ಸೆಂಟ್ರಲ್ ಜೈಲನ್ನೇ ಕಂಟ್ರೋಲ್ ಮಾಡೋಕೆ ಸ್ಕೆಚ್ ಹಾಕಿದ್ದ ಉಗ್ರ ಜುಲ್ಫಿಕರ್ ಜೈಲಿಂದ ಶಿಫ್ಟ್

Public TV
1 Min Read

ಕಲಬುರಗಿ: ಇಲ್ಲಿನ ಸೆಂಟ್ರಲ್ ಜೈಲನ್ನೇ (Kalaburagi jail) ತನ್ನ ಕಂಟ್ರೋಲ್‍ನಲ್ಲಿ ಇಟ್ಟುಕೊಳ್ಳಲು ಯತ್ನಿಸಿದ್ದ ಶಂಕಿತ ಉಗ್ರ ಜುಲ್ಫಿಕರ್ ಸೇರಿ ಆರು ಜನ ಕೈದಿಗಳ ಸ್ಥಳಾಂತರಕ್ಕೆ ಕಾರಾಗೃಹ ಇಲಾಖೆ ಮುಂದಾಗಿದೆ.

ಕೈದಿಗಳನ್ನು ರಾಜ್ಯದ ವಿವಿಧ ಜೈಲ್‍ಗಳಿಗೆ ಸ್ಥಳಾಂತರ ಮಾಡಲು ನ್ಯಾಯಾಲಯ ಒಪ್ಪಿಗೆ ನೀಡಿದೆ. ಜುಲ್ಫಿಕರ್ 2013ರಲ್ಲಿ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ನಡೆದ ಬಾಂಬ್ ಬ್ಲಾಸ್ಟ್ ಪ್ರಕರಣದ ಆರೋಪಿಯಾಗಿದ್ದಾನೆ. ಇನ್ನೂ ಈತನ ಜೊತೆ ಶಿವಮೊಗ್ಗದ ರೌಡಿಶೀಟರ್ ಬಚ್ಚನ್ ಸೇರಿ ಆರು ಜನ ವರ್ಗಾವಣೆಗೆ ಇಲಾಖೆ ಮುಂದಾಗಿದೆ.

ಉಗ್ರ ಜುಲ್ಫಿಕರ್ ಬೇರೆ ಜೈಲಿಗೆ ಶಿಫ್ಟ್ ಮಾಡಲು ಎನ್‍ಐಎ ಕೋರ್ಟ್‍ನ ಅನುಮತಿ ಪಡೆಯಲಾಗಿದೆ. ಶಿವಮೊಗ್ಗ ರೌಡಿ ಶೀಟರ್ ಬಚ್ಚನ್ ಸ್ಥಳಾಂತರಕ್ಕೆ ಶಿವಮೊಗ್ಗ ಕೋರ್ಟ್ ಅನುಮತಿ ನೀಡಿದೆ. ಆರೋಪಿಗಳು ಕಲಬುರಗಿ ಸೆಂಟ್ರಲ್ ಜೈಲಿನ ವಾತವರಣವನ್ನೆ ಹಾಳು ಮಾಡಿದ್ದರು. ಜೈಲು ಅಧಿಕಾರಿಗಳ ವಿಡಿಯೋಗಳನ್ನು ಇಟ್ಟುಕೊಂಡು ಬ್ಲ್ಯಾಕ್‍ಮೇಲ್ ಮಾಡಿ ಹೈಫೈ ಜೀವನ ನಡೆಸುತ್ತಿದ್ದರು. ಜೈಲಿಗೆ ಹೊಸ ಮುಖ್ಯ ಅಧೀಕ್ಷರು ಬರುತ್ತಿದ್ದಂತೆ ಇವರ ಹೈಫೈ ಲೈಫ್‍ಗೆ ಬ್ರೇಕ್ ಬಿದ್ದಿತ್ತು.

ಇದರಿಂದ ಜೈಲಿನೊಳಗೆ ಆರೋಪಿಗಳು ಪ್ರತಿಭಟನೆ ಮಾಡಿದ್ದರು. ಅಲ್ಲದೇ ಜೈಲು ಅಧೀಕ್ಷಕರ ಕಾರು ಸ್ಫೋಟಿಸೋ ಬೇದರಿಕೆ ಹಾಕಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಜೈಲು ಮುಖ್ಯ ಅಧೀಕ್ಷಕಿ ಡಾ.ಅನಿತಾ ಅವರು ಆರೊಪಿಗಳನ್ನು ಬೇರೆ ಜೈಲುಗಳಿಗೆ ಸ್ಥಳಾಂತರಿಸಲು ನಿರ್ಧರಿಸಿದ್ದರು.

Share This Article