ಹುಟ್ಟಿದ ಕೆಲ ಗಂಟೆಗಳಲ್ಲೇ ಶಿಶುವನ್ನು ಕತ್ತು ಹಿಸುಕಿ ಕೊಂದ ಪಾಪಿಗಳು!

Public TV
1 Min Read

ತಿರುವನಂತಪುರಂ: ಹುಟ್ಟಿದ ಕೆಲ ಗಂಟೆಗಳಲ್ಲಿಯೇ ಜೋಡಿಯೊಂದು ನವಜಾತ ಶಿಶು (New Born Baby) ವನ್ನು ಕತ್ತು ಹಿಸುಕಿ ಕೊಂದ ವಿಲಕ್ಷಣ ಘಟನೆಯೊಂದು ಇಡುಕ್ಕಿಯ ಕಂಬಮ್ಮೆಟ್ಟು ಎಂಬಲ್ಲಿ ನಡೆದಿದೆ.

ಆರೋಪಿಗಳನ್ನು ಸಧುರಾಮ್ ಹಾಗೂ ಮಾಲತಿ ಎಂದು ಗುರುತಿಸಲಾಗಿದ್ದು, ಇವರಿಬ್ಬರು ಮಧ್ಯಪ್ರದೇಶದ ಇಂದೋರ್ ಮೂಲದವರಾಗಿದ್ದಾರೆ. ಪ್ರಕರಣ ಸಂಬಂಧಿಸಿದಂತೆ ಜೋಡಿಯನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಏಪ್ರಿಲ್ 7 ರಂದು ಮಗು ಹುಟ್ಟಿದ್ದು, ಜನನವಾದ ಕೆಲ ಗಂಟೆಗಳಲ್ಲಿಯೇ ಸಾವನ್ನಪ್ಪಿದೆ. ನಂತರ ಮಗುವನ್ನು ಮರಣೋತ್ತರ ಪರೀಕ್ಷೆ ನಡೆಸಿದಾಗ ಕೊಲೆ ಪ್ರಸಂಗ ಬಯಲಾಗಿದೆ. ಶಿಶುವನ್ನು ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂಬುದಾಗಿ ವರದಿಯಾಗಿದೆ. ಇದನ್ನೂ ಓದಿ: ನಕ್ಸಲ್‌ ದಂಪತಿ ಮಗಳು 10 ನೇ ತರಗತಿ ಪಾಸ್‌; ಅಪ್ಪ-ಅಮ್ಮನ ಥರ ಆಗಲ್ಲ, ಡಾಕ್ಟರ್‌ ಆಗ್ತೀನಿ ಅಂದ್ಳು ಬಾಲಕಿ

ಇತ್ತ ಸಧುರಾಮ್ ಹಾಗೂ ಮಾಲತಿಯನ್ನು ಪೊಲೀಸರು ಕೂಡಲೇ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ. ಸಧುರಾಮ್ ಹಾಗೂ ಮಾಲತಿ ಮದುವೆಯಾಗಿರಲಿಲ್ಲ. ಆದರೆ ಮಾಲತಿ ಗರ್ಭಿಣಿಯಾಗಿದ್ದಾಳೆ. ಈ ಹಿನ್ನೆಲೆಯಲ್ಲಿ ಕುಟುಂಬದವರ ಭಯದಿಂದ ಕೇರಳದಿಂದ ಪರಾರಿಯಾಗಿ ಇಡುಕ್ಕಿಯಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು.

ಮಾಲತಿ ಟಾಯ್ಲೆಟ್‍ನಲ್ಲಿ ಮಗುವಿಗೆ ಜನ್ಮ ನೀಡಿದ್ದಾಳೆ. ಬಳಿಕ ಕೆಲ ಗಂಟೆಗಳಲ್ಲಿ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ. ಸದ್ಯ ಮಾಲತಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇತ್ತ ಸಧುರಾಮ್‍ನನ್ನು ಪೊಲೀಸರು ಬಂಧಿಸಿದ್ದಾರೆ.

 

Share This Article