ಶಾರೀಕ್‌ಗಿಂತಲೂ ಸಿಟಿ ರವಿ ರಾಜ್ಯದ ದೊಡ್ಡ ಮಾಸ್ಟರ್‌ಮೈಂಡ್ ಉಗ್ರ: ಕಿಸಾನ್ ಕಾಂಗ್ರೆಸ್ ಅಧ್ಯಕ್ಷ

By
1 Min Read

ಬೆಂಗಳೂರು: ಸಿಟಿ ರವಿ (CT Ravi) ಈ ರಾಜ್ಯದ ದೊಡ್ಡ ಮಾಸ್ಟರ್ ಮೈಂಡ್ ಉಗ್ರ (Terrorist). ಮಂಗಳೂರಿನ ಕುಕ್ಕರ್ ಬಾಂಬ್ ಬ್ಲಾಸ್ಟ್ (Cooker Bomb Blast) ಉಗ್ರ ಶಾರೀಕ್‌ಗಿಂತಲೂ ಸಿಟಿ ರವಿ ಒಂದು ಕೈ ಮೇಲೆ ಎಂದು ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಮಿಗಾ (Sachin Miga) ವಿವಾದಿತ ಹೇಳಿಕೆ ನೀಡಿದ್ದಾರೆ.

ಚಿಕ್ಕಮಗಳೂರಿನಲ್ಲಿ ರಾತ್ರೋರಾತ್ರಿ ದತ್ತಪೀಠದ ಗೋರಿಗಳನ್ನು ನಾಶಮಾಡಿರುವ ಉದಾಹರಣೆಗಳು ಇನ್ನೂ ನಮ್ಮ ಕಣ್ಣಮುಂದಿವೆ. ಇವರ ರಾಜಕೀಯದಿಂದ ಆರಂಭಿಸಿ ರಾಜ್ಯಾದ್ಯಂತ ಶಾಂತಿ ಕದಡಿ, ಭಯದ ವಾತಾವರಣ ನಿರ್ಮಾಣ ಮಾಡಿರುವ ಸಿಟಿ ರವಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ ಎಂದು ಕಿಡಿ ಕಾರಿದರು.

ಸಿಟಿ ರವಿ ಅವರು ಬಿಜೆಪಿ ಸಮಾವೇಶದಲ್ಲಿ ಹಿಂದೂ ಕೊಲೆ ಆಗುತ್ತೆ ಎಂದು ಬಹಿರಂಗವಾಗಿ ಹೇಳಿದ್ದರು. ಈ ಭಾಷಣದ ಮೂಲಕ ಹಿಂದೂಗಳು ತಮ್ಮ ರಕ್ಷಣೆಯನ್ನು ಮಾಡಿಕೊಳ್ಳಲು ಆಗಲ್ಲ ಎಂಬ ರೀತಿಯಲ್ಲಿ ಹೇಳಿದ್ದಾರೆ. ಇದು ಅವರು ಹಿಂದೂ ಧರ್ಮಕ್ಕೆ ಮಾಡಿರುವ ಅಪಮಾನ. ಅವರ ನಿಜ ಹಿಂದುತ್ವದ ಬಣ್ಣ ಇಲ್ಲಿ ಬಯಲಾಗುತ್ತದೆ. ಸಿಟಿ ರವಿ ಎಚ್ಚರಿಕೆಯಿಂದ ಪದಗಳನ್ನು ಬಳಕೆ ಮಾಡಬೇಕು ಎಂದು ಹೇಳಿದರು. ಇದನ್ನೂ ಓದಿ: ಕೇರಳದ ಲಾಡ್ಜ್‌ಗಳಿಗೆ ಕೊರಿಯರ್ ಮೂಲಕ ಬರ್ತಿತ್ತು ಬಾಂಬ್ ತಯಾರಿಸುವ ಸಾಮಾಗ್ರಿ

ನಾವೂ ಹಿಂದೂಗಳು, ನಾವು ಹೇಡಿಗಳಲ್ಲ. ಕೈಗೆ ಬಳೆ ತೊಟ್ಟುಕೊಂಡಿಲ್ಲ. ಹಿಂದೂವಾಗಿ ಹುಟ್ಟಿದ ಮೇಲೆ ಸ್ವಾರ್ಥಕ್ಕೆ ಧರ್ಮ ಬಳಸುವ ನೀಚ ರಕ್ಷಣೆ ನೈಜ ಹಿಂದೂಗಳಿಗೆ ಬೇಕಾಗಿಲ್ಲ ಎಂದು ಸಚಿನ್ ಮಿಗಾ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಮದ್ಯ ಕುಡಿದು ಸತ್ತವರಿಗೆ ಪರಿಹಾರ ಕೊಡಲ್ಲ – ಸಿಎಂ ನಿತೀಶ್ ಕುಮಾರ್

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *