ಶಿವಮೊಗ್ಗ: ನಾಡಬಾಂಬ್ (Crude Bomb) ಸಿಡಿದು ವೃದ್ಧೆ ಗಂಭೀರವಾಗಿ ಗಾಯಗೊಂಡ ಘಟನೆ ತೀರ್ಥಹಳ್ಳಿ (Thirthahalli) ತಾಲೂಕಿನ ನಂಟೂರು ಗ್ರಾಮದಲ್ಲಿ ನಡೆದಿದೆ.
ಗಾಯಗೊಂಡ ವೃದ್ಧೆಯನ್ನು ಕಮಲಮ್ಮ (72) ಎಂದು ಗುರುತಿಸಲಾಗಿದೆ. ಹಂದಿ ಶಿಕಾರಿಗೆ ತೋಟದಲ್ಲಿ ಅಡಿಕೆಯೊಳಗೆ ನಾಡಾಬಾಂಬ್ ಇರಿಸಿರುವ ಸಾಧ್ಯತೆ ಇದೆ. ಅದನ್ನು ನಾಯಿ ಕಚ್ಚಿಕೊಂಡು ಮನೆ ಅಂಗಳಕ್ಕೆ ತಂದಿಟ್ಟಿತ್ತು ಎನ್ನಲಾಗಿದೆ. ಅಂಗಳದಲ್ಲಿ ಬಿದ್ದಿದ್ದ ನಾಡಬಾಂಬ್‌ನ್ನು ಮುಟ್ಟಿದಾಗ ಸ್ಫೋಟಗೊಂಡಿದೆ. ಇದನ್ನೂ ಓದಿ: ರಕ್ತಸಿಕ್ತವಾಯ್ತು ಎಣ್ಣೆ ಪಾರ್ಟಿ – ಸ್ನೇಹಿತನಿಂದಲೇ ಸ್ನೇಹಿತನಿಗೆ ಚಾಕು ಇರಿತ..!
ಸ್ಫೋಟದಿಂದ ಮಹಿಳೆಯ ಕೈ ಹಾಗೂ ಬೆರಳುಗಳಿಗೆ ಗಾಯವಾಗಿದೆ. ಗಾಯಾಳುವಿಗೆ ತೀರ್ಥಹಳ್ಳಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ (Shivamogga) ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಆಗುಂಬೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮೊಬೈಲ್ ಕದೀತಿದ್ದ 9 ಅಪ್ರಾಪ್ತರು ಸೇರಿ 13 ಮಂದಿ ಅರೆಸ್ಟ್ – ಕಳುವಾಗಿದ್ದ 75 ಹೈಎಂಡ್ ಮೊಬೈಲ್‌ಗಳು ಸೀಜ್

