ವಿಧಾನ ಪರಿಷತ್ ಚುನಾವಣೆ – ಜಗದೀಶ್‌ ಶೆಟ್ಟರ್‌ ಸೇರಿ ಕಾಂಗ್ರೆಸ್‌ನ ಮೂವರೂ ಅವಿರೋಧ ಆಯ್ಕೆ

Public TV
1 Min Read

ಬೆಂಗಳೂರು: ವಿಧಾನ ಪರಿಷತ್‌ (Vidhan Parishad) ಉಪ ಚುನಾವಣೆಯಲ್ಲಿ ಜಗದೀಶ್‌ ಶೆಟ್ಟರ್‌ (Jagadish Shettar) ಸೇರಿ ಕಾಂಗ್ರೆಸ್‌ನ (Congress) ಮೂರು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ವಿಧಾನ ಪರಿಷತ್‌ ಉಪ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದ ಜಗದೀಶ್ ಶೆಟ್ಟರ್, ತಿಪ್ಪಣ್ಣಪ್ಪ ಕಮಕನೂರ್ (Tippannappa), ಎನ್‌.ಎಸ್. ಬೋಸರಾಜು (N.S.Boseraju) ಅವಿರೋಧವಾಗಿ ಅಯ್ಕೆಯಾಗಿದ್ದಾರೆ. ನಾಮಪತ್ರ ವಾಪಸ್ ಪಡೆಯಲು ಇಂದು ಕೊನೆ ದಿನವಾಗಿತ್ತು. ಕಣದಲ್ಲಿ ಮೂರೇ ಅಭ್ಯರ್ಥಿಗಳು ಇದ್ದ ಕಾರಣ ಮೂವರು ಸಹ ಆಯ್ಕೆಯಾಗಿದ್ದಾರೆ. ಇದನ್ನೂ ಓದಿ: ವಿಧಾನಸಭೆಯಿಂದ ಪರಿಷತ್ ಮೂರು ಸ್ಥಾನಗಳಿಗೆ ಉಪಚುನಾಚಣೆ: ಕಾಂಗ್ರೆಸ್ ಅಭ್ಯರ್ಥಿಗಳ ನಾಮಪತ್ರ ಅಂಗೀಕಾರ

ಲಕ್ಷ್ಮಣ ಸವದಿ, ಆರ್.ಶಂಕರ್ ಹಾಗೂ ಬಾಬುರಾವ್ ಚಿಂಚನಸೂರ್ ಅವರ ರಾಜೀನಾಮೆಯಿಂದ ತೆರವಾದ ಈ ಮೂರು ಸ್ಥಾನಗಳಿಗೆ ಚುನಾವಣಾ ಆಯೋಗ ಉಪ ಚುನಾವಣೆ ಘೋಷಿಸಿತ್ತು.

ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ನಡೆಯಬೇಕಿದ್ದ ಉಪ ಚುನಾವಣೆಗೆ ನಾಮಪತ್ರ ಸಲ್ಲಿಸಲು ಜೂನ್ 20 ಕೊನೆಯ ದಿನವಾಗಿತ್ತು ಮತ್ತು ನಾಮಪತ್ರ ವಾಪಸ್ ಪಡೆಯಲು ಇಂದು(ಜೂನ್ 23) ಕೊನೆಯ ದಿನವಾಗಿತ್ತು. ಕಣದಲ್ಲಿ ಮೂವರೇ ಇದ್ದ ಕಾರಣದಿಂದ ಈ ಮೂವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಲಾಗಿದೆ. ಇದನ್ನೂ ಓದಿ: ನನಗೆ ರಾಜ್ಯಾಧ್ಯಕ್ಷ ಸ್ಥಾನ ಕೊಡಿ: ಹೈಕಮಾಂಡ್‌ಗೆ ಸೋಮಣ್ಣ ಮನವಿ

Share This Article