ಪ್ರಯಾಣಿಕರಿದ್ದ ವಿಮಾನ ಟೇಕಾಫ್ ಆಗ್ತಿದ್ದಂತೆಯೇ ಸೆಕ್ಸ್ ಶುರು ಹಚ್ಕೊಂಡ ಜೋಡಿಗೆ ಕೋರ್ಟ್ ಶಿಕ್ಷೆ

Public TV
2 Min Read

– ಮೂವರಿಗೆ ತಲಾ 11 ಸಾವಿರ ರೂ. ಪರಿಹಾರ ನೀಡಲು ಆದೇಶ

ಲಂಡನ್‌: ಈಸಿಜೆಟ್‌ ವಿಮಾನದಲ್ಲಿ ಸೆಕ್ಸ್‌ ಮಾಡುತ್ತಿದ್ದ ವೇಳೆ ಸಿಕ್ಕಿಬಿದ್ದ ಜೋಡಿಗೆ ಬ್ರಿಟನ್ನಿನ ಬ್ರಿಸ್ಟಲ್ ಮ್ಯಾಜಿಸ್ಟ್ರೇಟ್ ಕೋರ್ಟ್ (Bristol Magistrates Court) ಶಿಕ್ಷೆ ವಿಧಿಸಿದೆ.

ಕಳೆದ ಮಾರ್ಚ್‌ನಲ್ಲಿ ನಡೆದ ಅಶ್ಲೀಲ ಕೃತ್ಯಕ್ಕಾಗಿ ಈಸಿಜೆಟ್ ವಿಮಾನದಿಂದ (EasyJet flight,) ಕಿಕ್ ಆಫ್ ಆಗಿದ್ದ ಬ್ರಿಟಿಷ್ ಜೋಡಿಯನ್ನು ಇತ್ತೀಚೆಗೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲಾಗಿತ್ತು. ಬ್ರಾಡ್ಲಿ ಸ್ಮಿತ್ ಮತ್ತು ಆಂಟೋನಿಯಾ ಸುಲ್ಲಿವಾನ್ ಇಬ್ಬರೂ ಪ್ರಯಾಣಿಕರಿದ್ದ ವಿಮಾನದಲ್ಲಿ ಟೇಕಾಫ್‌ ಆಗುತ್ತಿದ್ದಂತೆ ಸೆಕ್ಸ್‌ ಮಾಡೋಕೆ ಶುರು ಹಚ್ಕೊಂಡಿದ್ದರು. ಈ ವೇಳೆ ರೆಡ್‌ಹ್ಯಾಂಡಾಗಿ ಸಿಕ್ಕಿಬಿದ್ದಿದ್ದರು. ಇದರಿಂದ ವಿಮಾನವನ್ನು ಕೆಳಗಿಳಿಸಿ ಅವರಿಬ್ಬರನ್ನು ಹೊರದಬ್ಬಲಾಗಿತ್ತು, ಏರ್ಪೋರ್ಟ್‌ ಪೊಲೀಸರು (Airport Police) ಇಬ್ಬರನ್ನು ಬಂಧಿಸಿದ್ದರು.

ಅಸಲಿಗೆ ಆಗಿದ್ದೇನು?
ಬ್ರಾಡ್ಲಿ ಸ್ಮಿತ್ ಮತ್ತು ಆಂಟೋನಿಯಾ ಸುಲ್ಲಿವಾನ್ ಜೋಡಿ ಕಳೆದ ಮಾರ್ಚ್‌ 3ರಂದು ಸ್ಪೇನ್‌ನ ಟೆನೆರಿಫ್‌ನಿಂದ ಬ್ರಿಸ್ಟಲ್‌ಗೆ ಹಿಂದಿರುಗುತ್ತಿದ್ದರು. ಈ ವೇಳೆ ವಿಮಾನದಲ್ಲಿ ಬರುತ್ತಿದ್ದರು. ಬ್ರಾಡ್ಲಿ ಸ್ಮಿತ್ 16A ಸೀಟ್‌ನಲ್ಲಿ ಕುಳಿತಿದ್ದರೆ, ಅವನ ಗೆಳತಿ ಆಂಟೋನಿಯಾ ಸುಲ್ಲಿವಾನ್ 16B ನಲ್ಲಿ ಅವನ ಪಕ್ಕದಲ್ಲಿ ಕುಳಿತಿದ್ದಳು. ವಿಮಾನ ಟೇಕಾಫ್‌ ಆಗುತ್ತಿದ್ದಂತೆ ಇಬ್ಬರು ಸೆಕ್ಸ್‌ ಮಾಡೋದಕ್ಕೆ ಶುರು ಮಾಡಿಕೊಂಡಿದ್ದರು. ಕೊನೆಗೆ ಸಾರ್ವಜನರಿಗೆ ರೆಡ್‌ಹ್ಯಾಂಡಾಗಿ ಸಿಕ್ಕಿಬಿದ್ದಿದ್ದರು. ಇವರಿಬ್ಬರ ಅನುಚಿತ ವರ್ತನೆಯ ಬಗ್ಗೆ ಸಿಬ್ಬಂದಿ ಉನ್ನತ ಅಧಿಕಾರಿಗಳಿಗೆ ವರದಿ ಮಾಡಿದ್ದರು. ಈ ಬಗ್ಗೆ ಮೂವರು ಸಹಪ್ರಯಾಣಿಕರು ಸಾಕ್ಷಿ ನುಡಿದಿದ್ದರು.

ವಿಮಾನದಲ್ಲೇ ಸೆಕ್ಸ್‌ ಶುರು:
ಸ್ಪೇನ್‌ನಿಂದ ವಿಮಾನ ಟೇಕಾಫ್‌ ಆದ ಕೂಡಲೇ ಬ್ರಾಡ್ಲಿ ತನ್ನ ಗೆಳತಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸುವಂತೆ ಕೇಳಿಕೊಂಡಿದ್ದನು. ನಂತರ ಸೀಟ್‌ ಅಕ್ಕಪಕ್ಕ ಒಂದಿಷ್ಟು ಬಟ್ಟೆಗಳನ್ನು ಇಟ್ಟು, ಲೈಂಗಿಕ ಕ್ರಿಯೆ ನಡೆಸುತ್ತಿದ್ದರು. ಇವರಿಬ್ಬರ ಹಿಂದಿನ ಸೀಟ್‌ನಲ್ಲಿ ಕುಳಿತಿದ್ದ ತಾಯಿ ಮತ್ತು ಮಗಳು ಈ ವಿಷಯವನ್ನು ವಿಮಾನ ಸಿಬ್ಬಂದಿಗೆ ತಿಳಿಸಿದ್ದರು. ಬಳಿಕ ಇಬ್ಬರನ್ನು ವಿಮಾನ ಲ್ಯಾಂಡಿಂಗ್‌ ಮಾಡಿ ಇಬ್ಬರನ್ನು ಬಂಧಿಸಲಾಗಿತ್ತು. ಈ ವಿಷಯವನ್ನು ಪ್ರಾಸಿಕ್ಯೂಟರ್ ಮೇರಿ ಡಾಯ್ಲ್ ಬ್ರಿಸ್ಟಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಗಮನಕ್ಕೆ ತಂದರು.

ತಪ್ಪೊಪ್ಪಿಕೊಂಡ ಬ್ರಾಡ್ಲಿ:
ಈ ವಾರದ ಆರಂಭದಲ್ಲಿ ನ್ಯಾಯಾಲದಲ್ಲಿ ನಡೆದ ವಿಚಾರಣೆ ವೇಳೆ ಬ್ರಾಡ್ಲಿ, ಆಂಟೋನಿಯಾ ಜೋಡಿ ಲೈಂಗಿಕ ಕ್ರಿಯೆ ನಡೆಸಿದ್ದಾಗಿ ತಪ್ಪೊಪ್ಪಿಕೊಂಡಿದ್ದರು. ಬಳಿಕ ಕೋರ್ಟ್‌ ಮೂವರು ಸಾಕ್ಷಿಗಳಿಗೆ ತಲಾ 100 ಪೌಂಡ್‌ (ಅಂದಾಜು 11,000 ರೂ.) ಪರಿಹಾರ ನೀಡುವಂತೆ ಸೂಚಿಸಿತು. ಜೊತೆಗೆ ಬ್ರಾಡ್ಲಿಗೆ 300 ಗಂಟೆ ಕಮ್ಯೂನಿಟಿ ವರ್ಕ್‌ ಮತ್ತು ಆಂಟೋನಿಯಾಗೆ 270 ಗಂಟೆಗಳ ಕಾಲ ಸಮುದಾಯ ಕೆಲಸ ಪೂರ್ಣಗೊಳಿಸುವಂತೆ ಕೋರ್ಟ್‌ ಆದೇಶ ನೀಡಿತು.

Share This Article