– ಮಳಿಗೆ ಮಂಜೂರಿಗೆ ದುಡ್ಡಿಗೆ ಡಿಮ್ಯಾಂಡ್ ಮಾಡಿದ್ದ ಎಪಿಎಂಸಿ ಕಾರ್ಯದರ್ಶಿ
ಬೆಂಗಳೂರು: ರಾಜ್ಯದಲ್ಲಿ ವಸತಿ ಇಲಾಖೆ ಬಳಿಕ ಇದೀಗ ಮತ್ತೊಂದು ಭ್ರಷ್ಟಾಚಾರದ (Corruption) ಆರೋಪ ಕೇಳಿಬಂದಿದೆ.
ಹೌದು, ವಸತಿ ಇಲಾಖೆಯ ಮನೆ ಹಂಚಿಕೆಯಲ್ಲಿ `ಮನಿ ಕೊಟ್ರೆ ಮನೆ’ ಎಂಬ ಭ್ರಷ್ಟಾಚಾರದ ಆರೋಪ ಬಳಿಕ ಇದೀಗ ಎಪಿಎಂಸಿಯಲ್ಲಿ ಮಳಿಗೆ ಹಸ್ತಾಂತರಕ್ಕೆ ಲಂಚ ಪಡೆದಿರುವುದು ಬೆಳಕಿಗೆ ಬಂದಿದೆ. ಹಣ ಕೊಟ್ಟರೂ ಮಳಿಗೆ ಹಸ್ತಾಂತರಿಸಿಲ್ಲ ಎಂಬ ಆರೋಪ ಕೇಳಿಬಂದಿದೆ.ಇದನ್ನೂ ಓದಿ: ಮಾಜಿ ಡಿಸಿಎಂ ಈಶ್ವರಪ್ಪ, ಪುತ್ರ, ಸೊಸೆ ವಿರುದ್ಧ ಎಫ್‌ಐಆರ್
ಈ ಕುರಿತು ವಂಚನೆಗೊಳಗಾದ ಚಂದ್ರಶೇಖರ್ `ಪಬ್ಲಿಕ್ ಟಿವಿ’ (PUBLiC TV) ಜೊತೆ ಮಾತನಾಡಿ, ದಾಸನಪುರ ಮಳಿಗೆ ಮಂಜೂರಾಗಲು ಅರ್ಜಿ ಸಲ್ಲಿಸಿದ್ದೆ. ಅರ್ಜಿ ಸಲ್ಲಿಸಿದ್ದರೂ ಮಳಿಗೆ ಹಸ್ತಾಂತರವಾಗಿರಲಿಲ್ಲ. ಹಾಗಾಗಿ ಇದನ್ನು ಕೇಳಲು ಎಪಿಎಂಸಿ ಕಾರ್ಯದರ್ಶಿಯ ಬಳಿ ಹೋದಾಗ 20 ಲಕ್ಷ ರೂ. ಹಣಕ್ಕೆ ಡಿಮ್ಯಾಂಡ್ ಮಾಡಿದ್ದರು. ಬಳಿಕ ಮದುವೆಯಾಗಿ ಹತ್ತೇ ದಿನ ಆಗಿದ್ದರೂ ನನ್ನ ಹೆಂಡತಿಯ ಮಾಂಗಲ್ಯ ಹಾಗೂ ಅಮ್ಮನ ಒಡವೆಗಳನ್ನು ಅಡವಿಟ್ಟು ದುಡ್ಡು ಹೊಂದಿಸಿ, ಲಂಚ ನೀಡಿದ್ದೇನೆ. ಆದರೂ ಕೂಡ ಮಳಿಗೆ ಹಸ್ತಾಂತರ ಆಗಿರಲಿಲ್ಲ. ಬಳಿಕ ಕಾರ್ಯದರ್ಶಿಗೆ ಹಣ ವಾಪಾಸ್ ಕೇಳಿದ್ರೂ ಕೊಟ್ಟಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
ಸದ್ಯ ಈ ಕುರಿತು ಚಂದ್ರಶೇಖರ್ ಅವರು ಸಚಿವ ಶಿವಾನಂದ ಪಾಟೀಲ್‌ಗೆ ಪತ್ರ ಬರೆದು ಭ್ರಷ್ಟಾಚಾರದ ತನಿಖೆ ಮಾಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ. ಈ ಹಿಂದೆಯೂ ಸರ್ಕಾರಕ್ಕೆ ಅನೇಕ ವರ್ತಕರು ದೂರು ನೀಡಿದ್ದರು. ಸರ್ಕಾರ ಅಧಿಕಾರಿಗಳ ವಿರುದ್ಧ ಯಾವುದೇ ರೀತಿಯ ಕ್ರಮ ಜರುಗಿಸಿರಲಿಲ್ಲ. ಇದೀಗ ಚಂದ್ರಶೇಖರ್ ಸ್ವತಃ ದೂರು ನೀಡಿದ್ದು, ಬೇರೆ ವರ್ತಕರಿಗೂ ಇದೇ ರೀತಿ ಮಾನಸಿಕ ಕಿರುಕುಳ ನೀಡಲಾಗುತ್ತಿದೆ. ದುಡ್ಡಿಗೆ ಡಿಮ್ಯಾಂಡ್ ಮಾಡುತ್ತಿದ್ದಾರೆ. ಈ ಅವ್ಯವಹಾರದ ಬಗ್ಗೆ ಸಿಐಡಿ ತನಿಖೆ ಮಾಡಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.ಇದನ್ನೂ ಓದಿ: ಶರಾವತಿ ಹಿನ್ನೀರಿನ ನಡುವೆ ಕೆಟ್ಟು ನಿಂತ ಲಾಂಚ್ – ತಪ್ಪಿದ ಅನಾಹುತ