ಮುನಿರತ್ನ ವಿರುದ್ಧದ ಕೇಸ್‌ಗಳು ಅಧಿಕೃತವಾಗಿ ಎಸ್‌ಐಟಿಗೆ ವರ್ಗ

Public TV
1 Min Read

ಬೆಂಗಳೂರು: ಬಿಜೆಪಿ ಶಾಸಕ ಮುನಿರತ್ನ (Munirathna) ವಿರುದ್ಧದ ಮೂರು ಪ್ರಕರಣಗಳ ಕೇಸ್ ಫೈಲ್ ಅಧಿಕೃತವಾಗಿ ವಿಶೇಷ ತನಿಖಾ ತಂಡ (SIT) ವರ್ಗವಾಗಿದೆ. ಹೀಗಾಗಿ ಬಿಕೆ ಸಿಂಗ್ ನೇತೃತ್ವದ ಎಸ್‌ಐಟಿ, ನ್ಯಾಯಾಂಗ ಬಂಧನದಲ್ಲಿರುವ ಮುನಿರತ್ನ ಅವರನ್ನು ಬಾಡಿವಾರೆಂಟ್ ಮೂಲಕ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲು ಮುಂದಾಗಿದೆ.

ಇಂದು ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯಕ್ಕೆ ಈ ಸಂಬಂಧ ಎಸ್‌ಐಟಿ ಅರ್ಜಿ ಹಾಕಿಕೊಂಡಿದೆ. ಈ ಅರ್ಜಿ ವಿಚಾರಣೆ ನಾಳೆ ನಡೆಯಲಿದೆ. ಇದನ್ನೂ ಓದಿ: ಜಾತ್ಯಾತೀತತೆ ಯುರೋಪಿಯನ್ ಕಾನ್ಸೆಪ್ಟ್: ಭಾರತದಲ್ಲಿ ಸೆಕ್ಯುಲರಿಸಂ ಅಗತ್ಯವಿಲ್ಲ: ತಮಿಳುನಾಡು ರಾಜ್ಯಪಾಲ ರವಿ

ಈ ಮಧ್ಯೆ ಕಗ್ಗಲಿಪುರದಲ್ಲಿ ದಾಖಲಾಗಿರುವ ರೇಪ್ ಕೇಸ್ (Rape Case) ಸಂಬಂಧ ಮುನಿರತ್ನ ಸಲ್ಲಿಸಿರುವ ಜಾಮೀನು ಅರ್ಜಿಯ (Bail Plea) ವಿಚಾರಣೆ ಬುಧವಾರಕ್ಕೆ ಮುಂದೂಡಿಕೆಯಾಗಿದೆ.  ಮುನಿರತ್ನ ಪ್ರಕರಣಗಳನ್ನು ಎಸ್‌ಐಟಿಗೆ ವಹಿಸಿರೋದನ್ನು ಗೃಹ ಸಚಿವ ಪರಮೇಶ್ವರ್‌ ಸಮರ್ಥನೆ ಮಾಡಿಕೊಂಡಿದ್ದಾರೆ.

ಮುನಿರತ್ನ ವಿಚಾರದಲ್ಲಿ ಸರ್ಕಾರ ಪೂರ್ವಾಗ್ರಹಪೀಡಿತವಾಗಿದೆ. ಅವರನ್ನು ರಾಜಕೀಯವಾಗಿ ಮುಗಿಸಲು ಸಂಚು ಮಾಡಿದೆ ಎಂದು ಬಿಜೆಪಿ ಪರಿಷತ್‌ ಸದಸ್ಯ ಸಿಟಿ ರವಿ ಆರೋಪಿಸಿದ್ದಾರೆ.

 

Share This Article