ಮಂಡ್ಯ: ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಮಳವಳ್ಳಿ ತಾಲೂಕಿನ ಹಿಟ್ಟನಹಳ್ಳಿ ಕೊಪ್ಪಲು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಕಾಳಪ್ಪ (55) ಮತ್ತು ಗೌರಮ್ಮ (45) ಆತ್ಮಹತ್ಯೆಗೆ ಶರಣಾದ ದಂಪತಿ. ಗ್ರಾಮದಲ್ಲಿ ದಂಪತಿ ಬೇರೆಯವರಿಂದ 2 ಎಕರೆ ಜಮೀನು ಗುತ್ತಿಗೆ ಪಡೆದುಕೊಂಡು ವ್ಯವಸಾಯ ಮಾಡಿಕೊಂಡಿದ್ರು. ವ್ಯವಸಾಯಕ್ಕಾಗಿ 5 ಲಕ್ಷಕ್ಕೂ ಅಧಿಕ ಸಾಲ ಮಾಡಿಕೊಂಡಿದ್ರು.
ಇತ್ತೀಚೆಗೆ ತಮಗಿದ್ದ ಮನೆಯನ್ನ ದುರಸ್ಥಿ ಮಾಡಿಸಿಕೊಂಡು ಮಗನ ಮದುವೆ ಮಾಡಿದ್ದರು. ವ್ಯವಸಾಯಕ್ಕೆಂದು ಮಾಡಿಕೊಂಡಿದ್ದ ಸಾಲದ ಜೊತೆಗೆ ಮಗನ ಮದುವೆಯ ಸಾಲವೂ ಸೇರಿಕೊಂಡಿದ್ದರಿಂದ ಅದನ್ನ ತೀರಿಸಲು ದಾರಿಕಾಣದೆ ಮನನೊಂಡು ಗೌರಮ್ಮ ಮನೆಯ ಒಳೆಗೆ ನೇಣಿಗೆ ಶರಣಾಗಿದ್ದರು. ಪತ್ನಿ ಸಾವನ್ನಪ್ಪಿದ್ದನ್ನು ನೋಡಿದ ಪತಿ ಮನನೊಂದು ಮನೆಯ ಹಿಂಭಾಗದ ಹಿತ್ತಲಿನಲ್ಲಿ ನೇಣಿಗೆ ಶರಣಾಗಿದ್ದಾರೆ.
ಈ ಸಂಬಂಧ ಕಿರುಗಾವಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.