ತೆಲುಗು ಬಿಗ್‌ಬಾಸ್ ಫಿನಾಲೆಗೆ ಕ್ಷಣಗಣನೆ – ರೇಸ್‌ನಲ್ಲಿ ಇಬ್ಬರು ಕನ್ನಡತಿಯರು

1 Min Read

ತೆಲುಗಿನ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್ (Bigg Boss) ಅಂತಿಮ ಘಟ್ಟಕ್ಕೆ ಬಂದು ತಲುಪಿದೆ. 98 ದಿನಗಳನ್ನ ಪೂರೈಸಿರುವ ಈ ಬಾರಿಯ ಬಿಗ್‌ಬಾಸ್ ಫಿನಾಲೆ ವಾರದಲ್ಲಿದೆ. ಈ ವೀಕೆಂಡ್‌ನಲ್ಲಿ ಸೀಸನ್ 9ರ ಕಪ್ ಯಾರ ಮುಡಿ ಸೇರಲಿದೆ ಅನ್ನೋದು ಪಕ್ಕಾ ಆಗಲಿದೆ. ಸದ್ಯ ಈ ಫಿನಾಲೆ ಓಟದಲ್ಲಿ ಕನ್ನಡದ ಇಬ್ಬರು ನಟಿಮಣಿಯರಿದ್ದಾರೆ.

ಬಿಗ್‌ಬಾಸ್ ಸೀಸನ್-9ರ ಫಿನಾಲೆಯಲ್ಲಿ ಕನ್ನಡದ ನಟಿ ಸಂಜನಾ ಗಲ್ರಾನಿ ಹಾಗೂ ತನುಜಾ ಪುಟ್ಟಸ್ವಾಮಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಕಳೆದ ಭಾನುವಾರ ಡಬಲ್ ಎಲಿಮಿನೇಷನ್ ಮೂಲಕ ಇಬ್ಬರು ಮನೆಯಿಂದ ಹೊರ ಹೋಗಿದ್ದಾರೆ. ಅಲ್ಲಿಗೆ ಐವರು ಫಿನಾಲೆ ತಲುಪಿದ್ದಾರೆ. ಸಂಜನಾ, ತನುಜಾ ಜೊತೆಗೆ ಕಲ್ಯಾಣ್, ಇಮ್ಯಾನ್ಯುಲ್ ಹಾಗೂ ಪವನ್ ಫಿನಾಲೆ ಸ್ಪರ್ಧಿಗಳಾಗಿದ್ದಾರೆ.

ಈ ಐವರು ಆರಂಭದಿಂದಲೂ ಉತ್ತಮವಾಗಿ ಆಟ ಆಡುತ್ತಿದ್ದಾರೆ. ಜೊತೆಗೆ ಭರ್ಜರಿ ಪೈಪೋಟಿ ನೀಡುತ್ತಿದ್ದಾರೆ. ಆದರೆ ಫಿನಾಲೆಯವರೆಗೂ ಬಂದಿರುವ ನಮ್ಮ ಕನ್ನಡದ ಇಬ್ಬರು ಪ್ರತಿಭೆಗಳಲ್ಲಿ ಒಬ್ಬರು ತೆಲುಗು ಬಿಗ್‌ಬಾಸ್‌ನ ಕಪ್ ಎತ್ತುವ ಎಲ್ಲಾ ಸಾಧ್ಯತೆಗಳಿವೆ. ಜಾಲತಾಣದಲ್ಲಿ ಸಂಜನಾ ಹಾಗೂ ತನುಜಾ ಅವರಿಗೆ ಶುಭ ಹಾರೈಸುತ್ತಿದ್ದಾರೆ.

Share This Article