ಬೆಂಗಳೂರು: ಭ್ರಷ್ಟಾಚಾರ ಪ್ರಕರಣದಲ್ಲಿ(Corruption Case) ಕರ್ನಾಟಕ ಕೌನ್ಸಿಲ್ ಫಾರ್ ಟೆಕ್ನಿಕಲ್ ಎಂ.ಡಿ ಆಗಿದ್ದ ವಿ. ಮುನಿಯಪ್ಪ (Muniyappa) ಅವರನ್ನು ದೋಷಿ ಎಂದು ಲೋಕಾಯುಕ್ತ ಕೋರ್ಟ್(Lokayukta Court) ತೀರ್ಪು ಪ್ರಕಟಿಸಿದೆ.
3 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಜೊತೆಗೆ 4.5 ಕೋಟಿ ದಂಡ ವಿಧಿಸಿದೆ. ದಂಡ ಪಾವತಿಸದಿದ್ದರೆ 6 ತಿಂಗಳು ಹೆಚ್ಚುವರಿ ಶಿಕ್ಷೆ ಆಗಲಿದೆ.
ಬೆಂಗಳೂರು ಬಸವ ಭವನದಲ್ಲಿ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಮುನಿಯಪ್ಪ ಆದಾಯಕ್ಕೂ ಮೀರಿ ಹಣ ಮಾಡಿಕೊಂಡಿದ್ದ ಬಗ್ಗೆ ಲೋಕಾಯುಕ್ತ ಪೊಲೀಸರ ತನಿಖೆಯಲ್ಲಿ ಬಯಲಾಗಿತ್ತು. ಮುನಿಯಪ್ಪ ವಿರುದ್ಧ 2014 ರಲ್ಲಿ ಭ್ರಷ್ಟಚಾರ ಪ್ರಕರಣ ದಾಖಲಾಗಿತ್ತು.

