ಈಶ್ವರ, ಕೃಷ್ಣ, ಅಲ್ಲಾ, ಜೀಸಸ್ ದೇವರೆಂದು ಒಪ್ಪಿಕೊಂಡರೇ ಜಗತ್ತು ಸುಖವಾಗಿರುತ್ತೆ: ಸಿ.ಟಿ.ರವಿ

Public TV
2 Min Read

ಚಿಕ್ಕಮಗಳೂರು: ಓರ್ವ ಹಿಂದೂವಾಗಿ ಜೀಸಸ್-ಅಲ್ಲಾ ದೇವರು ಎಂದು ಒಪ್ಪಿಕೊಳ್ಳಬಹುದು. ನಮ್ಮಲ್ಲಿ ದೇವನೊಬ್ಬ ನಾಮ ಹಲವು ಎಂಬ ತತ್ವದಿದೆ. ಆದರೆ, ಇಸ್ಲಾಂ-ಕ್ರೈಸ್ತ ಆದ ಕೂಡಲೇ ದೇವಸ್ಥಾನದ ಬಾಗಿಲು ಬಂದ್ ಆಗಲಿದೆ. ಅವರಿಗೆ ಉಳಿದ ದೇವರುಗಳ ಬಗ್ಗೆ ನಿರಾಕರಣೆ ಇದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸರ್ವಧರ್ಮ ಸಮನ್ವಯದ ಕುರಿತು ಮಾತನಾಡಿದ್ದಾರೆ.

ಚಿಕ್ಕಮಗಳೂರು ನಗರಸಭೆ ಚುನಾವಣೆ ಹಿನ್ನೆಲೆ ಮತದಾನ ಮಾಡಿ ಮಾತನಾಡಿದ ಅವರು, ನಮ್ಮಲ್ಲಿ ಬಹುದೇವತಾರಾಧನೆ ಇದೆ. ಹಿಂದೂವಾಗಿ ಅಲ್ಲಾ-ಕ್ರೈಸ್ತನನ್ನು ಒಪ್ಪಿಕೊಳ್ಳಬಹುದು. ಹಿಂದೂ ಮಸೀದಿ, ಚರ್ಚೆಗೆ ಹೋಗಿ ಅಲ್ಲಾ-ಜೀಸಸ್ ದೇವರು ಎಂದು ಒಪ್ಪಿಕೊಳ್ಳಬಹುದು ಆದರೆ, ಮತಾಂತರವಾದ ಕೂಡಲೇ ಅಲ್ಲಿ ಬೇರೆ ದೇವರು, ದೇವಸ್ಥಾನದ ಬಾಗಿಲು ಮುಚ್ಚಲಿದೆ. ಈ ವಿಷಯದಲ್ಲಿ ಎರಡೂ ಧರ್ಮದವರು ಆಲೋಚನೆ ಮಾಡಬೇಕಿದೆ. ದೇವನೊಬ್ಬ ನಾಮ ಹಲವು. ಎಷ್ಟು ಮತಿ ಇದ್ಯೋ ಅಷ್ಟು ಮತ ಅನ್ನುವಂತಹಾ ಮುಕ್ತತೆಗೆ ಅವಕಾಶ ಸಿಗಲಿದೆ. ಬಹಳ ವಿಷಯದಲ್ಲಿ ಮುಗ್ಧತೆಯ ಪ್ರತಿಪಾದನೆ ಮಾಡುತ್ತಾರೆ. ಆದರೆ, ಈ ವಿಷಯದಲ್ಲಿ ಮೌನವಾಗುತ್ತಾರೆ. ಹಾಗಾಗಿ, ಎರಡೂ ಧರ್ಮದ ಧಾರ್ಮಿಕ ನೇತಾರರು ಚಿಂತಿಸಬೇಕು. ಅಲ್ಲಾ-ಈಶ್ವರ ದೇವರು ಎಂದು ಒಪ್ಪಿಕೊಂಡರೆ ಬಹುಶಃ ಜಗತ್ತಿನಲ್ಲಿ ಸಂಘರ್ಷ ಇರುವುದಿಲ್ಲ. ಜೀಸಸ್-ಕೃಷ್ಣ ದೇವರು ಎಂದು ಒಪ್ಪಿಕೊಂಡರೆ ಸಂಘರ್ಷ ಇರುವುದಿಲ್ಲ. ಜಗತ್ತಿನಲ್ಲಿ ಶಾಂತಿ ನೆಲೆಸಲು ಇರುವ ಅಡೆತಡೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಆಲೋಚನೆ ಮಾಡಿದರೆ ಜಗತ್ತು ಸುಖವಾಗಿರುತ್ತೆ ಎಂದಿದ್ದಾರೆ. ಇದನ್ನೂ ಓದಿ: ಕಸ ಎಸೆದ ಯುವಕನಿಗೆ ರಸ್ತೆ ಮಧ್ಯೆ ಸಿಟಿ ರವಿ ಕ್ಲಾಸ್

ಇದೇ ವೇಳೆ, ಓಮಿಕ್ರಾನ್ ಕುರಿತಂತೆ ಪ್ರತಿಕ್ರಿಯೆ ನೀಡಿದ ಅವರು, ಜನಜೀವನ ಈಗ ಒಂದು ರೀತಿ ಸಾಮಾನ್ಯ ಮಟ್ಟದಲ್ಲಿ ಇದೆ. ಓಮಿಕ್ರಾನ್ ಬಗ್ಗೆ ಅನಗತ್ಯ ಬೇಡ. ಸರ್ಕಾರವೂ ಕೂಡ ಅನಗತ್ಯ ಭಯಪಡಿಸಬಾರದು. ನಮ್ಮದೇ ಸರ್ಕಾರ ಹೇಳಿರುವ ನಿರ್ಣಯವನ್ನು ನಾನು ಸರಿ-ತಪ್ಪು ಎಂದು ವ್ಯಾಖ್ಯಾನ ಮಾಡುವುದಿಲ್ಲ. ಆದರೆ, ವೈರಾಲಜಿ ಸೈಂಟಿಸ್ಟ್ ಹೇಳಿರುವ ಪ್ರಕಾರ, ಅಕಸ್ಮಾತ್ ಓಮಿಕ್ರಾನ್ ಬಂದರೂ ಕೂಡ ಮೈಲ್ಡ್ ಎಫೆಕ್ಟ್ ಅಷ್ಟೇ ಎಂದಿದ್ದಾರೆ. ಮೂಗು ಇರುವವರೆಗೂ ನೆಗಡಿ ತಪ್ಪಲ್ಲ ನೆಗಡಿ ಬಂದ ತಕ್ಷಣ ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ, ಎಚ್ಚರಿಕೆ ವಹಿಸಬೇಕು ಎಂದರು. ಇದನ್ನೂ ಓದಿ: ಸರ್ಕಾರದ ನೈಟ್ ಕರ್ಫ್ಯೂ ಆದೇಶಕ್ಕೆ ಸಿ.ಟಿ.ರವಿ ಅಸಮಾಧಾನ

Share This Article
Leave a Comment

Leave a Reply

Your email address will not be published. Required fields are marked *