– ಸರ್ಕಾರವೂ ಧರ್ಮಸ್ಥಳ ಪ್ರಕರಣದಲ್ಲಿ ಶಾಮೀಲಾಗಿದೆ ಅಂತ ಅನುಮಾನ ಪಡಬೇಕಾಗುತ್ತೆ; ಎಂಎಲ್‌ಸಿ
ಬೆಂಗಳೂರು: 24 ಕೊಲೆಗಳ ಸಿಎಂ ಸಿದ್ದರಾಮಯ್ಯ (Siddaramaiah) ಮಾಡಿಸಿದ್ದಾರೆ ಅಂತ ಮಹೇಶ್ ತಿಮರೋಡಿ ಆರೋಪ ಮಾಡಿದ್ದಾರೆ. ಸಿಎಂ ಕೊಲೆ ಮಾಡಿಸಿ ರಾಜಕಾರಣ ಮಾಡಿದ್ದಾರೆ ಅಂದ್ರೆ ನಾನು ನಂಬಲ್ಲ. ಈ ಬಗ್ಗೆಯೂ ತನಿಖೆಯಾಗಲಿ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ (CT Ravi) ಒತ್ತಾಯಿಸಿದರು.
ವಿಧಾನಸೌಧ ಆವರಣದಲ್ಲಿ ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಅವರು, ಧರ್ಮಸ್ದಳದ (Dharmasthala) ಬಗ್ಗೆ ಆರೋಪ ಮಾಡಿದವರ ವಿರುದ್ಧ ತನಿಖೆ ನಡೆಸದಿದ್ದರೇ ಸರ್ಕಾರವೂ ಈ ಪ್ರಕರಣದಲ್ಲಿ ಶಾಮೀಲಾಗಿದೆ ಅಂತ ನಾವು ಅನುಮಾನ ಪಡಬೇಕಾಗುತ್ತೆ ಎಂದು ಕಳವಳ ವ್ಯಕ್ತಪಡಿಸಿದರು. ಇದನ್ನೂ ಓದಿ: ಸರ್ಕಾರದ ವಿರುದ್ಧ ಕೇಸರಿ ಪಡೆ ʻಧರ್ಮʼ ಯುದ್ಧ – ಷಡ್ಯಂತ್ರದ ಹಿಂದಿರೋರು ಯಾರು? – ಅಪಪ್ರಚಾರಕರ ವಿರುದ್ಧ ಕ್ರಮಕ್ಕೆ ಆಗ್ರಹ
ಧರ್ಮಸ್ಥಳದ ವಿರದ್ಧ ಅಪಪ್ರಚಾರ ನಡೆಯುತ್ತಿದ್ದು ಅಲ್ಲಿಗೆ ನಾವು ಹೋಗಿ ಹೋರಾಟ ಮಾಡದೇ ಕನ್ವರ್ಟ್ ಆದವರು, ಮತಾಂತರಕ್ಕೆ ಬೆಂಬಲ ನೀಡುವವರು ಹೋಗಿ ಹೋರಾಟ ಮಾಡ್ತಾರಾ? ಅಂತ ಪ್ರಶ್ನಿಸಿದರು. ಇದನ್ನೂ ಓದಿ: Rain Alert | ರಾಜ್ಯದಲ್ಲಿ ಮುಂದಿನ 5 ದಿನ ಭಾರಿ ಮಳೆ – ಮಲೆನಾಡು ಭಾಗದಲ್ಲಿ ರೆಡ್ ಅಲರ್ಟ್
ಧರ್ಮಸ್ಥಳಕ್ಕಿಂತ ಮಾಸ್ಕ್ ಮ್ಯಾನ್ ಮೇಲೆ ಶ್ರದ್ದೆನಾ?
ಅನಾಮಿಕ ತೋರಿಸಿದ 16 ಜಾಗಗಳಲ್ಲಿ ಅಗೆದರೂ ಏನೂ ಸಿಕ್ಕಿಲ್ಲ. ಅವನ ಜೊತೆ ಸೇರಿಕೊಂಡು ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಕೆಲವು ಯುಟ್ಯೂಬ್, ಸೋಶಿಯಲ್ ಮೀಡಿಯಾದವರೂ (Social Media) ಸೇರಿಕೊಂಡಿದ್ದಾರೆ. ಉಪ ಮುಖ್ಯಮಂತ್ರಿಗಳೇ ಷಡ್ಯಂತ್ರ ಆಗಿದೆ ಅಂದಿದ್ದಾರೆ. ನಮಗೂ ಅದೆ ಅನುಮಾನ ಅನಾಮಿಕನನ್ನ ಮಂಪರು ಪರೀಕ್ಷೆಗೆ ಒಳಪಡಿಸಬೇಕು. ಸೋಷಿಯಲ್ ಮೀಡಿಯಾ ಯೂಟ್ಯೂಬ್‌ನಲ್ಲಿ ಮಾತನಾಡಿದವರ ವಿರುದ್ಧವೂ ಕ್ರಮ ತಗೆದುಕೊಳ್ಳಬೇಕು. ಧಾರ್ಮಿಕ ಶ್ರದ್ದಾ ಕೇಂದ್ರವಾದ ಧರ್ಮಸ್ಥಳದ ವಿಚಾರದಲ್ಲಿ ಅಪಪ್ರಚಾರ ಮಾಡಿದವರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು. ಒಬ್ಬ ಮಾಸ್ಕ್ ಮ್ಯಾನ್ ಮೇಲೆ ಇವರಿಗೆ ಶ್ರದ್ದೆನಾ? ಕೋಟ್ಯಂತರ ಜನರ ಭಕ್ತಿಯ ಧಾರ್ಮಿಕ ಕೇಂದ್ರದ ಮೇಲೆ ಇವರಿಗೆ ಶ್ರದ್ದೆನಾ? ಅಂತ ಪ್ರಶ್ನೆ ಮಾಡಿದರು.
ಎಡ ಪಂಥೀಯರ ಒತ್ತಡಕ್ಕೆ ಮಣಿದು ಎಸ್‌ಐಟಿ ರಚನೆ ಮಾಡಿದ್ದೇವೆ ಅಂತ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಅಲ್ಲದೇ ಸಿಎಂ 24 ಕೊಲೆ ಮಾಡಿದ್ದಾರೆ ಅಂತ ಮಹೇಶ್ ತಿಮ್ಮರೋಡಿ ಆರೋಪ ಮಾಡಿದ್ದಾರೆ. ಸಿಎಂ ಕೊಲೆ ಮಾಡಿಸಿ ರಾಜಕಾರಣ ಮಾಡಿದ್ದಾರೆ ಅಂತ ನಾನು ನಂಬಲ್ಲ. ಕಾನೂನು ಎಲ್ಲರಿಗೂ ಒಂದೇ ಹಾಗೇನಾದರು ಸಾಕ್ಷ್ಯಗಳಿದ್ದರೆ, ಹೋಗಿ ದೂರು ಕೊಡಲಿ. ಈ ವಿಚಾರದಲ್ಲಿ ಆಧಾರ ಇಲ್ಲದೇ ಆರೋಪ ಮಾಡಲ್ಲ. ಹಿಟ್ ಅಂಡ್ ರನ್ ಮಾಡಲ್ಲ. ಆರೋಪದ ಬಗ್ಗೆ ಸಹಾ ತನಿಖೆ ನಡೆಯಲಿ ಎಂದು ಆಗ್ರಹಿಸಿದರು.
ಧರ್ಮಸ್ದಳದ ಬಗ್ಗೆ ಆರೋಪ ಮಾಡಿದವರ ವಿರುದ್ಧ ತನಿಖೆ ನಡೆಸದಿದ್ದರೇ ಸರ್ಕಾರವೂ ಶಾಮೀಲಾಗಿದೆ ಅಂತ ನಾವು ಅನುಮಾನ ಪಡಬೇಕಾಗಿತ್ತದೆ. ಮುಂದೆ ಭಕ್ತರು ಹಾಗೂ ಪಕ್ಷದ ನಾಯಕರ ಜೊತೆ ಚರ್ಚೆ ಮಾಡಿ ಮುಂದಿನ ತೀರ್ಮಾನ ಮಾಡುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ಭಾರತ-ಪಾಕ್ ಪರಿಸ್ಥಿತಿಯನ್ನ ಅಮೆರಿಕ ಸೂಕ್ಷ್ಮವಾಗಿ ಗಮನಿಸ್ತಿದೆ – ಕದನ ವಿರಾಮ ಕುಸಿಯಬಹುದು: ಮಾರ್ಕೊ ರೂಬಿಯೊ