ಭಾರತದ ಎಚ್ಚರಿಕೆ ಬೆನ್ನಲ್ಲೇ ಇಂಗ್ಲೆಂಡ್‍ನ ಅನುಮೋದಿತ ಲಸಿಕೆಗಳ ಪಟ್ಟಿಗೆ ಕೋವಿಶೀಲ್ಡ್ ಸೇರ್ಪಡೆ

Public TV
2 Min Read

– ಎಚ್ಚರಿಕೆ ಬೆನ್ನಲ್ಲೇ ಪ್ರಯಾಣ ನಿಯಮ ಸಡಿಲಿಸಿದ ಬ್ರಿಟನ್

ಲಂಡನ್: ಭಾರತದ ಕೋವಿಶೀಲ್ಡ್ ಲಸಿಕೆಗೆ ಮಾನ್ಯತೆ ನೀಡುವುದಿಲ್ಲ, ಎರಡು ಡೋಸ್‍ಗಳನ್ನು ಪಡೆದವರಿಗೂ ಇಂಗ್ಲೆಂಡ್‍ನಲ್ಲಿ ಕ್ವಾರಂಟೈನ್ ಕಡ್ಡಾಯ ಎಂದಿದ್ದ ಇಂಗ್ಲೆಂಡ್ ಇದೀಗ ಕೋವಿಶೀಲ್ಡ್ ಕೂಡ ಅನುಮೋದಿತ ಲಸಿಕೆ ಎಂದು ಹೊಸ ನಿಯಮವನ್ನು ಜಾರಿಗೊಳಿಸಿದೆ.

ಭಾರತೀಯರು 2 ಡೋಸ್ ಕೋವಿಶೀಲ್ಡ್ ಲಸಿಕೆ (Covishield vaccine) ಪಡೆದುಕೊಂಡಿದ್ದರೂ 10 ದಿನಗಳ ಕ್ವಾರಂಟೈನ್(Quarantine) ಆಗಬೇಕು ಎಂಬ ನಿಯಮ ಜಾರಿಗೊಳಿಸಿದ್ದ ಬ್ರಿಟನ್, ಭಾರತ ಸರ್ಕಾರದ ಆಕ್ಷೇಪದ ಬೆನ್ನಲ್ಲೇ ಪ್ರಯಾಣಿಕರ ನಿಯಮವನ್ನು(Travel Rules) ಸಡಿಲಗೊಳಿಸಿದೆ. AstraZeneca Covishield ಲಸಿಕೆಗೆ ಮಾನ್ಯತೆ ನೀಡಿದೆ.

ಇಂಗ್ಲೆಂಡ್‍ನ ಹೊಸ ನಿಯಮ: ಆಕ್ಸ್‌ಫರ್ಡ್- ಆಸ್ಟ್ರಾಜೆನಿಕಾ, ಫೈಜರ್- ಬಯೋಎನ್‍ಟೆಕ್ ಅಥವಾ ಮಾಡರ್ನಾದ ಡಬಲ್ ಡೋಸ್ ಲಸಿಕೆಯ ಎರಡೂ ಡೋಸ್ ಪಡೆದವರು ಅಥವಾ ಸಿಂಗಲ್ ಡೋಸ್‍ನ ಜಾನ್ಸನ್ ಆ್ಯಂಡ್ ಜಾನ್ಸನ್ ಲಸಿಕೆ ಪಡೆದವರನ್ನು ಮಾತ್ರ ಸಂಪೂರ್ಣವಾಗಿ ಲಸಿಕೆ ಪಡೆದವರು ಎಂದು ಸೂಚಿಸಲಾಗಿತ್ತು. ಇದೀಗ ಆ ಪಟ್ಟಿಗೆ ಕೋವಿಶೀಲ್ಡ್ ಅನ್ನು ಕೂಡ ಸೇರಿಸಲಾಗಿದೆ. ಆದರೆ ಕೋವಿಶೀಲ್ಡ್ ಲಸಿಕೆ ಪಡೆದ ಭಾರತೀಯರು ಇಂಗ್ಲೆಂಡ್‍ನಲ್ಲಿ ಕ್ವಾರಂಟೈನ್ ಆಗಬೇಕಾದುದು ಮಾತ್ರ ಕಡ್ಡಾಯವಾಗಿದೆ.

ಕಡ್ಡಾಯ ಯಾಕೆ?
ಲಸಿಕೆಗೆ ಅನುಮತಿ ನೀಡಿದರೂ ಲಸಿಕೆಯ ಪ್ರಮಾಣ ಪತ್ರದ ಬಗ್ಗೆ ಗೊಂದಲವಿದೆ. ಈ ಕಾರಣಕ್ಕೆ 10 ದಿನ ಕ್ವಾರಂಟೈನ್ ನಿಯಮವನ್ನು ಜಾರಿ ಮಾಡಲಾಗಿದೆ ಎಂದು ವರದಿಯಾಗಿದೆ.

ಇಂಗ್ಲೆಂಡ್ ಸರ್ಕಾರದ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿದ್ದ ವಿದೇಶಾಂಗ ಇಲಾಖೆ ಕಾರ್ಯದರ್ಶಿ ಹರ್ಷವರ್ಧನ್ ಶ್ರೀಂಘಾಲ್, ಈ ಬಗ್ಗೆ ಇಂಗ್ಲೆಂಡ್ ವಿದೇಶಾಂಗ ಇಲಾಖೆ ಸಚಿವರ ಜೊತೆ ಭಾರತೀಯ ವಿದೇಶಾಂಗ ಸಚಿವ ಜೈಶಂಕರ್ ಮಾತನಾಡಿದ್ದಾರೆ. ಅವರು ಈ ಸಮಸ್ಯೆಯನ್ನು ಆದಷ್ಟು ಬೇಗ ಪರಿಹರಿಸುವ ಕೆಲ ಭರವಸೆ ನೀಡಿದ್ದಾರೆ. ನಾವು ನಮ್ಮ ಸ್ನೇಹಿ ರಾಷ್ಟ್ರಗಳ ಲಸಿಕೆಗೆ ಮಾನ್ಯತೆ ನೀಡಿದ್ದೇವೆ. ಇವೆಲ್ಲವೂ ಪರಸ್ಪರ ಮಾನ್ಯತೆ ನೀಡುವ ಕ್ರಮಗಳು. ಒಂದು ವೇಳೆ ನಮಗೆ ತೃಪ್ತಿ ಆಗದಿದ್ದರೆ ಕ್ರಮಕ್ಕೆ ಅವಕಾಶ ಇದೆ. ನಾವು ಕೂಡ ಇಂಗ್ಲೆಂಡ್‍ನ ಲಸಿಕೆಗೆ ಮಾನ್ಯತೆ ನೀಡದಿರಲು ಸಾಧ್ಯವಿದೆ ಎನ್ನುವ ಮೂಲಕ ಇಂಗ್ಲೆಂಡ್‍ಗೆ ಪರೋಕ್ಷ ಎಚ್ಚರಿಕೆ ರವಾನಿಸಿದ್ದರು.

ಈ ಹಿಂದೆ ಭಾರತದಿಂದ ಲಸಿಕೆ ಪಡೆದು ಹೋದವರು ಬ್ರಿಟನ್‍ನಲ್ಲಿ 10 ದಿನ ಕಡ್ಡಾಯವಾಗಿ ಕ್ವಾರಂಟೈನ್ ಆಗಬೇಕಾಗಿತ್ತು. ಬ್ರಿಟನ್ (Oxford AstraZeneca) ಆಕ್ಸ್‌ಫರ್ಡ್- ಆಸ್ಟ್ರಾಜೆನೆಕಾ  ಕಂಪನಿ ಅಭಿವೃದ್ಧಪಡಿಸಿರುವ ಕೋವಿಶೀಲ್ಡ್ ಲಸಿಕೆ (Covishield vaccine)ಯನ್ನು ತೆಗೆದುಕೊಂಡಿದ್ದರೂ ಭಾರತೀಯರನ್ನು ಲಸಿಕೆ ಪಡೆದಿಲ್ಲದವರು ಎಂದು ಪರಿಗಣಿಸುವ ಬ್ರಿಟಿಷ್ ಸರ್ಕಾರದ ನಿಮಯ ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಲಸಿಕೆ ಪಡೆದ್ರೂ ಭಾರತೀಯರು ಕ್ವಾರಂಟೈನ್- ಬ್ರಿಟನ್ ಸರ್ಕಾರದ ಹೊಸ ನಿಯಮ

ಹಳದಿ ಹಸಿರು ಹಾಗೂ ಕೆಂಪು ದೇಶಗಳು ಎಂದು ವಿದೇಶಗಳನ್ನು ಕೋವಿಡ್ ಸುರಕ್ಷತೆ ದೃಷ್ಟಿಯಿಂದ ಪಟ್ಟಿಯನ್ನು ಮಾಡಲಾಗಿದೆ. ಅದರಲ್ಲಿ ಹಳದಿ ಪಟ್ಟಿಯಲ್ಲಿ ಭಾರತವಿದೆ. ಈಗ ಅ.4ರಿಂದ ಅನ್ವಯವಾಗುವಂತೆ ಹೊಸ ನಿಯಮ ಜಾರಿಗೊಳಿಸಲಾಗಿದ್ದು, ಅದರಲ್ಲಿ ಹಳದಿ, ಹಸಿರು ಪಟ್ಟಿ ರದ್ದುಪಡಿಸಿ, ಎಲ್ಲಾ ದೇಶಗಳನ್ನೂ ಕೆಂಪು ಪಟ್ಟಿಗೆ ಸೇರಿಸಲಾಗಿ ಭಾರತ, ಆಫ್ರಿಕಾ, ದಕ್ಷಿಣ ಆಫ್ರಿಕಾ, ಯುಎಇ, ಟರ್ಕಿ, ಜೋರ್ಡನ್, ಥಾಯ್ಲೆಂಡ್, ರಷ್ಯಾ ಇದರಲ್ಲಿ ಈ ದೇಶದ ಜನ 2 ಡೋಸ್ ಲಸಿಕೆ ಪಡೆದು ಬ್ರಿಟನ್ನಿಗೆ ತೆರಳಿದರೂ 10 ದಿನ ಕ್ವಾಂಟೈನ್ ಕಡ್ಡಾಯ ಮಾಡಲಾಗಿತ್ತು. ಆದರೆ ಎಲ್ಲಡೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆ ಇದೀಗ ತನ್ನ ನಿಯಮವನ್ನು ಸಡಿಲ ಗೊಳಿಸಿದೆ.

Share This Article
Leave a Comment

Leave a Reply

Your email address will not be published. Required fields are marked *