ಕೊಪ್ಪಳ KRIDLನಲ್ಲಿ 72 ಕೋಟಿ ರೂ. ಭ್ರಷ್ಟಾಚಾರ

Public TV
1 Min Read

ಕೊಪ್ಪಳ: ವಾಲ್ಮೀಕಿ ನಿಗಮದಲ್ಲಿ ನಡೆದಿದ್ದ ಬಹುಕೋಟಿ ಭ್ರಷ್ಟಾಚಾರ ಮಾದರಿಯಲ್ಲೇ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮ (KRIDL) ಕೊಪ್ಪಳ (Koppal) ವಿಭಾಗದಲ್ಲಿ 72 ಕೋಟಿ ರೂಪಾಯಿ ದುರ್ಬಳಕೆ ಆಗಿದೆ.

ಭ್ರಷ್ಟಾಚಾರ ಕುರಿತು ಇಬ್ಬರು ಅಧಿಕಾರಿಗಳ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಕೆಯಾಗಿದ್ದು, ಎಫ್‌ಐಆರ್ ಕೂಡ ದಾಖಲಾಗಿದೆ. 2019ರಿಂದ 2025ರವರೆಗೆ ಕೊಪ್ಪಳ ಜಿಲ್ಲೆಯ ವಿವಿಧೆಡೆ ನಡೆದ 96 ಕಾಮಗಾರಿಗಳಲ್ಲಿ ಅಂದಿನ ಇಇ ಆಗಿದ್ದ ಚಿಂಚೋಳಿಕರ್ ಹಾಗೂ ಹೊರಗುತ್ತಿಗೆ ನೌಕರನಾಗಿದ್ದ ಕಳಕಪ್ಪ ನಿಡಗುಂದಿ 72 ಕೋಟಿ ರೂ. ದುರ್ಬಳಕೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಕೊಪ್ಪಳ ವಿಭಾಗದ ಇಇ ಅನಿಲ್‌ಪಾಟೀಲ್, ನೆಲೋಗಿಪುರ ಉಪವಿಭಾಗದ ಆನಂದ ಕಾರ್ಲಕುಂಟಿ ಖುದ್ದಾಗಿ ಲೋಕಾಯುಕ್ತ ಕಚೇರಿಗೆ ತೆರಳಿ ಇಬ್ಬರು ಅಧಿಕಾರಿಗಳ ವಿರುದ್ಧ ಕೇಸ್ ದಾಖಲಿಸಿದ್ದಾರೆ. ಇದನ್ನೂ ಓದಿ: ಶವಗಳನ್ನು ಹೂತಿಟ್ಟ ಪ್ರಕರಣ – ಎಸ್‌ಐಟಿ ತನಿಖೆ ಸ್ವಾಗತಿಸಿದ ಧರ್ಮಸ್ಥಳ ಕ್ಷೇತ್ರದ ವಕ್ತಾರ

ಮೇಲ್ನೋಟಕ್ಕೆ ಕೊಪ್ಪಳ ಗ್ರಾಮಗಳಲ್ಲಿ ಚರಂಡಿ, ರಸ್ತೆ, ಕುಡಿಯೋ ನೀರು ಸೇರಿ 96 ಕಾಮಗಾರಿಗಳನ್ನು ಮಾಡಿರೋದಾಗಿ ಬಿಲ್ ಕೊಟ್ಟು 72 ಕೋಟಿ ರೂ. ಹಣವನ್ನ ದುರ್ಬಳಕೆ ಮಾಡಿಕೊಂಡಿದ್ದಾರೆ. ಹೀಗಾಗಿ ಕೆಆರ್‌ಐಡಿಎಲ್ ಎಂಡಿ ಬಸವರಾಜ ನಿರ್ದೇಶನದಂತೆ ಇಇ ಅನಿಲ್ ದೂರು ದಾಖಲಿಸಿದ್ದಾರೆ.ಇದನ್ನೂ ಓದಿ: SBI ಬ್ಯಾಂಕ್‌ಗೆ 8 ಕೋಟಿ ವಂಚನೆ – 20 ವರ್ಷದಿಂದ ಸಿಗದವರು ಇಮೇಜ್ ಸರ್ಚ್ ಅನಾಲಿಟಿಕ್ಸ್‌ ಸಾಫ್ಟ್‌ವೇರ್‌ನಿಂದ ಸಿಬಿಐಗೆ ಲಾಕ್

Share This Article