ಕಲಬುರಗಿ: ರಾಜ್ಯದಲ್ಲಿ ಸಂಚಲನ ಮೂಡಿಸಿರುವ ವೋಟ್ ಚೋರಿ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳದ (SIT) ಅಧಿಕಾರಿಗಳು ಕಲಬುರಗಿಯಲ್ಲಿ (Kalaburagi) ಮಹತ್ವದ ದಾಖಲೆಗಳನ್ನು ಪತ್ತೆ ಮಾಡಿದ್ದಾರೆ.
ಬೆಂಗಳೂರಿನಿಂದ (Bengaluru) ಕಲಬುರಗಿಗೆ ಆಗಮಿಸಿರುವ ಎಸ್ಐಟಿ ಅಧಿಕಾರಿಗಳು ಬುಧವಾರ ನಗರದ ಐದು ಪ್ರಮುಖ ಸ್ಥಳಗಳ ಮೇಲೆ ದಾಳಿ ನಡೆಸಿ ಶೋಧ ಕಾರ್ಯ ನಡೆಸಿದ್ದಾರೆ. ಈ ವೇಳೆ ಟಿಪ್ಪು ಚೌಕ್ ಬಳಿಯ ಅಸ್ಲಂ ಎಂಬಾತನ ಮನೆಯಲ್ಲಿ ಆಳಂದ ಮತಕ್ಷೇತ್ರಕ್ಕೆ ಸಂಬಂಧಿಸಿದ ಸಾವಿರಾರು ವೋಟರ್ ಐಡಿಗಳ ರಾಶಿ ಪತ್ತೆಯಾಗಿದೆ. ದಾಳಿಯ ಸಂದರ್ಭದಲ್ಲಿ ಅಧಿಕಾರಿಗಳು ಅಸ್ಲಂ ಮನೆಯಿಂದ 15 ಮೊಬೈಲ್ ಫೋನ್‌ಗಳು ಮತ್ತು ಏಳು ಲ್ಯಾಪ್‌ಟಾಪ್‌ಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಮತ ಕಳ್ಳತನದ ಬಗ್ಗೆ ಪ್ರಧಾನಿ ಮೋದಿ, ಅಮಿತ್ ಶಾ ಉತ್ತರ ಕೊಡಲಿ: ಶಿವರಾಜ್ ತಂಗಡಗಿ
ಕಲಬುರಗಿ ನಗರದ ಜಂಜಂ ಕಾಲೋನಿಯಲ್ಲಿರುವ ಅಕ್ರಂ ಎಂಬಾತನ ನಿವಾಸದ ಮೇಲೂ ಎಸ್ಐಟಿ ಅಧಿಕಾರಿಗಳು ದಾಳಿ ನಡೆಸಿ ಶೋಧ ಕಾರ್ಯ ಕೈಗೊಂಡಿದ್ದಾರೆ. ಎಸ್‌ಪಿ ದರ್ಜೆಯ ಅಧಿಕಾರಿಗಳು ಸೇರಿದಂತೆ ಹಲವು ಅಧಿಕಾರಿಗಳು ಈ ದಾಳಿ ಮತ್ತು ಪರಿಶೀಲನೆಯಲ್ಲಿ ಭಾಗವಹಿಸಿದ್ದಾರೆ. ಇದನ್ನೂ ಓದಿ: ವೋಟ್ ಚೋರಿಯಂತಹ ಕೊಳಕು ನುಡಿಗಟ್ಟುಗಳನ್ನು ಬಳಸಬೇಡಿ, ಪುರಾವೆ ನೀಡಿ: ಚುನಾವಣಾ ಆಯೋಗ