ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿ ಹೈಕಮಾಂಡ್ ನಿರ್ಧಾರ ಮಾಡುತ್ತದೆ: ಪರಮೇಶ್ವರ್

Public TV
2 Min Read

ಬೆಂಗಳೂರು: ಸಚಿವ ರಾಜಣ್ಣ ಅವರ ಸಿಎಂ ಹೇಳಿಕೆ ಬಗ್ಗೆ ಹೆಚ್ಚು ವಿಶ್ಲೇಷಣೆ ಮಾಡುವ ಅಗತ್ಯ ಇಲ್ಲ ಎಂದು ಗೃಹ ಸಚಿವ ಜಿ ಪರಮೇಶ್ವರ್ (G Parameshwara) ತಿಳಿಸಿದ್ದಾರೆ.

ಪರಮೇಶ್ವರ್ ಸಿಎಂ ಆಗಬೇಕು ಎಂಬ ರಾಜಣ್ಣ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಸಾರ್ವಜನಿಕ ಸಭೆಯಲ್ಲಿ ರಾಜಣ್ಣ ಒಳ್ಳೆ ಮಾತನಾಡಿದ್ದಾರೆ. ಅದನ್ನು ವಿಶ್ಲೇಷಣೆ ಮಾಡುವುದು ಏನಿದೆ? ನಾನು ಸಿಎಂ ಆಗಬೇಕು ಎಂಬುದರ ಸಾಧ್ಯಾಸಾಧ್ಯತೆ ನಿಮಗೇ ಗೊತ್ತಿದೆ ಎಂದರು.

ಬಿಕೆ ಹರಿಪ್ರಸಾದ್ ಅಸಮಾಧಾನ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಾವೆಲ್ಲ ವೈಯಕ್ತಿಕವಾಗಿ ಅನೇಕ ವಿಚಾರ ಪ್ರಸ್ತಾಪ ಮಾಡ್ತೀವಿ. ಅದು ಸರ್ಕಾರ ಹಾಗೂ ಪಕ್ಷದ ಮಾತಾಗುವುದಿಲ್ಲ. ಪಕ್ಷದ ಸಭೆಯಲ್ಲಿ ಚರ್ಚೆಯಾಗಿ ತೀರ್ಮಾನಗಳಾದರೆ ಸಮರ್ಥನೆ ಮಾಡಿಕೊಳ್ಳಬಹುದು. ವೈಯಕ್ತಿಕ ಹೇಳಿಕೆಗಳಿಗೆ ಉತ್ತರ ನೀಡಲು ಸಾಧ್ಯವಿಲ್ಲ ಎಂದರು.

ರಾಜ್ಯದಲ್ಲಿ ಇನ್ನಷ್ಟು ಡಿಸಿಎಂ ಹುದ್ದೆಗಳು ಸೃಷ್ಟಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಹೈಕಮಾಂಡ್‌ನವರು ಏನು ಸರಿ ಅನಿಸುತ್ತದೆ ಹಾಗೆ ಮಾಡ್ತಾರೆ. ಒಬ್ಬರು ಡಿಸಿಎಂ ಇರಬೇಕು ಎಂದು ಹೈಕಮಾಂಡ್‌ನವರೇ ತೀರ್ಮಾನ ಮಾಡಿದ್ದಾರೆ. ಜಾಸ್ತಿ ಮಾಡಬೇಕು ಎಂದರೆ ಅವರೇ ತೀರ್ಮಾನ ಮಾಡಬೇಕು. ನಾನೇನು ಅಂದು ಮನವಿ ಮಾಡಿಲ್ಲ ಈಗಲೂ ಮಾಡಿಲ್ಲ. ಏನೇ ನಿರ್ಧಾರ ಮಾಡುವುದಕ್ಕೆ ಮುಂಚೆ ಹಿರಿಯರ ಜೊತೆಗೆ ಚರ್ಚೆ ಮಾಡ್ತಾರೆ ಎಂದರು. ಇದನ್ನೂ ಓದಿ: ತಮಿಳುನಾಡಿಗೆ ನೀರು ಬಿಟ್ಟ ವಿಚಾರಕ್ಕೆ ಬಿಜೆಪಿ ಕೆಂಡ – ಮಂಡ್ಯದ ಹೆದ್ದಾರಿಯಲ್ಲಿ ಹುರುಳಿ ಬಿತ್ತಿ ಪ್ರತಿಭಟನೆ

ಎಐಸಿಸಿ ಅಧ್ಯಕ್ಷರು ನಮ್ಮವರೇ ಆಗಿರೋದ್ರೀಂದ ತಪ್ಪು ಮಾಹಿತಿ ಕೊಟ್ಟು ಬೇರೆ ಯಾರೂ ಹಾದಿ ತಪ್ಪಿಸುವುದಕ್ಕೆ ಸಾಧ್ಯವಿಲ್ಲ. ಇನ್ನಷ್ಟು ಡಿಸಿಎಂ ಆಯ್ಕೆ ಹೈಕಮಾಂಡ್ ತೀರ್ಮಾನ. ಅದರ ಬಗ್ಗೆ ಮಾಹಿತಿ ಇಲ್ಲ. ಹೈಕಮಾಂಡ್‌ನವರು ಏನು ಸರಿ ಅನಿಸುತ್ತದೆ ಹಾಗೆ ಮಾಡ್ತಾರೆ. ಏನೇ ನಿರ್ಧಾರ ಮಾಡುವುದಕ್ಕೆ ಮುಂಚೆ ಹಿರಿಯರ ಜೊತೆಗೆ ಚರ್ಚೆ ಮಾಡ್ತಾರೆ ಎಂದರು.

ಕಾಂಗ್ರೆಸ್‌ಗೆ ಬರುವವರಿಗೆ ಲಾಸ್ಟ್ ಬೆಂಚ್ ಎಂಬ ಹೇಳಿಕೆ ವಿಚಾರಕ್ಕೆ ಸ್ಪಷ್ಟನೆ ನೀಡಿದ ಅವರು, ಅ ಹೇಳಿಕೆ ಎಸ್‌ಟಿ ಸೋಮಶೇಖರ್‌ಗೆ ಹೇಳಿದ್ದಲ್ಲ. ನಮ್ಮ ಬೈಲಾದಲ್ಲೇ ಅದು ಇದೆ. ಅದನ್ನಷ್ಟೇ ಹೇಳಿದ್ದೇನೆ. ಮುಂದೆ ನಾನೂ ಸೋಮಶೇಖರ್ ಇಬ್ಬರೂ ಒಟ್ಟಿಗೇ ಫರ್ಸ್ಟ್ ಬೆಂಚ್ ಹೋಗೋಣ ಬಿಡಿ ಎಂದರು.  ಇದನ್ನೂ ಓದಿ: ನಾಗರ ಪಂಚಮಿ ಸಂಭ್ರಮ – ಕುಕ್ಕೆ ಸುಬ್ರಹ್ಮಣ್ಯ, ಕುಡುಪು ಅನಂತಪದ್ಮನಾಭ ಕ್ಷೇತ್ರದಲ್ಲಿ ಭಕ್ತಸಾಗರ

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್