ಧರ್ಮಸ್ಥಳ ಕ್ಷೇತ್ರದ ಅಪಪ್ರಚಾರದ ಹಿಂದೆ ಮತಾಂತರ ಮಾಫಿಯಾ: ಸಿ.ಟಿ ರವಿ

Public TV
1 Min Read

– ಮಂಜುನಾಥನ ದರ್ಶನ ಪಡೆದ ವಿಜಯೇಂದ್ರ ಟೀಂ

ಮಂಗಳೂರು: ಧರ್ಮಸ್ಥಳ ಕ್ಷೇತ್ರಕ್ಕೆ ಬಿಜೆಪಿ (BJP) ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ (B.Y Vijayendra), ಎಂಎಲ್‍ಸಿ ಸಿ.ಟಿ ರವಿ (C.T Ravi) ಹಾಗೂ ಶಾಸಕರು ಭೇಟಿ ನೀಡಿ, ದೇವರ ದರ್ಶನ ಪಡೆದಿದ್ದಾರೆ.

ದೇವರ ದರ್ಶನದ ಬಳಿಕ ಮಾಧ್ಯಮಗಳಿಗೆ ಸಿ.ಟಿ ರವಿ ಪ್ರತಿಕ್ರಿಯಿಸಿ, ಬಿಜೆಪಿ ತನಿಖೆಯನ್ನ ಪ್ರಶ್ನಿಸುವುದಿಲ್ಲ. ತನಿಖೆಗೆ ಮುಂಚೆಯೇ ಅಪರಾಧಿ ಸ್ಥಾನ ಕೊಟ್ಟಿದ್ದಾರೆ. ಈ ಷಡ್ಯಂತರ ಹಿಂದೆ ಮತಾಂಧತೆ ಇದೆ. ಇದರ ಹಿಂದೆ ಮತಾಂತರ ಮಾಫಿಯಾ ಇದೆ. ಲಾಭ ಪಡೆಯುವ ಹುನ್ನಾರವು ಸೇರಿದೆ. ನ್ಯಾಯ ಕೊಡಿಸುವ ನೆಪದಲ್ಲಿ ಧರ್ಮಸ್ಥಳವನ್ನು ಟಾರ್ಗೆಟ್ ಮಾಡ್ತಿದ್ದಾರೆ. ಇದರ ಹಿಂದೆ ಇರುವವರ ವಿರುದ್ಧ ಸಿಎಂ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಬುರುಡೆ ಸಿಕ್ಕಿದ್ದೆಲ್ಲಿ? ತಂದಿದ್ದೆಲ್ಲಿ? – ಅನಾಮಿಕ ದೂರುದಾರನ ತೀವ್ರ ವಿಚಾರಣೆ

ಧರ್ಮಸ್ಥಳ ಹಾಗೂ ಧರ್ಮಾಧಿಕಾರಿಗಳ ವಿರುದ್ಧ ಅಪಪ್ರಚಾರ ಮಾಡಿದವರ ವಿರುದ್ಧ ತನಿಖೆ ಅಗಬೇಕು. ಡಿ.ಕೆ ಶಿವಕುಮಾರ್ ಅವರೇ ಇದರ ಹಿಂದೆ ಷಡ್ಯಂತ್ರ ನಡೀತಿದೆ ಎಂದು ಹೇಳಿದ್ದಾರೆ. ಷಡ್ಯಂತ್ರ ಯಾರು ಮಾಡ್ತಿದ್ದಾರೆ? ಈ ವಿಚಾರವನ್ನು ಬಹಿರಂಗಪಡಿಸಬೇಕು. ಈಗ ಸತ್ಯ ಹೇಳುವುದಕ್ಕೆ ಸೂಕ್ತ ಕಾಲ ಎಂದು ಒತ್ತಾಯಿಸಿದರು.

ಅನಾಮಿಕನ ಹಿನ್ನೆಲೆಯೂ ತನಿಖೆ ಆಗಬೇಕು. ಅನಾಮಿಕನ ಹಿಂದಿರುವ ಶಕ್ತಿಯ ಬಗ್ಗೆಯೂ ತನಿಖೆ ಆಗಬೇಕು. ದುರುದಾರ ಹೇಳಿದ ಹಾಗೇ ಗುಂಡಿ ತೋಡಲಾಗಿದೆ. ಅಲ್ಲಿ ಏನು ಸಿಕ್ಕಿದೆ ಎಂದು ಅವರು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳದ ಬುಡಕ್ಕೆ ಕೈ ಹಾಕುವ ಕೆಲ್ಸ ಆಗ್ತಿದೆ: ವಿಶ್ವನಾಥ್‌

Share This Article