ಸಂಜೆ ಟೀ ಜೊತೆ ಸವಿಯಿರಿ ಕ್ರಿಸ್ಪಿ ಬೇಬಿಕಾರ್ನ್ ಫ್ರೈ

Public TV
1 Min Read

ಸಂಜೆ ಚಹಾದ ಜೊತೆ ಏನಾದರೂ ತಿನ್ನಬೇಕು ಎಂದೆನಿಸುವುದು ಸಹಜ. ಕೆಲವರು ಬೇಕರಿ ತಿಂಡಿ ಸವಿಯಲು ಇಚ್ಛಿಸಿದರೇ ಇನ್ನೂ ಕೆಲವರೂ ಮನೆಯಲ್ಲೇ ಗರಿಗರಿಯಾದ ತಿಂಡಿಗಳನ್ನು ತಯಾರಿಸುತ್ತಾರೆ. ಇವತ್ತಿನ ನಮ್ಮ ರೆಸಿಪಿಯಲ್ಲಿ ಮನೆಯಲ್ಲೇ ಸುಲಭವಾಗಿ ತಯಾರಿಸಬಹುದಾದ ಕ್ರಿಸ್ಪಿ ಬೇಬಿಕಾರ್ನ್ ಫ್ರೈ ಯಾವ ರೀತಿ ತಯಾರಿಸಬಹುದು ಎಂಬುದನ್ನು ತಿಳಿಸಿಕೊಡುತ್ತೇವೆ. ಮಕ್ಕಳಿಂದ ಹಿಡಿದು ದೊಡ್ಡವರಿಗೂ ಈ ತಿಂಡಿ ಇಷ್ಟವಾಗುತ್ತದೆ. ಹಾಗಿದ್ರೆ ತಡ ಯಾಕೆ? ಇಂದೇ ನೀವೂ ಈ ರೆಸಿಪಿಯನ್ನು ಟ್ರೈ ಮಾಡಿ.

ಬೇಕಾಗುವ ಸಾಮಗ್ರಿ:
ಬೇಬಿ ಕಾರ್ನ್ – 1 ಬೌಲ್
ಕಡಲೆ ಹಿಟ್ಟು – 1 ಬೌಲ್
ಬ್ರೆಡ್ ಪೌಡರ್ – 1 ಬೌಲ್
ಅಕ್ಕಿ ಹಿಟ್ಟು – 1 ಚಮಚ
ಖಾರದ ಪುಡಿ – 1 ಚಮಚ
ಕಾಳುಮೆಣಸಿನ ಪುಡಿ – ಅರ್ಧ ಚಮಚ
ಉಪ್ಪು – ರುಚಿಗೆ ತಕ್ಕಷ್ಟು

ಮಾಡುವ ವಿಧಾನ:
* ಮೊದಲಿಗೆ ಒಂದು ಪಾತ್ರೆಯಲ್ಲಿ ಕಡಲೆ ಹಿಟ್ಟು, ಕಾಳುಮೆಣಸಿನ ಪುಡಿ, ಖಾರದ ಪುಡಿ, ಅಕ್ಕಿ ಹಿಟ್ಟು, ಉಪ್ಪು ಹಾಗೂ ಸ್ವಲ್ಪ ನೀರು ಹಾಕಿ ದಪ್ಪ ಮಿಶ್ರಣ ಮಾಡಿಕೊಳ್ಳಿ.
* ಬಳಿಕ ಬೇಬಿಕಾರ್ನ್ ಪೀಸ್‌ಗಳನ್ನು ಕಡಲೆಹಿಟ್ಟಿನ ಮಿಶ್ರಣಕ್ಕೆ ಅದ್ದಿ ತೆಗೆದು ಬ್ರೆಡ್ ಪೌಡರ್ ಮೇಲೆ ಉರುಳಿಸಿ.
* ಈಗ ಎಣ್ಣೆ ಕಾಯಲು ಇಟ್ಟು ಕಾದ ಬಳಿಕ ಅದಕ್ಕೆ ಮಿಶ್ರಣವುಳ್ಳ ಬೇಬಿಕಾರ್ನ್ ಹಾಕಿ ಎರಡೂ ಕಡೆ ಗೋಲ್ಡನ್ ಬಣ್ಣ ಬರುವವರೆಗೆ ಬೇಯಿಸಿಕೊಳ್ಳಿ.
* ನಂತರ ಎಣ್ಣೆಯಿಂದ ಬೇಬಿಕಾರ್ನ್ ತೆಗೆದು ಪ್ಲೇಟ್‌ಗೆ ಹಾಕಿ ಬಿಸಿಬಿಸಿಯಾಗಿ ತಿನ್ನಲು ಕೊಡಿ.

Share This Article