ನವದೆಹಲಿ: ಯುವತಿಯೊಬ್ಬಳು ಚಲಿಸುತ್ತಿದ್ದ ಬೈಕಿನ ಟ್ಯಾಂಕ್ ಮೇಲೆ ಕುಳಿತು ತನ್ನ ಪ್ರಿಯಕರನನ್ನು ತಬ್ಬಿಕೊಂಡ ಘಟನೆ ನವದೆಹಲಿಯಲ್ಲಿ ನಡೆದಿದ್ದು, ಈ ವಿಡಿಯೋ ಈ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ದೆಹಲಿಯ ಬ್ಯುಸಿ ರಸ್ತೆ ಆಗಿರುವ ರಜೌರಿ ಗಾರ್ಡನ್‍ನಲ್ಲಿ ಈ ಜೋಡಿ ಬೈಕಿನಲ್ಲಿ ತೆರಳುತಿತ್ತು. ಈ ವೇಳೆ ಯುವತಿ ಚಲಿಸುತ್ತಿದ್ದ ಬೈಕಿನ ಪೆಟ್ರೋಲ್ ಟ್ಯಾಂಕ್ ಮೇಲೆ ಕುಳಿತು ತನ್ನ ಪ್ರಿಯಕರನನ್ನು ತಬ್ಬಿಕೊಂಡಿದ್ದಾಳೆ. ಈ ವಿಡಿಯೋವನ್ನು ಹಿಂದೆ ಬರುತ್ತಿದ್ದ ವಾಹನದವರು ತಮ್ಮ ಮೊಬೈಲಿನಲ್ಲಿ ಸೆರೆ ಹಿಡಿದಿದ್ದಾರೆ.
ಈ ವಿಡಿಯೋವನ್ನು ಐಪಿಎಸ್ ಅಧಿಕಾರಿ ಎಚ್‍ಜಿಎಸ್ ದಾಲಿವಾಲ್ ಅವರು ಟ್ವಿಟ್ಟರಿನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ, ಮೋಟಾರ್ ವೆಹಿಕಲ್ ಕಾಯ್ದೆಯ ಉಲ್ಲಂಘನೆಗಾಗಿ ಹೊಸ ಕಾಯ್ದೆ(ಸೆಕ್ಷನ್) ಬರಬೇಕಾಗಿದೆ. ರಜೌರಿ ಗಾರ್ಡನ್ ಕ್ರಾಸಿಂಗ್” ಎಂದು ಬರೆದು ಟ್ವೀಟ್ ಮಾಡಿದ್ದಾರೆ.
ಬೈಕ್ ಚಲಾಯಿಸುತ್ತಿದ್ದ ಯುವಕ ಬ್ಯಾಗ್‍ವೊಂದನ್ನು ಹಾಕಿಕೊಂಡಿದ್ದನು. ಯುವತಿ ಬೈಕಿ ಟ್ಯಾಂಕ್ ಮೇಲೆ ಕುಳಿತು ಯುವಕನನ್ನು ತಬ್ಬಿಕೊಂಡಿದ್ದರಿಂದ ಆತನಿಗೆ ಸರಿಯಾಗಿ ಬೈಕ್ ಚಲಾಯಿಸಲು ಆಗಲಿಲ್ಲ. ಅಲ್ಲದೆ ರಸ್ತೆಯಲ್ಲಿ ಓಡಾಡುತ್ತಿದ್ದ ವಾಹನದವರು ಜೋಡಿಯ ಈ ವರ್ತನೆ ನೋಡಿ ಆಕ್ರೋಶ ಹೊರ ಹಾಕಿದ್ದಾರೆ.
Need for new sections for #MV Act violations!! #Rajouri garden crossing. pic.twitter.com/0gn7LsIIYM
— HGS Dhaliwal (@hgsdhaliwalips) May 2, 2019