48 ವರ್ಷಗಳ ಇತಿಹಾಸದಲ್ಲೇ ಫಸ್ಟ್‌ ಟೈಂ ವಿಶ್ವಕಪ್‌ ಟೂರ್ನಿಯಿಂದಲೇ ವೆಸ್ಟ್‌ ಇಂಡೀಸ್‌ ಔಟ್‌

Public TV
2 Min Read

ಹರಾರೆ: 48 ವರ್ಷಗಳ ವಿಶ್ವಕಪ್‌ ಕ್ರಿಕೆಟ್‌ (Cricket World Cup) ಸುದೀರ್ಘ ಇತಿಹಾಸದಲ್ಲಿಯೇ ಮೊದಲ ಬಾರಿಗೆ ವಿಶ್ವಕಪ್ ಟೂರ್ನಿಯಿಂದಲೇ ವೆಸ್ಟ್ ಇಂಡೀಸ್ (West Indies) ತಂಡ ಔಟ್‌ ಆಗಿದೆ.

ಏಕದಿನ ವಿಶ್ವಕಪ್‍ನ ಅರ್ಹತೆ ಪಡೆಯಲು ನಡೆಯುತ್ತಿರುವ ಸೂಪರ್ ಸಿಕ್ಸ್‌ ಪಂದ್ಯದಲ್ಲಿ ಶನಿವಾರ ವೆಸ್ಟ್ ಇಂಡೀಸ್‌ ವಿರುದ್ಧ ಸ್ಕಾಟ್ಲೆಂಡ್ (Scotland)  7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಎರಡು ಬಾರಿ ಐಸಿಸಿ ಏಕದಿನ ವಿಶ್ವಕಪ್ ಚಾಂಪಿಯನ್ ಆಗಿರುವ ವೆಸ್ಟ್ ಇಂಡೀಸ್ ಸೋಲು ಕ್ರಿಕೆಟ್ ಅಭಿಮಾನಿಗಳನ್ನು ದಂಗುಬಡಿಸಿದೆ.

ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ವೆಸ್ಟ್ ಇಂಡೀಸ್ 43.5 ಓವರ್‌ಗಳಲ್ಲಿ ಕೇವಲ 181 ರನ್‌ಗಳಿಗೆ ಆಲೌಟ್‌ ಆಯ್ತು. ಸ್ಕಾಟ್ಲೆಂಡ್ ತಂಡ ಕೇವಲ 3 ವಿಕೆಟ್ ಕಳೆದುಕೊಂಡು 43.3 ಓವರ್‌ಗಳಲ್ಲಿ185 ರನ್‌ ಹೊಡೆಯುವ ಮೂಲಕ ಜಯ ಸಾಧಿಸಿತು.

ಸ್ಕಾಟ್ಲೆಂಡ್ ಪರ ಆಲ್‍ರೌಂಡರ್ ಆಟವಾಡಿದ ಬ್ರ್ಯಾಂಡನ್ ಮೆಕ್‍ಮುಲ್ಲೆನ್ (Brendon McMullen) ಬೌಲಿಂಗ್‍ನಲ್ಲಿ 3 ವಿಕೆಟ್ ಪಡೆದರೆ ಬ್ಯಾಟಿಂಗ್‍ನಲ್ಲಿ 69 ರನ್ ಗಳಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದುಕೊಂಡರು. ಇದನ್ನೂ ಓದಿ:T20 Blast: ವಿಶ್ವಕಪ್‌ಗೂ ಮುನ್ನ ವಿಶ್ವದಾಖಲೆ ಬರೆದ ಅಫ್ರಿದಿ, ಭಾರತಕ್ಕೆ ಎಚ್ಚರಿಕೆ ಗಂಟೆ ಎಂದ ನೆಟ್ಟಿಗರು

ಸ್ಕಾಟ್ಲೆಂಡ್ ವಿರುದ್ಧ ಸೋಲಿನೊಂದಿಗೆ ವೆಸ್ಟ್ ಇಂಡೀಸ್ ತಂಡವು ಸೂಪರ್ ಸಿಕ್ಸ್ ಹಂತದಲ್ಲೇ ಹೊರ ಬಿದ್ದಿದೆ. ಇದಕ್ಕೂ ಮುನ್ನ ವೆಸ್ಟ್ ಇಂಡೀಸ್ 2017ರ ಚಾಂಪಿಯನ್ಸ್ ಟ್ರೋಫಿ ಮತ್ತು 2022ರ ಟಿ20 ವಿಶ್ವಕಪ್‍ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಗಿತ್ತು.

1975 ಮತ್ತು 1979ರಲ್ಲಿ ಮೊದಲ ಎರಡು ಐಸಿಸಿ ವಿಶ್ವಕಪ್ ಟೂರ್ನಿಗಳಲ್ಲಿ (ICC Worldcup) ವೆಸ್ಟ್ ಇಂಡೀಸ್ ತಂಡ ಚಾಂಪಿಯನ್ ಆಗಿತ್ತು. ಅಲ್ಲದೇ 1983ರಲ್ಲಿ ರನ್ನರ್ ಅಪ್ ಕೂಡ ಆಗಿತ್ತು. ಒಟ್ಟಾರೆ ಇದೀಗ ಐಸಿಸಿ ಏಕದಿನ ವಿಶ್ವಕಪ್‍ನ 13ನೇ ಆವೃತ್ತಿಯಲ್ಲಿ ಅಂದರೆ 48 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ವೆಸ್ಟ್ ಇಂಡೀಸ್ ತಂಡವಿಲ್ಲದೇ ವಿಶ್ವಕಪ್ ಟೂರ್ನಿ ನಡೆಯಲಿದೆ.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್