ಕ್ರೂ ಪಾರ್ಟ್-2 ನಲ್ಲಿ ಕರೀನಾ ನಟಿಸೋದು ಪಕ್ಕಾ

Public TV
1 Min Read

2024ರಲ್ಲಿ ತೆರೆಕಂಡು ಥಿಯೇಟ್ರಿಕಲ್ ಹಿಟ್ ಕಂಡ ಕ್ರೂ ಸಿನಿಮಾದ ಪಾರ್ಟ್-2 (Crew 2 Movie) ತೆರೆಮರೆಯಲ್ಲಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ಸದ್ಯ ಕ್ರೂ ಸಿನಿಮಾದ ಪಾರ್ಟ್-2ನಲ್ಲಿ ನಟಿ ಕರೀನಾ ಕಪೂರ್ (Kareena Kapoor) ನಟಿಸುವುದು ಪಕ್ಕಾ ಆಗಿದೆ.

ಈ ಸಿನಿಮಾದಲ್ಲಿ ನಟಿಸೋದಕ್ಕೆ ಸದ್ಯ ಕರೀನಾ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗ್ತಿದೆ. ಆದ್ರೆ ಇನ್ನೆರಡು ಪಾತ್ರಗಳಲ್ಲಿ ಕಮಾಲ್ ಮಾಡಿದ್ದ ಟಬು ಹಾಗೂ ಕೃತಿ ಸನೋನ್ ನಟಿಸುವ ಬಗ್ಗೆ ಯಾವುದೇ ಮಾಹಿತಿ ಹೊರಹಾಕಿಲ್ಲ ಚಿತ್ರತಂಡ. ಇದನ್ನೂ ಓದಿ: ಮ್ಯಾಕ್ಸ್ ಡೈರೆಕ್ಟರ್‌ಗೆ ಕಾರ್ ಗಿಫ್ಟ್ ಕೊಟ್ಟ ಕಿಚ್ಚ ಸುದೀಪ್

ಕಳೆದ ವರ್ಷ ಬಾಕ್ಸಾಫೀಸ್‌ನಲ್ಲಿ ಸೂಪರ್‌ಹಿಟ್ ಆದ ಕ್ರೂ ಸಿನಿಮಾ ಬಾಲಿವುಡ್‌ನಲ್ಲಿ ಭಾರಿ ಸೌಂಡ್ ಮಾಡಿದೆ. ಏಕ್ತಾ ಕಪೂರ್, ರೀಯಾ ಕಪೂರ್, ಅನಿಲ್ ಕಪೂರ್ ನಿರ್ಮಾಣದಲ್ಲಿ ಮೂಡಿಬಂದ ಈ ಸಿನಿಮಾ ಒಳ್ಳೆಯ ಲಾಭವನ್ನೇ ಮಾಡಿಕೊಟ್ಟಿದೆ. ಹೀಗಾಗಿ, ಈ ಸಿನಿಮಾದ ಪಾರ್ಟ್-2 ನಿರ್ಮಾಣ ಮಾಡಲು ಈ ತಂಡ ಮತ್ತೆ ಮನಸ್ಸು ಮಾಡಿದೆ. ಈ ಸಿನಿಮಾದ ಪಾರ್ಟ್-2ಗೆ ಸದ್ಯ ಕರೀನಾ ಒಬ್ಬರು ಒಪ್ಪಿಗೆ ಹಾಕಿದ್ದಾರೆ.

ಕ್ರೂ ಸಿನಿಮಾದ ಪಾರ್ಟ್-1 ಚಿತ್ರದಲ್ಲಿ ಕರೀನಾ ಜೊತೆ ಕೃತಿ ಸನೋನ್ ಹಾಗೂ ಟಬು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಮುಂದಿನ ದಿನಗಳಲ್ಲಿ ಈ ಸಿನಿಮಾದಲ್ಲಿ ಮತ್ತಿನ್ಯಾರು ನಟಿಸಲಿದ್ದಾರೆ ಕಾದು ನೋಡಬೇಕು. ಕಳೆದ ವರ್ಷ ಕರೀನಾ ಕಪೂರ್ ಅಭಿನಯದ ಕ್ರೂ ಹಾಗೂ ಸಿಂಗಂ ಅಗೈನ್ ಸಿನಿಮಾ ತೆರೆಕಂಡಿದ್ದವು. ಈ ವರ್ಷ ಪಾಟ್-2 ಸಿನಿಮಾ ಮಾಡಲು ಒಪ್ಪಿಕೊಂಡಿದ್ದಾರೆ. ಇದನ್ನೂ ಓದಿ: ಬಿಹಾರ ಮೂಲದ ವ್ಯಕ್ತಿಗಳಿಂದ ಪ್ರಿಯಾಂಕಾ ಉಪೇಂದ್ರ ಮೊಬೈಲ್‌ ಹ್ಯಾಕ್‌!

Share This Article