ಮೈಕ್ ಹಾಕಿ ಊರಿಗೆಲ್ಲ ಕೇಳುವ ಹಾಗೆ ಕೂಗಿದ್ರೆ ಧಾರ್ಮಿಕ ಭಾವನೆಗೆ ಧಕ್ಕೆಯಾಗಲ್ವಾ? – ತ್ರಿಶೂಲ, ತಿಲಕದ ವಿದ್ಯುತ್ ಕಂಬ ತೆರವು ಆದೇಶಕ್ಕೆ ಸಿ.ಟಿ ರವಿ ಕೆಂಡ

Public TV
2 Min Read

ಬೆಂಗಳೂರು: ನಮ್ಮೆಲ್ಲರ ಆರಾಧ್ಯ ದೈವ ಹನುಮನ ಜನ್ಮಸ್ಥಳ ಅಂಜನಾದ್ರಿ ಬೆಟ್ಟದ (Anjanadri Betta) ಬಳಿ ಇರುವ ತ್ರಿಶೂಲ-ತಿಲಕದ ಆಕಾರವಿರುವ ವಿದ್ಯುತ್ ದೀಪಗಳು ಧಾರ್ಮಿಕ ಭಾವನೆಗೆ ಧಕ್ಕೆ ತರುತ್ತವೆಯಂತೆ. ಇದು ಯಾವ ಸೀಮೆಯ ಲಾಜಿಕ್? ಪ್ರತಿನಿತ್ಯ ಮೈಕ್ ಹಾಕಿಕೊಂಡು ಊರಿಗೆಲ್ಲಾ ಕೇಳುವ ರೀತಿ ಕೂಗುವುದು ಇತರ ಧರ್ಮಿಯರ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತರುವುದಿಲ್ಲವಾ? ಎಂದು ಗಂಗಾವತಿ ತಹಶೀಲ್ದಾರರ ವಿರುದ್ಧ ಸಿ.ಟಿ ರವಿ (C.T Ravi)ಕಿಡಿಕಾರಿದ್ದಾರೆ.

ವಿವಾದಿತ ವಿದ್ಯುತ್ ಕಂಬಗಳ ತೆರವಿಗೆ ಗಂಗಾವತಿ ತಹಸೀಲ್ದಾರ್ ಆದೇಶ ವಿಚಾರವಾಗಿ ಎಕ್ಸ್‍ನಲ್ಲಿ ಪೋಸ್ಟ್ ಮಾಡಿರುವ ಅವರರು, ಆದೇಶ ನೀಡಿರುವ ತಹಸೀಲ್ದಾರ್ ಅಮಾನತ್ತಿಗೆ ಆಗ್ರಹಿಸಿದ್ದಾರೆ. ಇದನ್ನೂ ಓದಿ: Anjanadri Betta | ಧಾರ್ಮಿಕ ಭಾವನೆಗಳಿಗೆ ಧಕ್ಕೆ – SDPI ದೂರಿನ ಬೆನ್ನಲ್ಲೇ ಗಂಗಾವತಿಯಲ್ಲಿ ಬಿಲ್ಲು, ಬಾಣಗಳಿರುವ ವಿದ್ಯುತ್ ಕಂಬ ತೆರವಿಗೆ ಆದೇಶ

ಹಿಂದೂ ವಿರೋಧಿ ನಿರ್ಣಯ ಅಂಗೀಕರಿಸಿರುವ ಗಂಗಾವತಿಯ ತಹಶೀಲ್ದಾರ್ ಅವರನ್ನು ಕೂಡಲೇ ಅಮಾನತು ಮಾಡಬೇಕು. ಇಷ್ಟರ ಮೇಲೆಯೂ ತಹಶೀಲ್ದಾರ್ ಆದೇಶದಂತೆ ಗಂಗಾವತಿಯಲ್ಲಿ ವಿದ್ಯುತ್ ದೀಪಗಳನ್ನು ತೆರವುಗೊಳಿಸಲು ಮುಂದಾದರೇ ಗಂಗಾವತಿಗೆ ನಾವೇ ಬಂದು ವಿದ್ಯುತ್ ದೀಪಗಳನ್ನು ಅಳವಡಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಗಂಗಾವತಿ ನಗರದ ಜುಲೈನಗರದಿಂದ ರಾಣಾ ಪ್ರತಾಪ್ ವೃತ್ತದವರೆಗೆ ಅಭಿವೃದ್ಧಿಪಡಿಸಿದ ರಸ್ತೆ ಮಧ್ಯೆ ಹಾಕಿರುವ ವಿದ್ಯುತ್ ಕಂಬಗಳ ತೆರವಿಗೆ ತಹಶೀಲ್ದಾರ್ ಆದೇಶಿಸಿದ್ದರು. ಅಷ್ಟೇ ಅಲ್ಲದೇ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ಸಂಸ್ಥೆ ವಿರುದ್ಧವೇ ಪ್ರಕರಣ ದಾಖಲಿಸಲು ಸೂಚಿಸಿದ್ದರು. ಇದನ್ನೂ ಓದಿ: ಪಬ್ಲಿಕ್‌ ಟಿವಿ ಇಂಪ್ಯಾಕ್ಟ್ | ಗಂಗಾವತಿಯಲ್ಲಿ ಬಿಲ್ಲು, ಬಾಣಗಳಿರುವ ವಿದ್ಯುತ್‌ ಕಂಬ ತೆರವು – ಆದೇಶ ಹಿಂಪಡೆದ ತಹಶೀಲ್ದಾರ್‌

Share This Article