ನೆಲಮಂಗಲ: ರಸ್ತೆ ಗುಂಡಿ (Pothole) ತಪ್ಪಿಸಲು ಹೋಗಿ ಟೆಕ್ಕಿಯೊಬ್ಬರು (Techie) ಲಾರಿ ಚಕ್ರಕ್ಕೆ ಸಿಲುಕಿ ಸಾವನ್ನಪ್ಪಿದ ಘಟನೆ ಮಾದನಾಯಕನಹಳ್ಳಿ ಹುಸ್ಕೂರು ಎಪಿಎಂಸಿ ಬಳಿ ನಡೆದಿದೆ.
ಮೃತ ಟೆಕ್ಕಿಯನ್ನು ಪ್ರಿಯಾಂಕ (26) ಎಂದು ಗುರುತಿಸಲಾಗಿದೆ. ಯುವತಿ ಅಣ್ಣನ ಜೊತೆ ಬೈಕ್‍ನಲ್ಲಿ ಎಪಿಎಂಸಿ ಹುಸ್ಕೂರು ರಸ್ತೆಯಿಂದ ಮಾದಾವರಕ್ಕೆ ತೆರಳುತ್ತಿದ್ದರು. ಈ ವೇಳೆ ಅಪಘಾತ (Accident) ನಡೆದಿದೆ. ಇದನ್ನೂ ಓದಿ: ಬೆಂಗಳೂರು ಹೊರವಲಯದಲ್ಲಿ ರಸ್ತೆ ಗುಂಡಿಗೆ ಬಿ.ಕಾಂ ಪದವೀಧರೆ ಬಲಿ
ರಸ್ತೆ ಕಾಮಗಾರಿಯಿಂದ ಈ ರಸ್ತೆ ಹದಗೆಟ್ಟಿದ್ದು, ಗುಂಡಿ ತಪ್ಪಿಸಲು ಪ್ರಿಯಾಂಕ ಸಹೋದರ ಯತ್ನಿಸಿದ್ದಾರೆ. ಈ ವೇಳೆ ಮುಂದೆ ಬಂದ ಲಾರಿ ಕೆಳಗೆ ಯುವತಿ ಬಿದ್ದಿದ್ದಾರೆ. ಈ ವೇಳೆ ಲಾರಿ ಯುವತಿಯ ತಲೆ ಮೇಲೆ ಹರಿದಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಈ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಬೆಂಗಳೂರು | ಸಿಲಿಂಡರ್ ಸ್ಫೋಟ – ಮನೆಯೇ ನೆಲಸಮ, ಓರ್ವ ಸಾವು
