ಸಿದ್ದರಾಮಯ್ಯರ ಮುತ್ಸದ್ಧಿತನ ಮಸುಕಾಗಿ ತಾಲಿಬಾನ್ ಭೂತ ಹೊಕ್ಕಿದೆ: ಸಿ.ಟಿ. ರವಿ

Public TV
2 Min Read

ಕಾರವಾರ: ಮತೀಯವಾದಕ್ಕೆ ಕಾಂಗ್ರೆಸ್ ಪ್ರೋತ್ಸಾಹ ಕೊಡುವುದನ್ನು ಬಿಡಬೇಕು, ದೇಶ ತುಂಡಾಗಲು ಜಿನ್ನಾ ಎಷ್ಟು ಕಾರಣನೋ ಅಷ್ಟೇ ಕಾಂಗ್ರೆಸ್ ಕಾರಣ. ಸಿದ್ದರಾಮಯ್ಯರ ಮುತ್ಸದ್ಧಿತನ ಮಸುಕಾಗಿ ತಾಲಿಬಾನ್ ಭೂತ ಹೊಕ್ಕಿದೆ ಎಂದು ಶಾಸಕ ಸಿ.ಟಿ ರವಿ ವಾಗ್ದಾಳಿ ನಡೆಸಿದ್ದಾರೆ.

ಹಿಜಬ್ ಕುರಿತು ಎದ್ದಿರುವ ವಿವಾದಕ್ಕೆ ಕಾಂಗ್ರೆಸ್ ಬೆಂಬಲ ವ್ಯಕ್ತಪಡಿಸಿರುವ ಬಗ್ಗೆ ಕಾರವಾರದ ದೇವಳವಕ್ಕಿಯ ನೇವಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ದೇಶದ ಬಹುಸಂಖ್ಯಾತರಿಗೆ ಮೋಸ ಮಾಡಿದ್ರು, ಶಾಲೆಯಲ್ಲಿ ವಿಭಜನೆ ಸೂತ್ರ ದೇಶ ವಿಭಜನೆಗಿಂತ ಅಪಾಯಕಾರಿ ಯಾಗಿದೆ. ಕಾಂಗ್ರೆಸ್ ಸುಧಾರಣೆ ವಿರೋಧಿ ಅಂತಾ ಅವರ ನಡುವಳಿಕೆ ಮೂಲಕ ಗೊತ್ತಾಗುತ್ತಿದೆ. ಹಿಂದೂ ಧರ್ಮದಲ್ಲಿ ಸತಿಸಗಮನ, ಬಾಲ್ಯವಿವಾಹ ಅಸ್ಪೃಶ್ಯತೆ ಪದ್ಧತಿ ಇತ್ತು, ಅದನ್ನು ನಾವು ಪ್ರೋತ್ಸಾಹಿಸಿಲ್ಲ, ಬದಲಾವಣೆಗೆ ಹೊಂದಿಕೊಂಡಿದ್ದೇವೆ. ಅವೆಲ್ಲಾ ಪರಿವರ್ತನೆಗೆ ನಾವು ಒಪ್ಪಿದ್ದೇವೆ, ಇದನ್ನು ಆಚರಣೆ ಮಾಡಿದಲ್ಲಿ ಒದ್ದು ಒಳಗೆ ಹಾಕ್ತೇವೆ. ಇದನ್ನೂ ಓದಿ: ಕುಮಾರಸ್ವಾಮಿ ಬಗ್ಗೆ ನಾನು ಮಾತನಾಡಲ್ಲ, ನಾನು ಹಿಜಬ್ ಬಗ್ಗೆ ಮಾತನಾಡಿದ್ದು ನಿಜ: ಸಿದ್ದರಾಮಯ್ಯ

ಸಮಾಜ ಪರಿವರ್ತನೆ ಆಗುವ ರೀತಿಯಲ್ಲಿ ಯಾಕೆ ಇಸ್ಲಾಂ ಪರಿವರ್ತನೆ ಆಗುತ್ತಿಲ್ಲ. ಹಿಜಬ್, ಬುರ್ಖಾ ಹೆಣ್ಣು ಮಕ್ಕಳ ಶೋಷಣೆಯ ಅಭಿವ್ಯಕ್ತತೆಯನ್ನು ತೋರಿಸುತ್ತದೆ. ಇಸ್ಲಾಂ ಮಹಿಳೆಯರು ಬದಲಾವಣೆಯನ್ನು ಒಪ್ಪಿಕೊಳ್ಳಬೇಕು. ಮುಸ್ಲಿಂ ರಾಷ್ಟ್ರಗಳಾದ ಸೌದಿ ಅರೇಬಿಯಾ, ಇಂಡೋನೇಷ್ಯಾದಲ್ಲೂ ಹಿಜಬ್ ಕಡ್ಡಾಯವಿಲ್ಲ. ಸಿದ್ದರಾಮಯ್ಯನವರು ಮುತ್ಸದ್ಧಿತನ ಮಸುಕಾಗಿ ತಾಲಿಬಾನ್ ಭೂತ ಹೊಕ್ಕ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಅವರು ಪ್ರಗತಿ, ಹೊಸ ಆಲೋಚನೆಗಿಂತ ಶಾಲೆಗಳಲ್ಲಿ ಮತೀಯವಾದವನ್ನು ತುರುಕುವ ಮನಸ್ಥಿತಿ ನೋಡಿದ್ರೆ ಅವರಲ್ಲಿ ಯಾವರೀತಿಯಲ್ಲಿ ಮತೀಯವಾದದ ಭೂತ ಹೊಕ್ಕಿದೆ ಎಂದು ಗೊತ್ತಾಗುತ್ತದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಹಿಜಬ್ ಫೈಟ್ – ಪದವಿ ಪೂರ್ವ ಕಾಲೇಜು ನಿರ್ದೇಶಕಿ ಎತ್ತಂಗಡಿ!

1983 ಎಜುಕೇಶನ್ ಆಕ್ಟ್ ಏನು ಹೇಳುತ್ತೆ ಸಿದ್ದರಾಮಯ್ಯನವರೇ?
ಆಯಾ ಶಾಲೆಗಳಲ್ಲಿ ಯಾವ ಸಮವಸ್ತ್ರ ಇರಬೇಕು ಎಂದು ಹೇಳಬೇಕು. ಶಾಲೆಯ ಸಮವಸ್ತ್ರಗಳನ್ನು ಪಾಲನೆ ಮಾಡ್ಬೇಕು ಅಂತಾ ಹೇಳುತ್ತೆ ಅಲ್ವಾ. ನಿಮ್ಮ ವಕೀಲರ ಬುದ್ಧಿಗೆ ಎಲ್ಲಿ ಮಸುಕಾಗಿದೆ? ಹಿಜಾಬ್ ಪರವಾಗಿ ಯಾಕೆ ವಕಾಲತ್ತು ಮಾಡುತ್ತಿದ್ದೀರಿ. ಮತೀಯವಾದದ ಭೂತ ನಿಮ್ಮಲ್ಲಿ ಹೊಕ್ಕಂತೆ ಆಡಿದ್ರೆ, ವೋಟು ಬರುತ್ತೆ ಅಂತಾ ನಿಮ್ಮ ದುರಾಸೆ. ತಾಲಿಬಾನ್ ವಾದವನ್ನು ಕಾಲೇಜಿಗೆ ತರಲು ಹೋರಟಿದ್ದೀರಿ ಇದರಿಂದ ದೇಶಕ್ಕೆ ಸಮಾಜಕ್ಕೆ ಒಳ್ಳೆದಾಗಲ್ಲ. ನಾಳೆ ಪೊಲೀಸ್ ಆದವರು ಮುಸ್ಲಿಂ ಧರ್ಮ ಎಂದು ಬುರ್ಖಾ ಹಾಕಿಕೊಂಡು ಬಂದ್ರೆ, ಕಳ್ಳ ಯಾರು ಪೊಲೀಸ್ ಯಾರು ಎಂದು ಗೊತ್ತಾಗುತ್ತಾ?. ಇದನ್ನೂ ಓದಿ: ಕೇಂದ್ರದ ಬೇಟಿ ಬಚಾವೋ, ಬೇಟಿ ಪಡಾವೋ ಈಗ ಬೇಟಿ ಹಠಾವೋ ಆಗಿ ಬದಲಾಗುತ್ತಿದೆ: ಹೆಚ್‍ಡಿಕೆ

ಪೊಲೀಸರಿಗೆ ಹೇಗೆ ಸಮವಸ್ತ್ರ ಇರುತ್ತೊ ಹಾಗೆ ಶಾಲೆಗಳಿಗೂ ಸಮವಸ್ತ್ರ ಇರುತ್ತದೆ. ಮತೀಯವಾದ ಹಾಗೂ ಪ್ರತ್ಯೇಕವಾದ ಸಮಾಜ ದೃಷ್ಟಿಯಿಂದ ಒಳ್ಳೆದಲ್ಲ, ಶೈಕ್ಷಣಿಕ ದೃಷ್ಟಿಯಿಂದ ಇದು ಸರಿಯಲ್ಲ. ದೇಶ ಹೇಗೆ ವಿಭಜಿಸಿದರು ಅದಕ್ಕಿಂತ ದೊಡ್ಡ ವಿಚಾರ ಅಂದ್ರೆ, ಸಮಾಜವನ್ನು ವಿಭಜಿಸಿ ಶಾಲೆಗಳಲ್ಲಿ ಮತೀಯವಾದ ಭೂತ ಸೃಷ್ಟಿಸುವುದಾಗಿದೆ. ಹಿಜಬ್ ಮುಸ್ಲಿಂ ಮಹಿಳೆಯರು ಶೋಷಣೆ ಸಂಖ್ಯೆತವಲ್ಲದೇ ಮತೀಯ ವಾದದ ಸಂಕೇತ ಕೂಡ ಹೌದು. ತುಕಡೆ ಗ್ಯಾಂಗ್‍ಗಳೆಲ್ಲ ಕಾಂಗ್ರೆಸ್‍ಗೆ ಬಂದು ಸೇರಿಕೊಂಡಿದೆ ಅವರ ಹಿಡನ್ ಅಜೆಂಡಾವನ್ನು ಸಾಕಾರಗೊಳಿಸಲು ಶಾಲಾ-ಕಾಲೇಜುಗಳನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಈ ನೆಲದ ಸಂಸ್ಕೃತಿಗೆ ವ್ಯತಿರಿಕ್ತವಾಗಿ ನಡೆದುಕೊಂಡವರು ಪರಕೀಯರು. ಸಂಸ್ಕೃತಿಗೂ, ಮತೀಯವಾದಕ್ಕೂ ವ್ಯತ್ಯಾಸವಿದೆ, ಮತೀಯವಾದದಿಂದ ನೆಲದ ಸಂಸ್ಕೃತಿ ಅಳಿಸಲು ಮಹಮ್ಮದ್ ಘಜ್ನಿ, ಘೋರಿ ಕಾಲದಿಂದಲು ನಡೆಯುತ್ತಿದೆ. ಸಿದ್ದರಾಮಯ್ಯನವರಿಗೆ ಜಿನ್ನಾ ಭೂತ ಬಂದಂತೆ ಆಡುತ್ತಿರುವುದು ವೋಟ್ ಬ್ಯಾಂಕ್ ಪಡೆಯಲು. ಮತೀಯ ವೋಟ್ ಬ್ಯಾಂಕ್ ಉಳಿಸಲು ಹಿಜಬ್ ವಿವಾದವನ್ನು ಕಾಂಗ್ರೆಸ್ ಹುಟ್ಟು ಹಾಕಿದೆ ಎಂದು ಗುಡುಗಿದರು.

Share This Article
Leave a Comment

Leave a Reply

Your email address will not be published. Required fields are marked *