಿಸಿದರು.
ರಾಹುಲ್‌ಗೆ ಮೆಡಿಕಲ್ ಚೆಕಪ್ ಆಗ್ಬೇಕು:
ಇನ್ನು, ಚುನಾವಣಾ ಅಕ್ರಮದ ಇತಿಹಾಸ ಕಾಂಗ್ರೆಸ್‌ನಲ್ಲೇ ಇದೆ. ರಾಹುಲ್ ತಾನು ಕಳ್ಳ ಆಗಿದ್ರೂ ಪರರ ನಂಬ ಎಂಬ ಗಾದೆ ಮಾತಿನಂತೆ ನಡ್ಕೊಳ್ತಿದ್ದಾರೆ. ಕೆಲವರ ಭವಿಷ್ಯ ರಾಹುಲ್ ಗಾಂಧಿ ಮೇಲೆ ಇದೆ. ಹೀಗಾಗಿ ರಾಹುಲ್‌ಗೆ ಮೆಡಿಕಲ್ ಚೆಕಪ್ ಆಗಬೇಕು. ಕಾಂಗ್ರೆಸ್ ಡಿಎನ್‌ಎನಲ್ಲೇ ದೋಷ ಇದೆ. ಹಾಗಾಗಿ ಅದರ ಮಾನಸಿಕ ಸಮತೋಲನ ತಪ್ಪಿದೆ. ಅದರ ಡಿಎನ್‌ಎನಲ್ಲೇ ಸರ್ವಾಧಿಕಾರಿ ಧೋರಣೆ, ಪ್ರಜಾಪ್ರಭುತ್ವ ವಿರೋಧಿ ನಡೆ ಇದೆ ಎಂದು ಟೀಕಿಸಿದರು. ಇದನ್ನೂ ಓದಿ: ಚುನಾವಣಾ ಆಯೋಗ ಸಂಪೂರ್ಣ ಸತ್ತು ಹೋಗಿದ್ದು, ತನ್ನ ಸ್ವಾಯತ್ತತೆ ಕಳೆದುಕೊಂಡಿದೆ: ರಾಹುಲ್ ಗಾಂಧಿ
ಇವಿಎಂ ಯಂತ್ರ ಹ್ಯಾಕ್ ಆಗಿದೆ ಅನ್ನೋ ಆರೋಪ ಕಾಂಗ್ರೆಸ್ ಸಾಬೀತು ಮಾಡಿಲ್ಲ. ಈಗ ಹೆಸರು ಸೇರ್ಪಡೆ, ರದ್ದಿನಲ್ಲಿ ಅಕ್ರಮ ಆಗಿದೆ ಅಂತಿದ್ದಾರೆ. ಕಾಂಗ್ರೆಸ್‌ನವ್ರ ಮಾನಸಿಕ ಆರೋಗ್ಯ ಹೆಚ್ಚು ಕಡಿಮೆ ಆಗಿರುವ ಸಾಧ್ಯತೆ ಇದೆ. ಕಾಂಗ್ರೆಸ್‌ನವರು ಮಾನಸಿಕ ತಜ್ಞರಲ್ಲಿ ತೋರಿಸಿಕೊಳ್ಳಿ ಎಂದು ಲೇವಡಿ ಮಾಡಿದರು.
ಆರೋಪ ಸಾಬೀತಾಗದಿದ್ರೆ ಹುಚ್ಚಾಸ್ಪತ್ರೆಗೆ ಹೋಗಲಿ:
ಮೂರ್ಖ ನಾಯಕ ಮರುಳ ಹಿಂಬಾಲಕರಂತೆ ಆಗಿದೆ ಕಾಂಗ್ರೆಸ್. ಸಿದ್ದರಾಮಯ್ಯರಿಗೆ ಏನಾಗಿದೆ? ಇರ‍್ಯಾಕೆ ಮರುಳ ಹಿಂಬಾಲಕ ಆಗ್ತಿದ್ದಾರೆ. ಇವರಿಗೆ ಸಂವಿಧಾನದ ಮೇಲೆ ವಿಶ್ವಾಸ ಇಲ್ಲ. ಚುನಾವಣಾ ಆಯೋಗ ಕಾಂಗ್ರೆಸ್ ಮನವಿ ಸ್ವೀಕರಿಸಿ ತನಿಖೆ ಮಾಡಲಿ. ಆರೋಪ ಸಾಬೀತಾಗದಿದ್ದರೆ ಕಾಂಗ್ರೆಸ್‌ನವ್ರು ಹುಚ್ಚಾಸ್ಪತ್ರೆಗೆ ಹೋಗಲಿ. ರಾಹುಲ್ ತಮ್ಮ ಬಳಿ ಆಟಂಬಾಬ್ ಇದೆ ಅಂದಿದ್ದಾರೆ. ಅವರ ಬಳಿ ಇರೋದು ಪ್ರಜಾಪ್ರಭುತ್ವದ ವಿರುದ್ಧದ ಆಟಂ ಬಾಂಬ್. ನಮ್ಮ ಸಂವಿಧಾನ ಇವರ ಆಟಂಬಾಂಬ್‌ಗಳಿಂದ ದೇಶಕ್ಕೆ ರಕ್ಷಾಕವಚ ಆಗಿದೆ ಎಂದು ಟಾಂಗ್ ಕೊಟ್ಟರು. ಇದನ್ನೂ ಓದಿ: ಬೆಂಗಳೂರಿನಲ್ಲಿ ಆ.5ರ ಪ್ರತಿಭಟನೆಗೆ ಮಂಡ್ಯದಿಂದ 5 ಸಾವಿರ ಜನ: ಚಲುವರಾಯಸ್ವಾಮಿ
ಇದೇ ವೇಳೆ ಸಂಸದ ಪಿ.ಸಿ ಮೋಹನ್ ಮಾತಾಡಿ, ಬಿಹಾರ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ಡ್ರಾಮಾ ಮಾಡ್ತಿದೆ. ಬಿಹಾರದಲ್ಲಿ ಕಾಂಗ್ರೆಸ್‌ಗೆ ಸೋಲು ಕಟ್ಟಿಟ್ಟಬುತ್ತಿ. ರಾಜ್ಯದಲ್ಲಿ ರೈತರ ಆತ್ಮಹತ್ಯೆ, ಬಾಣಂತಿಯರ ಸಾವಾದಾಗ ರಾಹುಲ್ ಬರಲಿಲ್ಲ. ಈಗ ಬರ್ತಿರೋದು ರಾಜಕೀಯ ಕಾರಣಕ್ಕೆ ಮಾತ್ರ. ರಾಹುಲ್ ನೇತೃತ್ವದಲ್ಲಿ ಕಾಂಗ್ರೆಸ್ ಇದುವರೆಗೆ 90 ಚುನಾವಣೆ ಸೋತಿದೆ. ಇವರು ಸೋಲೋದು ಗೊತ್ತಾಗಿ ಈ ಡ್ರಾಮಾ ಮಾಡ್ತಿದ್ದಾರೆ ಎಂದಿದ್ದಾರೆ.
ಕಾಂಗ್ರೆಸ್ ಬಳಿ ಯಾವುದೇ ದಾಖಲೆ ಇಲ್ಲ. ಎಲ್ಲ ಬರೀ ಡ್ರಾಮಾ. ಕಳೆದ 3 ಲೋಕಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್ ಮೂರಂಕಿ ದಾಟಲಿಲ್ಲ. ಮಹಾದೇವಪುರ ಮತ್ತಿತರ ಕಡೆ ಮತದಾರರ ಹೆಸರು ಹೆಚ್ಚಳ ಸಹಜ, ಹೊರ ಭಾಗದಲ್ಲಿ ಹೆಚ್ಚು ಜನ ಉದ್ಯೋಗ, ಉದ್ಯಮಕ್ಕೆ ಬರುತ್ತಾರೆ. ಹೀಗಾಗಿ ಮತದಾರರ ಹೆಸರು ಹೆಚ್ಚಾಗಿದೆ. ಕ್ಷೇತ್ರದಲ್ಲಿ ಯಾವುದೇ ಅಕ್ರಮ ಆಗಿಲ್ಲ ಎಂದು ಸ್ಪಷ್ಟಪಡಿಸಿದರು.