ಬೆಂಗಳೂರು | ಕುಡಿದು ಸಿನಿಮಾ ಸ್ಟೈಲ್‌ಲ್ಲಿ ಡಿವೈಡರ್ ಹಾರಿಸಿದ ಕಾರು ಚಾಲಕ – 8 ಮಂದಿ ಜಸ್ಟ್ ಮಿಸ್!

1 Min Read

ಬೆಂಗಳೂರು: ಕುಡಿದ ಮತ್ತಲ್ಲಿ ಕಾರು ಚಾಲಕ ಅಡ್ಡದಿಡ್ಡಿ ಕಾರು ಚಲಾಯಿಸಿ ಡಿವೈಡರ್‌ ಮೇಲಿಂದ ಹಾರಿಸಿದ (Accident) ಘಟನೆ ಇಂದಿರಾನಗರದ (Indira Nagar) 18ನೇ ಮುಖ್ಯರಸ್ತೆಯಲ್ಲಿ ನಡೆದಿದೆ. ಅದೃಷ್ಟವಶಾತ್‌ ಅಲ್ಲೇ ನಿಂತಿದ್ದ ಯುವಕ, ಯುವತಿಯರ ಗುಂಪು ಹಾಗೂ ಇಬ್ಬರು ಬೈಕ್‌ ಸವಾರರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಹೋಟೆಲ್‌ನಲ್ಲಿ ಊಟ ಮುಗಿಸಿ ಆರು ಮಂದಿ ಹೊರಗೆ ನಿಂತಿದ್ದರು. ಈ ವೇಳೆ ಕಾರು ವೇಗವಾಗಿ ಬಂದು ಡಿವೈಡರ್‌ಗೆ ಡಿಕ್ಕಿ ಹೊಡೆದು ಹೊಟೆಲ್‌ಗೆ ಗುದ್ದಿದೆ. ಜೋರಾದ ಸದ್ದು ಕೇಳುತ್ತಿದ್ದಂತೆ ಯುವಕರು ಪಕ್ಕಕ್ಕೆ ಸರಿದಿದ್ದಾರೆ. ಇದೇ ವೇಳೆ ಇಬ್ಬರು ಬೈಕ್‌ ಸವಾರರು ಸಹ ರಸ್ತೆಯಲ್ಲಿ ಸಾಗಿದ್ದು, ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ. ಈ ಸಿನಿಮಾ ಶೈಲಿಯ ಭೀಕರ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವೈರಲ್‌ ಆಗಿದೆ. ಇದನ್ನೂ ಓದಿ: ಹಿಮಾಚಲ ಪ್ರದೇಶ | ಪ್ರಪಾತಕ್ಕೆ ಉರುಳಿದ ಬಸ್‌ – 8 ಪ್ರಯಾಣಿಕರು ದುರ್ಮರಣ

ಸ್ವಲ್ಪ ಹೆಚ್ಚು ಕಡಿಮೆಯಾಗಿದ್ದರೂ ಇಬ್ಬರು ಬೈಕ್ ಸವಾರು, ರಸ್ತೆ ಬದಿ ನಿಂತಿದ್ದ ಆರು ಮಂದಿಯೂ ಬಲಿಯಾಗುತ್ತಿದ್ದರು. ಅದೃಷ್ಟವಶಾತ್ ದೊಡ್ಡ ದುರಂತ ಕೂದಲೆಳೆ ಅಂತರದಲ್ಲಿ ತಪ್ಪಿದೆ. ಇದನ್ನೂ ಓದಿ: ಫ್ಲೈಓವರ್ ಡಿವೈಡರ್‌ಗೆ ಗುದ್ದಿದ ಮಿನಿ ಟೆಂಪೋ – ತಪ್ಪಿದ ಅನಾಹುತ

Share This Article