ತುಮಕೂರು: ಬೈಕಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ದಂಪತಿ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ತುಮಕೂರು ತಾಲೂಕಿನ ಕೋರಾ ಬಳಿಯ ವಿ.ಆರ್.ಎಲ್ ಹೋಟೆಲ್ ಬಳಿ ನಡೆದಿದೆ.
ಜಗದೀಶ್(32) ಮತ್ತು ಗಂಗಾದೇವಿ (28) ಮೃತ ದಂಪತಿ. ಈ ಅಪಘಾತದಲ್ಲಿ ಆರು ವರ್ಷದ ಮಗಳು ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಮೃತ ದಂಪತಿ ಮೂಲತಃ ಹಿರಿಯೂರಿನವರಾಗಿದ್ದು, ಬೆಂಗಳೂರಿನಲ್ಲಿ ವಾಸಿಸುತ್ತಿದ್ದರು.
ಇಂದು ಬೆಂಗಳೂರಿನಿಂದ ಬೈಕಿನಲ್ಲಿ ಕುಟುಂಬ ಸಮೇತರಾಗಿ ಹಿರಿಯೂರಿಗೆ ತೆರಳುತ್ತಿದ್ದರು. ಬೈಕ್ ಕೋರಾ ಬಳಿಯ ವಿ.ಆರ್.ಎಲ್ ಹೋಟೆಲ್ ಬಳಿ ಹೋಗುತ್ತಿದ್ದಂತೆ ವೇಗವಾಗಿ ಬಂದ ಲಾರಿಯೊಂದು ಹಿಂದಿಬಯಿಂದ ಬೈಕಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಜಗದೀಶ್ ಮತ್ತು ಗಂಗಾದೇವೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಈ ಘಟನೆ ಸಂಬಂಧ ಕೋರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv