ಮದುವೆ ಆಗಲು ಕಳ್ಳತನ ಮಾಡಿದ್ದ ಪ್ರೇಮಿಗಳು ಅರೆಸ್ಟ್ – ತಾಯಿ ಕೆಲಸ ಮಾಡ್ತಿದ್ದ ಮನೆಗೆ ಕನ್ನ ಹಾಕಿದ ಮಗ

Public TV
1 Min Read

ಬೆಂಗಳೂರು: ಮದುವೆ ಆಗಲು ಮನೆ ಕಳ್ಳತನ ಮಾಡಿದ್ದ ಫ್ರಾಡ್ ಪ್ರೇಮಿಗಳನ್ನ ಆಡುಗೊಡಿ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನಲ್ಲಿ (Bengaluru) ಕಳ್ಳತನ ಮಾಡಿ ತಮಿಳುನಾಡಿನ ಚೆನೈನಲ್ಲಿ ಸೆಟಲ್ ಆಗಿದ್ದ ನಾರಾಯಣ ಸ್ವಾಮಿ, ನವೀನಾ ಎಂಬ ಫ್ರಾಡ್ ಪ್ರೇಮಿಗಳನ್ನ ಪೊಲೀಸರು ಬಂಧಿಸಿದ್ದಾರೆ. ಐನಾತಿ ನಾರಾಯಣ ಸ್ವಾಮಿಗೆ ಮದುವೆ ಆಗಿದ್ದು, ಮೊದಲ ಹೆಂಡತಿಗೆ ಪ್ಯಾರಲಿಸಿಸ್ ಇರುತ್ತೆ. ಆ ಕಾರಣಕ್ಕೆ ಬೇರೆ ಮದುವೆಯಾಗಲು ಹುಡುಗಿ ಹುಡುಕುತ್ತಿದ್ದ.

ಇತ್ತ ನವೀನಾ ಕೂಡ ಗಂಡನಿಗೆ ಪ್ಯಾರಲಿಸಿಸ್ ಆಗಿದ್ದರಿಂದ, ಜೋಡಿ ಆ್ಯಪ್ನಲ್ಲಿ ಬೇರೊಬ್ಬನ ಹುಡುಕಾಟ ಮಾಡುತ್ತಿದ್ದಳು. ಆ ನಡುವೆ ಇಬ್ಬರು ಪರಿಚಯವಾಗಿ ಪರಸ್ಪರ ಪ್ರೀತಿ ಮಾಡಿ ಮದುವೆ ಮಾಡಿಕೊಳ್ಳುವುದಕ್ಕೆ ತೀರ್ಮಾನ ಮಾಡಿದ್ದಾರೆ.

ಮದುವೆ ಹಣಕಾಸಿನ ಸಮಸ್ಯೆ ಇದ್ದ ಕಾರಣ ಮದುವೆಗೆ ಹಣ ಹೊಂಚಿಕೊಳ್ಳುವುದಕ್ಕೆ ಕಳ್ಳತನದ ಯೋಜನೆ ರೂಪಿಸುತ್ತಾರೆ. ಆಗ ಆರೋಪಿ ನಾರಾಯಣ ಸ್ವಾಮಿ, ತನ್ನ ತಾಯಿ ಕೆಲಸಕ್ಕೆ ಹೋಗುತ್ತಿದ್ದ ಮನೆಗೆ ಹೋಗಿಬರುತ್ತಿದ್ದ. ಈತನು ಕೂಡ ಆಗಾಗ ಕೆಲಸಕ್ಕೆ ಹೋಗುತ್ತಿದ್ದ. ಅದನ್ನೇ ಬಂಡವಾಳ ಮಾಡಿಕೊಂಡ ನಾರಾಯಣ ಸ್ವಾಮಿ ತಾಯಿ ಕೆಲಸಕ್ಕೆ ಹೋಗುತ್ತಿದ್ದ ಮನೆಯಲ್ಲಿದ್ದ 333 ಗ್ರಾಂ ಚಿನ್ನಾಭರಣ ಕದ್ದು ಮದುವೆ ಮಾಡಿಕೊಂಡು ಹೋಗಿ ತಮಿಳುನಾಡಿನ ಚೆನೈನಲ್ಲಿ ಸೆಟಲ್ ಆಗಿದ್ದ.

ಘಟನೆ ಸಂಬಂಧ ಆಡುಗೊಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದರಿಂದ ಆರೋಪಿಯನ್ನ ಹುಡುಕಿ ಕರೆತಂದು ಅರೆಸ್ಟ್ ಮಾಡಿದ್ದಾರೆ.

Share This Article