– ಸಾವಿಗೆ ಕಾರಣವಾದವರ ವಿರುದ್ಧ ಕಠಿಣ ಕ್ರಮ ಎಂದ ಯುಪಿ ಸಿಎಂ
ಲಕ್ನೋ: ಉತ್ತರಪ್ರದೇಶದ (Uttar Pradesh) ಮಥುರಾದಲ್ಲಿ (Mathura) ಗೋರಕ್ಷಕ ಚಂದ್ರಶೇಖರ್ ಅಲಿಯಾಸ್ ‘ಫರ್ಸಾ ವಾಲೆ ಬಾಬಾ’ (Farsa Wale Baba) ಹತ್ಯೆ ನಡೆದಿದ್ದು, ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಮಥುರಾ ಜಿಲ್ಲೆಯ ನವಿಪುರ ಗ್ರಾಮದ ಬಳಿ ಘಟನೆ ನಡೆದಿದೆ. ಬಾಬಾ ಗೋವುಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ಟ್ರಕ್ ಬೈಕ್‌ನಲ್ಲಿ ಬೆನ್ನಟ್ಟಿ ಹೋಗಿ ತಡೆಯಲು ಯತ್ನಿಸಿದ್ದರು. ಆದರೆ ಟ್ರಕ್‌ನಲ್ಲಿದ್ದ ನಾಲ್ವರು ಆರೋಪಿಗಳು ಬೈಕ್ ಮೇಲೆ ಟ್ರಕ್ ಚಲಾಯಿಸಿ ಬಾಬಾರನ್ನು ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈದ್ ಹಬ್ಬದ ನಡುವೆಯೇ ಹತ್ಯೆ ನಡೆದಿದ್ದು, ಮಥುರಾದ ದೆಹಲಿ-ಆಗ್ರಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಉದ್ರಿಕ್ತ ಭಕ್ತರು ಮತ್ತು ಗ್ರಾಮಸ್ಥರು ಭಾರಿ ಪ್ರತಿಭಟನೆ ಹಾಗೂ ಕಲ್ಲು ತೂರಾಟ ನಡೆಸಿದ್ದಾರೆ. ಇದನ್ನೂ ಓದಿ: ಕಾಶಿ ವಿಶ್ವನಾಥ ದೇವಾಲಯದ ಅರ್ಚಕರಿಂದ ಇಶಾ ಸದ್ಗುರು ಸನ್ನಿಧಿಯಲ್ಲಿ ಸಪ್ತಋಷಿ ಆವಾಹನ
ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರತಿಭಟನಾಕಾರರನ್ನು ಸಮಾಧಾನಪಡಿಸಲು ಯತ್ನಿಸಿದ್ದಾರೆ. ಆದರೆ ಉದ್ರಿಕ್ತ ಗುಂಪು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದೆ. ಈ ವೇಳೆ ಅಧಿಕಾರಿಗಳ ವಾಹನಗಳ ಗಾಜುಗಳು ಪುಡಿಯಾಗಿದ್ದು, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಪರಿಸ್ಥಿತಿ ನಿಯಂತ್ರಣಕ್ಕೆ ಅಶ್ರವಾಯು ಪ್ರಯೋಗಿಸಿ, ಲಾಠಿಚಾರ್ಜ್ ಮಾಡಿದ್ದಾರೆ. ಇದನ್ನೂ ಓದಿ: ಇರಾನ್ ಅಧ್ಯಕ್ಷರ ಜೊತೆಗೆ ಪ್ರಧಾನಿ ಮೋದಿ ಮಾತು – ಮೂಲ ಸೌಕರ್ಯಗಳ ಮೇಲಿನ ದಾಳಿಗೆ ಖಂಡನೆ
ಸಿಎಂ ಯೋಗಿ ಆದಿತ್ಯಾನಾಥ್ ಮಥುರಾ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಇದನ್ನೂ ಓದಿ: ಕೇಂದ್ರದ 60% ಉಚಿತ ಸೀಟು ಆಯ್ಕೆಗೆ ವಿಮಾನಯಾನ ಕಂಪನಿಗಳ ವಿರೋಧ

