ಆಸ್ಪತ್ರೆ, ಕ್ಲಿನಿಕ್‌ಗಳಲ್ಲೂ ಕೋವಿಶೀಲ್ಡ್‌, ಕೋವ್ಯಾಕ್ಸಿನ್‌ ಲಭ್ಯ

Public TV
1 Min Read

ನವದೆಹಲಿ: ಭಾರತ ಔಷಧ ನಿಯಂತ್ರಕದಿಂದ ಕೋವಿಡ್‌ ವಿರೋಧಿ ಲಸಿಕೆ ಕೋವಿಶೀಲ್ಡ್‌ ಮತ್ತು ಕೋವ್ಯಾಕ್ಸಿನ್‌ ಇನ್ಮುಂದೆ ಮಾರುಕಟ್ಟೆಯಲ್ಲಿ ಸಿಗಲಿವೆ ಎಂದು ಮೂಲಗಳು ತಿಳಿಸಿವೆ.

ಈ ಲಸಿಕೆಗಳ ಮಾರುಕಟ್ಟೆ ಮಾರಾಟವನ್ನು ʻಹೊಸ ಔಷಧಗಳು ಮತ್ತು ಕ್ಲಿನಿಕಲ್‌ ಪ್ರಯೋಗಗಳ ನಿಯಮಗಳು, 2019’ರ ಅಡಿಯಲ್ಲಿ ಅನುಮೋದಿಸಲಾಗಿದೆ. ಮಾರುಕಟ್ಟೆಯಲ್ಲಿ ಲಭ್ಯವೆಂದ ಮಾತ್ರಕ್ಕೆ ಅಂಗಡಿಗಳಲ್ಲೆಲ್ಲ ಸಿಗುತ್ತೆ ಎಂದರ್ಧವಲ್ಲ. ಈ ಎರಡೂ ಲಸಿಕೆಗಳು ಆಸ್ಪತ್ರೆಗಳು ಮತ್ತು ಕ್ಲಿನಿಕ್‌ಗಳಲ್ಲಿ ಲಭ್ಯವಿರುತ್ತವೆ ಎಂದು ಸ್ಪಷ್ಟಪಡಿಸಲಾಗಿದೆ. ಇದನ್ನೂ ಓದಿ: ರಾಜ್ಯದಲ್ಲಿ ಇಂದು 185 ಓಮಿಕ್ರಾನ್ ಕೇಸ್ ಪತ್ತೆ – ಒಟ್ಟು ಪ್ರಕರಣಗಳ ಸಂಖ್ಯೆ 1,115ಕ್ಕೆ ಏರಿಕೆ

ಕೋವ್ಯಾಕ್ಸಿನ್‌ ತಯಾರಕಾ ಸಂಸ್ಥೆ ಭಾರತ್‌ ಬಯೋಟೆಕ್‌ ಮತ್ತು ಕೋವಿಶೀಲ್ಡ್‌ ತಯಾರಕಾ ಸಂಸ್ಥೆ ಸೀರಂ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ, ಕ್ಲಿನಿಕಲ್‌ ಪ್ರಯೋಗಕ್ಕೆ ಸಂಬಂಧಿಸಿದ ಡೇಟಾವನ್ನು ಭಾರತ ಔಷಧ ನಿಯಂತ್ರಕಕ್ಕೆ ಸಲ್ಲಿಸಿವೆ. ಕೋವಿಡ್-‌19 ವಿಷಯ ತಜ್ಞರ ಸಮಿತಿಯು ಜ.19 ರಂದು ಅನುಮೋದನೆಯನ್ನು ಶಿಫಾರಸು ಮಾಡಿದ ನಂತರ ಮಾರುಕಟ್ಟೆಗೆ ಮಾರಾಟಕ್ಕೆ ಅನುಮತಿಸಲಾಗಿದೆ.

ಕೋವಿಶೀಲ್ಡ್‌ಗೆ ನಿಯಮಿತ ಮಾರುಕಟ್ಟೆ ಅಧಿಕಾರವನ್ನು ಕೋರಿ ಅ.25 ರಂದು ಡಿಸಿಜಿಐಗೆ ಸೀರಮ್‌ ಇನ್‌ಸ್ಟಿಟ್ಯೂಟ್‌ ಅರ್ಜಿ ಸಲ್ಲಿಸಲಾಗಿತ್ತು. ಅಂತೆಯೇ ಕೋವ್ಯಾಕ್ಸಿನ್‌ಗೆ ನಿಯಮಿತ ಮಾರುಕಟ್ಟೆ ಅನುಮೋದನೆಗೆ ಭಾರತ್‌ ಬಯೋಟೆಕ್‌ ಅರ್ಜಿ ಸಲ್ಲಿಸಿತ್ತು. ಇದನ್ನೂ ಓದಿ: ಕೊರೊನಾ ನಿಯಮ ಮರೆತು ಕ್ರಿಕೆಟ್ ಪಂದ್ಯಾಟ – ಬ್ಯಾಟ್‍ಬೀಸಿ ಸಂಭ್ರಮಿಸಿದ ಜಮೀರ್

ಭಾರತದಲ್ಲಿ ಈವರೆಗೆ ಕೋವಿಡ್‌ ಲಸಿಕೆ ಅಭಿಯಾನದಲ್ಲಿ 163.84 ಕೋಟಿ ಡೋಸ್‌ ನೀಡಲಾಗಿದೆ. ದೇಶದಲ್ಲಿ ಶೇ.72 ರಷ್ಟು ವಯಸ್ಕರು ಲಸಿಕೆಗಳ ಎರಡೂ ಡೋಸ್‌ಗಳನ್ನು ಪಡೆದುಕೊಂಡಿದ್ದಾರೆ. 15-18 ವಯಸ್ಸಿನ ಮಕ್ಕಳಲ್ಲಿ ಶೇ.52 ಮಂದಿ ಮೊದಲ ಡೋಸ್‌ ಪಡೆದುಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *