ಟಿ20 ವಿಶ್ವಕಪ್‌: ಸ್ಕಾಟ್ಲೆಂಟ್‌ ತಂಡದ ಜೆರ್ಸಿಯಲ್ಲಿ ಕರ್ನಾಟಕದ ‘ನಂದಿನಿ’ ಬ್ರ್ಯಾಂಡ್‌ ಲೋಗೋ

Public TV
2 Min Read

ನವದೆಹಲಿ: ಟಿ20 ಕ್ರಿಕೆಟ್‌ ವಿಶ್ವಕಪ್‌ಗಾಗಿ (T20 World Cup 2024) ತನಗೆ ಪ್ರಾಯೋಜಕತ್ವ ನೀಡಿರುವ ಕರ್ನಾಟಕ ಹಾಲು ಒಕ್ಕೂಟದ ‘ನಂದಿನಿ’ (Nandini Brand) ಬ್ರ್ಯಾಂಡ್‌ ಲೋಗೋ ಇರುವ ಜೆರ್ಸಿಯನ್ನು ಸ್ಕಾಟ್ಲೆಂಡ್‌ (Scotland) ತಂಡ ಅನಾವರಣಗೊಳಿಸಿದೆ.

ವೆಸ್ಟ್ ಇಂಡೀಸ್ ಮತ್ತು USA ನಲ್ಲಿ ನಡೆಯುವ ಪಂದ್ಯಾವಳಿ ಜೂ.2 ರಿಂದ ಆರಂಭವಾಗಲಿದೆ. ಸ್ಕಾಟ್ಲೆಂಡ್ ಪುರುಷರ ಪ್ಲೇಯಿಂಗ್ ಶರ್ಟ್‌ಗಳ ಎಡ ತೋಳಿನ ಮೇಲೆ ನಂದಿನಿ ಲೋಗೋ ಇರುತ್ತದೆ. ಲೋಗೋದಲ್ಲಿ ‘ನಂದಿನಿ’ ಎಂದು ಕನ್ನಡ ಮತ್ತು ಇಂಗ್ಲಿಷ್ ಎರಡರಲ್ಲೂ ಬರೆಯಲಾಗಿದೆ. ಇದನ್ನೂ ಓದಿ: IPL 2024: ಆಟಕ್ಕುಂಟು ಲೆಕ್ಕಕ್ಕಿಲ್ಲದ ಪಂದ್ಯದಲ್ಲಿ ಗೆದ್ದು ಬೀಗಿದ ಪಂಜಾಬ್‌ – ಕಿಂಗ್ಸ್‌ಗೆ 5 ವಿಕೆಟ್‌ಗಳ ಜಯ!

ನಂದಿನಿ ಬ್ರಾಂಡ್‌ನಲ್ಲಿ (Nandini Milk) ತನ್ನ ಡೈರಿ ಉತ್ಪನ್ನಗಳನ್ನು ಮಾರಾಟ ಮಾಡುವ ಕರ್ನಾಟಕ ಹಾಲು ಉತ್ಪಾದಕರ ಒಕ್ಕೂಟ (KMF), ಟಿ20 ಕ್ರಿಕೆಟ್ ವಿಶ್ವಕಪ್‌ಗಾಗಿ (T20 World Cup 2024) ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ತಂಡಗಳಿಗೆ ಪ್ರಾಯೋಜಕತ್ವ ನೀಡಿದೆ. ಪ್ರತಿ ತಂಡಕ್ಕೆ ಪ್ರಾಯೋಜಕತ್ವದ ಮೊತ್ತ ಸುಮಾರು 2.5 ಕೋಟಿ ಎಂದು ಕೆಎಂಎಫ್ ಮೂಲಗಳು ತಿಳಿಸಿವೆ.

ಜೂನ್‌ 1 ರಿಂದ 18ರ ವರೆಗೆ ಗುಂಪು ಹಂತದ ಪಂದ್ಯಗಳು ನಡೆಯಲಿದೆ. ಜೂನ್‌ 19 ರಿಂದ 24ರ ವರೆಗೆ ಸೂಪರ್‌-8 ಪಂದ್ಯಗಳು, ಜೂನ್‌ 26 ಮತ್ತು ಜೂನ್‌ 27 ರಂದು ಸೆಮಿಫೈನಲ್‌ ಪಂದ್ಯಗಳು ನಡಯೆಲಿದ್ದು, ಜೂನ್‌ 29ರಂದು ಬಾರ್ಬಡೋಸ್ ಮೈದಾನದಲ್ಲಿ ಫೈನಲ್‌ ಪಂದ್ಯ ನಡೆಯಲಿದೆ. ಗುಂಪು ಹಂತದಲ್ಲಿ ಭಾರತ ಎದುರಿಸುವ 4 ಪಂದ್ಯಗಳ ಪೈಕಿ ಮೂರು ಪಂದ್ಯಗಳು ನ್ಯೂಯಾರ್ಕ್‌ ನಗರದಲ್ಲಿ, ಒಂದು ಪಂದ್ಯ ಫ್ಲೋರಿಡಾ ನಗರದಲ್ಲಿ ನಡೆಯಲಿದೆ. ಗುಂಪು ಹಂತದಲ್ಲಿ ಜೂನ್‌ 5 ರಂದು ಐರ್ಲೆಂಡ್‌ ವಿರುದ್ಧ, ಜೂನ್‌ 12 ರಂದು ಯುಎಸ್‌ಎ ವಿರುದ್ಧ, ಜೂನ್‌ 15 ರಂದು ಕೆನಡಾ ವಿರುದ್ಧ ಭಾರತ ತಂಡ ಸೆಣಸಲಿದೆ. ಇನ್ನೂ ಬಹು ನಿರೀಕ್ಷಿತ ಹೈವೋಲ್ಟೇಜ್‌ ಕದನದಲ್ಲಿ ಜೂನ್‌ 9 ರಂದು ಪಾಕಿಸ್ತಾನ ವಿರುದ್ಧ ನ್ಯೂಯಾರ್ಕ್‌ನ ಅಂಗಳದಲ್ಲಿ ಭಾರತ ಸೆಣಸಲಿದೆ. ಇದನ್ನೂ ಓದಿ: ಹೈವೋಲ್ಟೇಜ್ ಕದನ ವಾಷ್‌ಔಟ್‌ ಆಗುವ ಸಾಧ್ಯತೆ – ಆರ್‌ಸಿಬಿ ಅಭಿಮಾನಿಗಳಲ್ಲಿ ಹೆಚ್ಚಿದ ಆತಂಕ!

ಯಾವ ಗುಂಪಿನಲ್ಲಿ-ಯಾವ ತಂಡಗಳು?
ಗುಂಪು-ಎ:
ಭಾರತ, ಪಾಕಿಸ್ತಾನ, ಐರ್ಲೆಂಡ್‌, ಕೆನಡಾ, ಯುಎಸ್‌ಎ

ಗ್ರೂಪ್‌-ಬಿ:
ಇಂಗ್ಲೆಂಡ್‌, ಆಸ್ಟ್ರೇಲಿಯಾ, ನಮೀಬಿಯಾ, ಸ್ಕಾಟ್‌ಲೆಂಡ್‌, ಒಮನ್‌

ಗ್ರೂಪ್‌-ಸಿ:
ನ್ಯೂಜಿಲೆಂಡ್‌, ವೆಸ್ಟ್‌ ಇಂಡೀಸ್‌, ಅಫ್ಘಾನಿಸ್ತಾನ, ಉಗಾಂಡ, ಪಪುವಾ ನ್ಯೂ ಗಿನಿಯಾ

ಗ್ರೂಪ್‌-ಡಿ:
ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಬಾಂಗ್ಲಾದೇಶ, ನೆದರ್ಲೆಂಡ್ಸ್‌, ನೇಪಾಳ

Share This Article