ಕದನ ವಿರಾಮ ಘೋಷಣೆಯಾದ ಬೆನ್ನಲ್ಲೇ ಕಚ್ಚಾ ತೈಲ ದರ ದಿಢೀರ್‌ ಭಾರೀ ಕುಸಿತ

1 Min Read

ಲಂಡನ್‌: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರು ಇರಾನ್ (Iran) ಜೊತೆಗೆ 14 ದಿನಗಳ ಕದನ ವಿರಾಮವನ್ನು ಘೋಷಿಸಿದ ಬೆನ್ನಲ್ಲೇ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಭಾರೀ ಕುಸಿತವಾಗಿದೆ.

ಕದನ ವಿರಾಮದ(Ceasefire) ಸುದ್ದಿಯಿಂದಾಗಿ ಕಚ್ಚಾ ತೈಲದ(Crude Oil) ಬೆಲೆಗಳು ಒಂದೇ ದಿನದಲ್ಲಿ ಸುಮಾರು 13% ರಿಂದ 17% ರಷ್ಟು ಕುಸಿದಿವೆ. ಇದು ಕಳೆದ ಆರು ವರ್ಷಗಳಲ್ಲೇ ಒಂದೇ ದಿನ ಕಂಡ ಅತಿ ದೊಡ್ಡ ಕುಸಿತ ಇದಾಗಿದೆ. ಇದನ್ನೂ ಓದಿ: ಅಮೆರಿಕ- ಇರಾನ್‌ ಮಧ್ಯೆ 2 ವಾರಗಳ ಕದನ ವಿರಾಮ ಘೋಷಣೆ: ಟ್ರಂಪ್‌ ಹೇಳಿದ್ದೇನು?

ಅಮೆರಿಕದ ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್ (WTI) ಕಚ್ಚಾ ತೈಲದ ಬೆಲೆ ಸುಮಾರು 16.13 ಡಾಲರ್ (14.3%) ಇಳಿಕೆಯಾಗಿ ಪ್ರತಿ ಬ್ಯಾರೆಲ್‌ಗೆ 96.82 ಡಾಲರ್‌(8,940 ರೂ.) ತಲುಪಿದೆ.

ಜಾಗತಿಕ ಮಾನದಂಡವಾದ ಒಪೆಕ್‌ ದೇಶಗಳ ಬ್ರೆಂಟ್ (Brent) ಕಚ್ಚಾ ತೈಲದ ದರ 14.84 ಡಾಲರ್ (13.6%) ನಷ್ಟು ಕುಸಿದು ಪ್ರತಿ ಬ್ಯಾರೆಲ್‌ಗೆ 94.43 ಡಾಲರ್‌ಗೆ(8,720 ರೂ.) ಇಳಿಕೆಯಾಗಿದೆ

ಈ ಘೋಷಣೆಗೂ ಮುನ್ನ ಯುದ್ಧದ ಭೀತಿಯಿಂದಾಗಿ ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ 117 – 120 ಡಾಲರ್‌ವರೆಗೂ (11 ಸಾವಿರ ರೂ.ವರೆಗೆ)  ಏರಿಕೆಯಾಗಿತ್ತು. ಇದನ್ನೂ ಓದಿ: ಕದನ ವಿರಾಮಕ್ಕೆ ಇರಾನ್‌ ವಿಧಿಸಿದ 10 ಷರತ್ತುಗಳು ಏನು?

ಇರಾನ್ ಹಾರ್ಮುಜ್ ಜಲಸಂಧಿಯನ್ನು (Strait of Hormuz) ತಕ್ಷಣವೇ ಮುಕ್ತಗೊಳಿಸಲು ಇರಾನ್‌ ಒಪ್ಪಿಗೆ ನೀಡಿದ್ದರಿಂದ ಮಾರುಕಟ್ಟೆಯಲ್ಲಿನ ಆತಂಕವನ್ನು ಕಡಿಮೆ ಮಾಡಿದೆ. ಜಗತ್ತಿನ ಸುಮಾರು 20% ತೈಲ ಪೂರೈಕೆ ಈ ಮಾರ್ಗದ ಮೂಲಕವೇ ನಡೆಯುವುದರಿಂದ ಪೂರೈಕೆ ಸಹಜ ಸ್ಥಿತಿಗೆ ಮರಳುವ ಸಾಧ್ಯತೆ ಹಿನ್ನೆಲೆಯಲ್ಲಿ ಬೆಲೆ ಇಳಿದಿದೆ.
Share This Article