ವಿಮಾನದ ಟಾಯ್ಲೆಟ್‌ನಲ್ಲಿ ಸೆಕ್ಸ್‌ – ಸಿಬ್ಬಂದಿ ಕೈಗೆ ಸಿಕ್ಕಿಬಿದ್ದ ಜೋಡಿ

Public TV
1 Min Read

ಲಂಡನ್: ಪ್ರಯಾಣಿಸುತ್ತಿದ್ದ ವಿಮಾನದ ಟಾಯ್ಲೆಟ್‌ನಲ್ಲಿ ಸೆಕ್ಸ್‌ ಮಾಡುತ್ತಿದ್ದ ವೇಳೆ ಜೋಡಿಯೊಂದು ಕ್ಯಾಬಿನ್‌ ಸಿಬ್ಬಂದಿ ಕೈಗೆ ಸಿಕ್ಕಿಬಿದ್ದ ಘಟನೆ ನಡೆದಿದೆ. ಈಸಿಜೆಟ್‌ ವಿಮಾನದಲ್ಲಿ (EasyJet Flight) ಘಟನೆ ನಡೆದಿದ್ದು, ದೃಶ್ಯದ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ.

ವೀಡಿಯೋದಲ್ಲಿ ಏನಿದೆ?
ವಿಮಾನದ ಸಿಬ್ಬಂದಿಯೊಬ್ಬರು ಶೌಚಾಲಯದ ಬಾಗಿಲು ತೆರೆಯಲು ಮುಂದಾಗಿದ್ದಾರೆ. ಒಳಗಡೆಯಿಂದ ಬಾಗಿಲು ಲಾಕ್‌ ಆಗದ ಕಾರಣ ಅದು ಓಪನ್‌ ಆಗಿದೆ. ಆಗ ಒಳಗೆ ಒಬ್ಬ ಪುರುಷ ಮತ್ತು ಮಹಿಳೆ ವಿವಸ್ತ್ರಗೊಂಡ ಸ್ಥಿತಿಯಲ್ಲಿರುವುದು ಕಂಡುಬಂದಿದೆ. ಈ ದೃಶ್ಯವನ್ನು ನೋಡಿ ಮುಜುಗರದಿಂದ ಸಿಬ್ಬಂದಿ ಪಕ್ಕಕ್ಕೆ ಸರಿಯುತ್ತಾರೆ. ಇತರೆ ಸಹ ಪ್ರಯಾಣಿಕರು ಸಹ ದೃಶ್ಯವನ್ನು ಕಂಡು ನಗುತ್ತಾರೆ. ಇದನ್ನೂ ಓದಿ: ಲಿಬಿಯಾದಲ್ಲಿ ಭೀಕರ ಪ್ರವಾಹಕ್ಕೆ 2,000ಕ್ಕೂ ಹೆಚ್ಚು ಮಂದಿ ಬಲಿ – 5 ಸಾವಿರಕ್ಕೂ ಹೆಚ್ಚು ಜನ ನಾಪತ್ತೆ

ಸೆ.8 ರಂದು ಲುಟನ್‌ನಿಂದ ಇಬಿಜಾಗೆ ಹೊರಟಿದ್ದ ವಿಮಾನದಲ್ಲಿ ಈ ಘಟನೆ ನಡೆದಿದೆ. ವಿಮಾನದಲ್ಲಿ ಹೀಗೆ ವರ್ತಿಸಿದ ಈ ಪ್ರಯಾಣಿಕರ ವಿರುದ್ಧ ಯಾವ ಕ್ರಮ ತೆಗೆದುಕೊಳ್ಳಲಾಗಿದೆ ಎಂಬ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ.

ವಿಮಾನ ಪ್ರಯಾಣದ ವೇಳೆ ಲೈಂಗಿಕ ಕ್ರಿಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಮದ ಬಗ್ಗೆ ಯುಕೆ ಕಾನೂನಿನಲ್ಲಿ ಉಲ್ಲೇಖವಿಲ್ಲ. ಆದರೆ ಲೈಂಗಿಕ ಅಪರಾಧಗಳ ಕಾಯಿದೆ 2004 ರ ಸೆಕ್ಷನ್ 71 ರ ಅಡಿಯಲ್ಲಿ ಸಾರ್ವಜನಿಕ ಶೌಚಾಲಯದಲ್ಲಿ ಉದ್ದೇಶಪೂರ್ವಕವಾಗಿ ಲೈಂಗಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಅಪರಾಧವಾಗಿದೆ. ಇದನ್ನೂ ಓದಿ: ರಸ್ತೆಯಲ್ಲಿ ನದಿಯಂತೆ ಉಕ್ಕಿ ಹರಿದ 22 ಲಕ್ಷ ಲೀಟರ್‌ ರೆಡ್‌ ವೈನ್

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್