ಧಾರವಾಡ: ಲಾರಿ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕಿನಲ್ಲಿದ್ದ ದಂಪತಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕಲಘಟಗಿ ತಾಲೂಕಿನ ದೇವಿಕೊಪ್ಪ ಗ್ರಾಮದ ಬಳಿ ನಡೆದಿದೆ.
ಮೃತ ದಂಪತಿಯು ಹಾವೇರಿ ಜಿಲ್ಲೆ ಶಾಗೋಟಿ ಗ್ರಾಮದ ನಿವಾಸಿ ವೀರುಪಾಕ್ಷಪ್ಪ (38) ಮತ್ತು ಗಂಗವ್ವ (35) ಎಂದು ಗುರುತಿಸಲಾಗಿದೆ. ಇವರು ಕಲಘಟಗಿ ತಾಲೂಕಿನ ಹುಲಗಿನಕೊಪ್ಪದ ಸಂಬಂಧಿಕರ ಮದುವೆಗೆ ಹೊರಟ್ಟಿದ್ದರು.
ಈ ವೇಳೆ ಅದೇ ಮಾರ್ಗ ಮಧ್ಯದಲ್ಲಿ ಎದುರಿಗೆ ಬಂದ ಲಾರಿ ಡಿಕ್ಕಿ ಹೊಡೆದಿದೆ. ಪರಿಣಾಮ ದಂಪತಿ ಇಬ್ಬರು ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಇನ್ನು ಅಪಘಾತ ಮಾಡಿ ಲಾರಿ ಬಿಟ್ಟು ಚಾಲಕ ಪರಾರಿಯಾಗಿದ್ದಾರೆ. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.