ಸಿಎಂ ಸಂಧಾನ ಯಶಸ್ವಿ – ಅಧಿವೇಶನಕ್ಕೆ ಹೋಗ್ತೀನಿ, ಗ್ಯಾರಂಟಿಯಿಂದ ಅನುದಾನ ಸಿಗುತ್ತಿಲ್ಲ ಎಂದ ಬಿಆರ್‌ ಪಾಟೀಲ್‌

Public TV
1 Min Read

ಬೆಂಗಳೂರು: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದ ಆಳಂದ ಶಾಸಕ ಬಿಆರ್‌ ಪಾಟೀಲ್‌ (BR Patel) ಅವರ ಜೊತೆ ಸಿಎಂ ಸಿದ್ದರಾಮಯ್ಯ (Siddaramaiah) ಸಭೆ ನಡೆಸಿ ಸಿಟ್ಟನ್ನು ಶಮನ ಮಾಡಿದ್ದಾರೆ.

ರೇಸ್ ಕೋರ್ಸ್ ರಸ್ತೆಯ ಶಕ್ತಿಭವನದಲ್ಲಿ ಬಿಆರ್‌ ಪಾಟೀಲ್‌ ಜೊತೆ ಸಿಎಂ ಸಭೆ ನಡೆಸಿ ಮಾತುಕತೆ ನಡೆಸಿದರು. ಈ ಮಾತುಕತೆಯ ಸಂದರ್ಭದಲ್ಲಿ ಸಚಿವ ಬೈರತಿ ಸುರೇಶ್ ಹಾಗು ನಜೀರ್ ಅಹ್ಮದ್ ಸಾಥ್ ನೀಡಿದ್ದರು.  ಇದನ್ನೂ ಓದಿ: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡ್ತೀನಿ – ಸಿಎಂಗೆ ಪತ್ರ ಬರೆದ ಬಿಆರ್‌ ಪಾಟೀಲ್‌

 

ಸಭೆಯ ಬಳಿಕ ಮಾತನಾಡಿದ ಬಿಆರ್‌ ಪಾಟೀಲ್‌, ಸಿಎಂ ಕರೆ ಮಾಡಿ ಬರಲು ಹೇಳಿದ್ದರು. ಮುಕ್ಕಾಲು ಗಂಟೆ ಮಾತನಾಡಿ ಎಲ್ಲಾ ಸಮಸ್ಯೆ ಬಗೆಹರಿಸಿದ್ದಾರೆ. ಇನ್ಮುಂದೆ ಯಾವುದೇ ಸಮಸ್ಯೆ ಇಲ್ಲ. ಬೆಳಗಾವಿ ಅಧಿವೇಶನದಲ್ಲಿ ಭಾಗವಹಿಸುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ಡಿಕೆಗೆ ತಾತ್ಕಾಲಿಕ ರಿಲೀಫ್‌ – ಸರ್ಕಾರ, ಸಿಬಿಐ ವಾದ ಏನಿತ್ತು? ಹೈಕೋರ್ಟ್‌ ಹೇಳಿದ್ದು ಏನು? ಡಿಕೆ ಕೇಸ್‌ ಮುಂದೇನು? – ಕೋರ್ಟ್‌ ಕಲಾಪದ ಪೂರ್ಣ ವರದಿ ಓದಿ

ಅನುದಾನ ವಿಚಾರವಾಗಿ ನನಗೆ ಅಸಮಾಧಾನ ಇಲ್ಲ. ಗ್ಯಾರಂಟಿ (Congress Guarantee) ಕೊಟ್ಟ ಕಾರಣ ಅನುದಾನ ಸಿಗುತ್ತಿಲ್ಲ ಎನ್ನುವುದು ನನಗೂ ಗೊತ್ತಿದೆ. ಪಂಚ ರಾಜ್ಯಗಳ ಚುನಾವಣೆ ಇದ್ದ ಕಾರಣ ಸುಮ್ಮನಿದ್ದೆ. ಈಗ ಈ ವಿಚಾರ ಎತ್ತಿದ್ದೇನೆ ಎಂದು ತಿಳಿಸಿದರು.

ನೀವ್ಯಾಕೆ ಆ ಜಾಗವನ್ನು ಕೆಆರ್‌ಐಡಿಎಲ್‌ ಕೊಟ್ಟಿದ್ದು ಅಂತ ಕೃಷ್ಣಬೈರೇಗೌಡರು ನನಗೆ ಒಬ್ಬರಿಗೆ ಅಷ್ಟೇ ಅಲ್ಲ ಎಲ್ಲಾ ಶಾಸಕರಿಗೆ ಸವಾಲು ಹಾಕಿದ್ದಾರೆ. ಪ್ರಿಯಾಂಕ್ ಖರ್ಗೆ ಜೊತೆ ಯಾವುದೇ ಮನಸ್ತಾಪ ಇಲ್ಲ. ತಂದೆಗೆ ಕೊಟ್ಟ ಗೌರವ ಪ್ರಿಯಾಂಕ್ ನನಗೆ ಕೊಡುತ್ತಾರೆ. ಕೃಷ್ಣ ಬೈರೇಗೌಡ ಜೊತೆಗೂ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದರು.

Share This Article