ಡಿಕೆ ಬ್ರದರ್ಸ್, ಕುಮಾರಸ್ವಾಮಿ ನನಗೆ ಸಮಾನ ಶತ್ರುಗಳು: ಸಿಪಿ ಯೋಗೇಶ್ವರ್

Public TV
2 Min Read

ರಾಮನಗರ: ನನಗೆ ಎಚ್‍ಡಿ ಕುಮಾರಸ್ವಾಮಿ ಹಾಗೂ ಡಿ.ಕೆ ಬ್ರದರ್ಸ್ ಇಬ್ಬರು 25 ವರ್ಷಗಳಿಂದ ವಿರೋಧವೆ. ನನಗೆ ಇಬ್ಬರು ನಾಯಕರು ಕೂಡ ಸಮಾನ ಶತ್ರುಗಳು ಎಂದು ಬಿಜೆಪಿ ಎಂಎಲ್‍ಸಿ ಸಿಪಿ ಯೋಗೇಶ್ವರ್ ಜೆಡಿಎಸ್ ಹಾಗೂ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.

ರಾಮನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರ ಕ್ಷೇತ್ರದ ಮೇಲಿನ ಉದಾಸೀನತೆ ಅವರ ಆಡಳಿತ ವೈಫಲ್ಯದಿಂದ ಬೇಸತ್ತು ಕಾರ್ಯಕರ್ತರು ಬಿಜೆಪಿ ಸೇರುತ್ತಿದ್ದಾರೆ. ಕ್ಷೇತ್ರದ ಜನಕ್ಕೆ ಕುಮಾರಸ್ವಾಮಿ ಮೇಲೆ ಹತಾಶ ಮನೋಭಾವ ಬೆಳೆದಿದೆ. ಅವರ ನಿಷ್ಕ್ರಿಯ ಆಡಳಿತ ವ್ಯವಸ್ಥೆಯಿಂದ ಜನರು ಬೇಸತ್ತು ಹೋಗಿದ್ದಾರೆ. 3-4 ಮಂದಿ ಕಂಟ್ರಾಕ್ಟರ್ ಮೂಲಕ ತಾಲೂಕು ಆಡಳಿತ ನಡೆಸುವ ಕೆಲಸ ಮಾಡುತ್ತಿದ್ದಾರೆ. ಚನ್ನಪಟ್ಟಣದಲ್ಲಿ ಆಡಳಿತ ವ್ಯವಸ್ಥೆ ಕುಸಿದಿದೆ. ನಾನು ಚನ್ನಪಟ್ಟಣದಲ್ಲಿ ಯಾವುದೇ ಆಪರೇಷನ್ ಕಮಲ ಮಾಡುತ್ತಿಲ್ಲಾ. ಇದು ಚುನಾವಣಾ ಸಂದರ್ಭ ಅಲ್ಲಾ ಹಾಗಾಗಿ ಹಣ ಕೊಟ್ಟು ಕಾರ್ಯಕರ್ತರನ್ನು ಬಿಜೆಪಿಗೆ ಸೆಳೆಯುತ್ತಿಲ್ಲಾ. ಅವರ ಪಕ್ಷದಿಂದ ಬೇಸತ್ತು ಸ್ವಯಂ ಪ್ರೇರಿತರಾಗಿ ಬಿಜೆಪಿಗೆ ಬರುತ್ತಿದ್ದಾರೆ ಎಂದು ಗುಡುಗಿದ್ದಾರೆ. ಇದನ್ನೂ ಓದಿ: ಇಡಿಯಿಂದ ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಅರೆಸ್ಟ್

ಇದೀಗ ಕುಮಾರಸ್ವಾಮಿ ಮುಂಜಾನೆ ಎದ್ದು ತಾಲೂಕಿಗೆ ಬರುತ್ತಿದ್ದಾರೆ. ತಿಥಿ, ಮದುವೆಗಳಿಗೆ ಬರುತ್ತಿದ್ದಾರೆ ಕಳೆದ 4 ವರ್ಷಗಳಿಂದ ಕುಮಾರಸ್ವಾಮಿ ಎಲ್ಲಿ ಹೋಗಿದ್ರು?. ನಾನು ಕ್ಷೇತ್ರ ಪ್ರವಾಸ ಕೈಗೊಂಡ ಮೇಲೆ ಎಚ್‍ಡಿಕೆ ಆಕ್ಟಿವ್ ಆಗಿದ್ದಾರೆ. ನನ್ನ ಹಾಗೂ ಕುಮಾರಸ್ವಾಮಿ ಮಧ್ಯೆ ಯಾವುದೇ ಮಾತುಕತೆ ನಡೆದಿಲ್ಲಾ ಮುಂದೆಯೂ ನಡೆಯುವುದಿಲ್ಲಾ. ನನಗೆ ಯಾವ ಸಚಿವ ಸ್ಥಾನವು ಬೇಡ ಕೇವಲ ಪಕ್ಷ ಸಂಘಟನೆ ಮಾತ್ರ ಸಾಕು. ನನ್ನ ಇತಿಮಿತಿಯಲ್ಲಿ ಎಲ್ಲೆಲ್ಲಾ ಪಕ್ಷ ಸಂಘಟನೆ ಮಾಡಬಹುದು ಅಂತಹ ಕಡೆ ಸಂಘಟನೆ ಮಾಡುತ್ತೇನೆ ಎಂದರು. ಇದನ್ನೂ ಓದಿ: ಕೋರ್ಟ್ ತೀರ್ಪು ಬರೋವರೆಗೂ ಪರೀಕ್ಷೆ ಮುಂದೂಡಿ – ಹಿಜಬ್ ಹೋರಾಟಗಾರ್ತಿಯರು

ಹರ್ಷ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿ, ಸಮಾಜದಲ್ಲಿ ಬೆಳಕು ಕಾಣಬೇಕಿದ್ದ ಒಬ್ಬ ಯುವಕನನ್ನು ಕೊಲೆ ಮಾಡಲಾಗಿದೆ. ಸರ್ಕಾರ ಕೂಡ ಎಲ್ಲಾ ರೀತಿಯ ಕಾನೂನು ಕ್ರಮಗಳನ್ನು ಕೈಗೊಳ್ಳುತ್ತಿದೆ. ನಾನು ವೈಯಕ್ತಿಕವಾಗಿ ಹರ್ಷ ಅವರ ಕುಟುಂಬಕ್ಕೆ ಒಂದು ಲಕ್ಷ ನೀಡುತ್ತೇನೆ. ಅಮಾಯಕ ಯುವಕರಲ್ಲಿ ಭಯ ಹುಟ್ಟಿಸುವಂತದ್ದು ನಾಚಿಕೆ ಗೇಡಿನ ಸಂಗತಿ. ಹಿಂದೂ ಧರ್ಮದ ಪರವಾಗಿ ಕೆಲಸ ಮಾಡುತ್ತಿದ್ದ ಯುವಕ ಅವನು. ಅವನ ಹೋರಾಟವನ್ನು ಹತ್ತಿಕ್ಕಲು ಕೊಲೆ ಮಾಡಲಾಗಿದೆ. ಸರ್ಕಾರ ಈ ವಿಚಾರದಲ್ಲಿ ಇನ್ನಷ್ಟು ಕಠಿಣ ಕ್ರಮಗಳನ್ನ ತಗೆದುಕೊಳ್ಳಬೇಕು. ಹಿಜಬ್ ವಿಚಾರದಲ್ಲಿ ಕಾಂಗ್ರೆಸ್ ನಾಯಕರಿಗೆ ಹಿನ್ನಡೆಯಾಗಿದೆ ಹಾಗಾಗಿ ಸಚಿವ ಈಶ್ವರಪ್ಪ ಮೇಲೆ ಇಲ್ಲ, ಸಲ್ಲದ ಆರೋಪ ಮಾಡಿ ಇಡೀ ಸದನದ ಕಲಾಪವನ್ನೆ ಮೊಟಕು ಗೊಳಿಸುವ ರೀತಿ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

Share This Article
Leave a Comment

Leave a Reply

Your email address will not be published. Required fields are marked *