ಜಾತಿಗಣತಿ ವಿರೋಧದ ನಡುವೆಯೇ ಮತ್ತೆ ಶುರುವಾಗುತ್ತಾ ಪ್ರತ್ಯೇಕ ಲಿಂಗಾಯತ ಧರ್ಮದ ಕೂಗು?

Public TV
1 Min Read

ಬೆಂಗಳೂರು: ಜಾತಿ ಜನಗಣತಿ ವಿರೋಧದ ನಡುವೆಯೇ ಮತ್ತೆ ಪ್ರತ್ಯೇಕ ಲಿಂಗಾಯತ (Lingayat) ಧರ್ಮದ ಕೂಗು ಜೋರಾಗುವ ಸಾಧ್ಯತೆ ಇದೆ. ಹಿಂದೂ ಧರ್ಮ ಅಲ್ಲಾ ಬಸವ ಧರ್ಮ ಎನ್ನುವ ಮೂಲಕ ಮತ್ತೆ ಪ್ರತ್ಯೇಕ ಧರ್ಮದ ಕೂಗು ಮುನ್ನಲೆಗೆ ತರುವ ಸಾಧ್ಯತೆ ಹೆಚ್ಚಿದೆ ಎನ್ನಲಾಗುತ್ತಿದೆ.

ಲಿಂಗಾಯತ ಸಮುದಾಯದ ಜಾತಿ ಜನಗಣತಿ (Caste Census) ವಿರೋಧದ ನಡುವೆಯೇ ಮತ್ತೆ ಪ್ರತ್ಯೇಕ ಧರ್ಮದ ಕೂಗು ಜೋರಾಗುವ ಲಕ್ಷಣಗಳು ಕಾಣುತ್ತಿವೆ. ವೀರ ಶೈವ ಲಿಂಗಾಯತ ಧರ್ಮದ ಕೂಗು ಜೋರಾದರೆ ಜಾತಿಗಣತಿಗೂ ಕಂಟಕ ಎದುರಾಗುವ ಸಾಧ್ಯತೆ ಇದೆ. ವೀರ ಶೈವ ಲಿಂಗಾಯತರ (Veerashaiva Lingayat) ಬಸವ ಧರ್ಮವೇ ಪ್ರತ್ಯೇಕ ಧರ್ಮ ಎಂದರೆ ಜಾತಿಗಣತಿಯ ಸಮೀಕ್ಷೆಯೇ ತಪ್ಪು ಎಂಬ ವಾದವೂ ಶುರು ಅಗಬಹುದು.

ಹೊಸ ದಾಳದ ಮೂಲಕ ಜಾತಿ ಜನಗಣತಿ ವಿರುದ್ಧ ಸಮುದಾಯ ಹೊಸ ಅಸ್ತ್ರವೊಂದನ್ನು ಉರುಳಿಸಿದೆ. ಸಿದ್ದರಾಮಯ್ಯ (Siddaramaiah) ಸರ್ಕಾರದ ಪಾಲಿಗೆ ಮತ್ತೆ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು ಸವಲಾಗುವ ಸಾಧ್ಯತೆ ಇದೆ. ದಾವಣಗೆರೆ ಸಮಾವೇಶದಲ್ಲಿ ಜಾತಿ ಜನಗಣತಿ ವಿರೋಧದ ಜೊತೆಗೆ ಪ್ರತ್ಯೇಕ ಧರ್ಮದ ಕೂಗು ಎದ್ದಿದೆ ಎನ್ನಲಾಗಿದೆ. ಇದನ್ನೂ ಓದಿ: ಶ್ರೀರಂಗಪಟ್ಟಣದ ಕಾವೇರಿ ತೀರದಲ್ಲಿ ಅದ್ಧೂರಿ ಹನುಮ ಸಂಕೀರ್ತನಾ ಯಾತ್ರೆ

2018 ರ ಚುನಾವಣೆಯಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರವೇ ಪ್ರಮುಖವಾಗಿ ಸಿದ್ದರಾಮಯ್ಯ ಸರ್ಕಾರದ ಪಾಲಿಗೆ ಮುಳುವಾಗಿತ್ತು. ಈಗ ಪುನಹ ಅದೇ ಮಾದರಿಯಲ್ಲಿ ಪ್ರತ್ಯೇಕ ಧರ್ಮದ ಬೇಡಿಕೆ ವಿವಾದ ಜೋರಾಗುವ ಲಕ್ಷಣಗಳು ಕಾಣುತ್ತಿವೆ. ಒಟ್ಟಿನಲ್ಲಿ ಈ ಬಾರಿ ಇದನ್ನ ಸರ್ಕಾರ ಹೇಗೆ ನಿರ್ವಹಿಸುತ್ತೆ ಅನ್ನೋದೇ ಸದ್ಯದ ಕುತೂಹಲವಾಗಿದೆ.

Share This Article