ಕೆಎಸ್‌ಆರ್‌ಟಿಸಿ, ಬಿಎಂಟಿಸಿಗೆ ರಾಷ್ಟ್ರೀಯ ಪ್ರಶಸ್ತಿ

Public TV
2 Min Read

ನವದೆಹಲಿ: ಕೆಎಸ್‌ಆರ್‌ಟಿಸಿಗೆ (KSRTC) ಒಟ್ಟು 9 ವರ್ಗಗಳಲ್ಲಿ ಹಾಗೂ ಬಿಎಂಟಿಸಿಗೆ (BMTC) 4 ವರ್ಗಗಳಲ್ಲಿ ಭಾರತೀಯ ಸಾರ್ವಜನಿಕ ಸಂಪರ್ಕ ಮಂಡಳಿಯ Corporate Collateral ರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿವೆ.

ಭಾರತೀಯ ಸಾರ್ವಜನಿಕ ಸಂಪರ್ಕ ಮಂಡಳಿ ವತಿಯಿಂದ ನವದೆಹಲಿಯ ಪಿಹೆಚ್.ಡಿ ಚೇಂಬರ್ಸ್‌ನಲ್ಲಿ 17ನೇ ವಿಶ್ವ ಸಂವಹನ ಸಮ್ಮೇಳನ ಆಯೋಜಿಸಲಾಗಿತ್ತು. ಸಮಾರಂಭದಲ್ಲಿ ಬಾಂಗ್ಲಾದೇಶದ ಮಾಹಿತಿ ಆಯುಕ್ತ ಗುಲಾಂ ರೆಹಮಾನ್, ಪಿಆರ್‌ಸಿಐ ಗೌರವ ಮುಖ್ಯಸ್ಥ ಎಂ.ಬಿ. ಜಯರಾಂ, ಎನ್‌ಎಫ್‌ಎಲ್ ನಿರ್ದೇಶಕ ಬಿ.ವಿ. ವಿಠ್ಠಲ್, ಸ್ವಿಜರ್ಲೆಂಡ್‌ನ ಮಾಧ್ಯಮ ಮತ್ತು ಪತ್ರಿಕೋದ್ಯಮ ಸಂಸ್ಥೆ ನಿರ್ದೇಶಕ ಪ್ರೊ. ಮ್ಯಾಥ್ಯು ಹಿಬರ್ಡ್‌ ಅವರು ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಇದನ್ನೂ ಓದಿ: ರಾಷ್ಟ್ರಪತಿ ವಿಚಾರದಲ್ಲಿ ಕಾಂಗ್ರೆಸ್‌ನಿಂದ ಚಿಲ್ಲರೆ ರಾಜಕಾರಣ – ಪ್ರಹ್ಲಾದ್‌ ಜೋಶಿ ಕಿಡಿ

ಕೆಎಸ್‌ಆರ್‌ಟಿಸಿ
ವರ್ಷದ ಅತ್ಯುತ್ತಮ ಗ್ರಾಹಕ ಸ್ನೇಹಿ ಸಂಸ್ಥೆ – ಡೈಮಂಡ್ ಪ್ರಶಸ್ತಿ, ಅತ್ಯುತ್ತಮ ವರ್ಷದ ಸೇವಾ ಉಪಕ್ರಮ – ಡೈಮಂಡ್ ಪ್ರಶಸ್ತಿ, ಸಾಂಸ್ಥಿಕ ಹಾಗೂ ವ್ಯಾವಹಾರಿಕ ಸಂಪರ್ಕ ಉಪಕ್ರಮ – ಡೈಮಂಡ್ ಪ್ರಶಸ್ತಿ, ಗ್ರಾಹಕ ಸೇವೆಯಲ್ಲಿ ಅತ್ಯುತ್ತಮ ತಾಂತ್ರಿಕತೆ ಬಳಕೆ – ಬೆಳ್ಳಿ ಪ್ರಶಸ್ತಿ, ವಿವಿಧತೆ ಹಾಗೂ ಸಮಾನತೆಯ ಉತ್ತಮ ಉಪಕ್ರಮ – ಬೆಳ್ಳಿ ಪ್ರಶಸ್ತಿ, ಅತ್ಯುತ್ತಮ ವರ್ಷದ ಉಪಕ್ರಮ ಉತ್ಪನ್ನ – ಬೆಳ್ಳಿ ಪ್ರಶಸ್ತಿ, ಅತ್ಯುತ್ತಮ ಮಾನವ ಸಂಪನ್ಮೂಲ ಉಪಕ್ರಮ – ಕಂಚಿನ ಪ್ರಶಸ್ತಿ, ಸಾರ್ವಜನಿಕ ಸಂಪರ್ಕ ಅಧ್ಯಯನ – ಕಂಚಿನ ಪ್ರಶಸ್ತಿ, ಪ್ರಾದೇಶಿಕ ಆಂತರಿಕ ನಿಯತಕಾಲಿಕ ಮುದ್ರಣ – ಸಮಾಧಾನಕರ ಪ್ರಶಸ್ತಿ.

ಕೆಎಸ್‌ಆರ್‌ಟಿಸಿಯ ವಿಭಾಗೀಯ ನಿಯಂತ್ರಣಾಧಿಕಾರಿಗಳಾದ ಹಿಮವರ್ಧನ ನಾಯ್ಡು ಅಲೂರಿ, ವಿ.ಬಸವರಾಜು, ಎಸ್.ಲಕ್ಷ್ಮಣ್, ಎಸ್.ಪಿ. ನಾಗರಾಜ ಅವರು ನಿಗಮದ ಪರವಾಗಿ ಪ್ರಶಸ್ತಿ ಸ್ವೀಕರಿಸಿದರು. ಇದನ್ನೂ ಓದಿ: ಸೆ.26ರಂದು ಬೆಂಗಳೂರು ಬಂದ್ ಜೊತೆಗೆ ರಾಮನಗರ ಬಂದ್ – ಹಲವು ಸಂಘಟನೆಗಳ ಬೆಂಬಲ

ಬಿಎಂಟಿಸಿ
ಸಾಂಸ್ಥಿಕ ಕೈಪಿಡಿ (Corporate Broucher) – ಡೈಮಂಡ್ ಪ್ರಶಸ್ತಿ, ಗ್ರಾಹಕ ಸೇವೆಯಲ್ಲಿ ಅತ್ಯುತ್ತಮ ತಾಂತ್ರಿಕತೆ ಬಳಕೆ – ಚಿನ್ನದ ಪ್ರಶಸ್ತಿ, ಅತ್ಯುತ್ತಮ ಮಾನವ ಸಂಪನ್ಮೂಲ ಉಪಕ್ರಮ – ಬೆಳ್ಳಿ ಪ್ರಶಸ್ತಿ, ವರ್ಷದ ಅತ್ಯುತ್ತಮ ಸೃಜನಶೀಲ ಜಾಹೀರಾತು – ಕಂಚಿನ ಪ್ರಶಸ್ತಿ. ಪಶ್ಚಿಮ ವಲಯ ವಿಭಾಗೀಯ ನಿಯಂತ್ರಣಾಧಿಕಾರಿ ಎನ್.ಶ್ರೀನಾಥ್ ಪ್ರಶಸ್ತಿ ಸ್ವೀಕರಿಸಿದರು.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್