ಅಪಘಾತವಾಗಿ ಬಿದ್ದಿದ್ದವನ ಮೊಬೈಲ್‌ನಿಂದ 80 ಸಾವಿರ ದೋಚಿದ್ದ ಖದೀಮರು ಅರೆಸ್ಟ್‌!

1 Min Read

ಮೈಸೂರು: ಅಪಘಾತವಾಗಿ (Accident) ಬಿದಿದ್ದ ವ್ಯಕ್ತಿಯ ಮೊಬೈಲ್‌ನಿಂದ 80,000 ಸಾವಿರ ರೂ. ಹಣ ಕದ್ದಿದ್ದ ಆರೋಪಿಗಳನ್ನು ಮೈಸೂರು (Mysuru) ಪೊಲೀಸರು (Police) ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ರಮೇಶ್ ಮತ್ತು ಮನು ಎಂದು ಗುರುತಿಸಲಾಗಿದೆ. ಮೈಸೂರು ತಾಲೂಕಿನ ಕಡಕೊಳದ ಬಳಿ ಡಿ.19 ರಂದು ಗಣೇಶ್ ಎಂಬವರು ಫ್ಯಾಕ್ಟರಿಯಲ್ಲಿ ಕೆಲಸ ಮುಗಿಸಿ ಮಧ್ಯರಾತ್ರಿ ಮನೆಗೆ ಬರುವಾಗ ಅಪಘಾತವಾಗಿತ್ತು. ಆಸ್ಪತ್ರೆಗೆ ಸೇರಿಸುವ ನೆಪದಲ್ಲಿ ಬಂದ ರಮೇಶ ಮತ್ತು ಮನು, ಗಣೇಶ್ ಮೊಬೈಲ್ ತೆಗೆದುಕೊಂಡು ಯುಪಿಐ (UPI) ಮೂಲಕ 80 ಸಾವಿರ ರೂ. ಹಣ ವರ್ಗಾವಣೆ ಮಾಡಿಕೊಂಡು ಆಸ್ಪತ್ರೆಗೆ ಸೇರಿಸದೇ ಪರಾರಿ ಆಗಿದ್ದರು. ಇದನ್ನೂ ಓದಿ: ಉದ್ಯಮಿ ರಘುನಾಥ್‌ ಹತ್ಯೆ ಕೇಸ್‌ – ಸಿಬಿಐನಿಂದ ಟಿಟಿಡಿ ಮಾಜಿ ಅಧ್ಯಕ್ಷ ಆದಿಕೇಶವುಲು ಮಕ್ಕಳು ಅರೆಸ್ಟ್‌

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಗಣೇಶ್ ಸಹೋದರ ಅಂಕನಾಯಕ. ಗಣೇಶ್ ನನ್ನ ಆಸ್ಪತ್ರೆಗೆ ಸೇರಿಸಿ ಸಿ.ಇ.ಎನ್ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು. ಹಣ ವರ್ಗಾವಣೆ ಮಾಹಿತಿಗ ಸಂಗ್ರಹಿಸಿ, ಮೈಸೂರಿನ ಮಹದೇವಪುರದ ನಿವಾಸಿಗಳಾದ ರಮೇಶ ಮತ್ತು ಮನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಬಂಧಿತರಿಂದ 80 ಸಾವಿರ ಹಣ ಹಾಗೂ ಎರಡು ಮೊಬೈಲ್ ವಶಕ್ಕೆ ಪಡೆಯಲಾಗಿದೆ. ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಮರ್ಯಾದಾ ಹತ್ಯೆ | ಮನೆಗೆ ನುಗ್ಗಿ 7 ತಿಂಗಳ ಗರ್ಭಿಣಿಯನ್ನೇ ಕೊಂದ ತಂದೆ

Share This Article