ಕಾರವಾರದ ಯುವಕನಿಗೆ ದಿಗ್ಭಂಧನ – ಪೋಷಕರು ಜಿಲ್ಲಾಡಳಿತದ ಮೊರೆ

Public TV
1 Min Read

ಕಾರವಾರ: ಕೊರೊನಾ ವೈರಸ್ ಆತಂಕ ಹಿನ್ನೆಲೆಯಲ್ಲಿ ಜಪಾನಿನ ಯುಕೋಮದಲ್ಲಿ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಯುವಕನಿದ್ದ ಹಡಗನ್ನು ತಡೆ ಹಿಡಿದು ಘಟನೆ ನಡೆದಿದ್ದು, ತಮ್ಮ ಮಗನನ್ನು ರಕ್ಷಿಸಿ ಕರೆ ತರುವಂತೆ ಅವರ ಪೋಷಕರು ಜಿಲ್ಲಾಡಳಿತದ ಮೊರೆ ಹೋಗಿದ್ದಾರೆ.

ಜಪಾನಿನ ಡೈಮಂಡ್ ಪ್ರಿನ್ಸಸ್ ಕ್ರೂಸ್ ಹಡಗಿನಲ್ಲಿ ಕಾರವಾರದ ಪದ್ಮನಾಭನಗರದ ಯುವಕ ಅಭಿಷೇಕ್ ಕಳೆದ ಆರು ತಿಂಗಳಿಂದ ಸ್ಟಿವರ್ಡ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಹಡಗು ಪ್ರವಾಸಿಗರನ್ನು ಕರೆದುಕೊಂಡು ಸಿಂಗಾಪುರ ಹಾಗೂ ಚೀನಾಕ್ಕೆ ಪ್ರವಾಸ ಮುಗಿಸಿ, ಮತ್ತೆ ಚೀನಾಗೆ 2,600 ಜನ ಪ್ರವಾಸಿಗರನ್ನು ಕರೆದೊಯ್ಯುತ್ತಿತ್ತು.

ಈ ವೇಳೆ ಮೊದಲು 10 ಜನ ನಂತರ 15 ಹೀಗೆ ಒಟ್ಟು 40 ಜನರಿಗೆ ಸೊಂಕು ಹರಡಿತ್ತು. ಈ ಕಾರಣದಿಂದ ಹಡಗನ್ನು ಕಳೆದ ಆರು ದಿನದಿಂದ ಸಮುದ್ರದಲ್ಲೇ ತಡೆ ಹಿಡಿದಿದ್ದು, ದಿಬ್ಭಂದನದಲ್ಲಿ ಇರಿಸಲಾಗಿದೆ. ಹಡಗಿನ ಹೋಟಲೊಂದರಲ್ಲಿ ಸ್ಟಿವರ್ಡ್ ಆಗಿ ಕಾರ್ಯನಿರ್ವಹಿಸುತ್ತಿರುವ ಅಭಿಷೇಕ್ ವೈರಸ್‍ನ ಭಯದಿಂದ ಇತ್ತ ಮನೆಗೂ ಬಾರದೆ ಚೈನಾಕ್ಕೂ ಹೋಗದಂತಾಗಿದೆ.

ಮನೆಯವರಿಗೆ ಸಂಪರ್ಕಿಸಿ ತನ್ನನ್ನು ದೇಶಕ್ಕೆ ಕರೆಸಿಕೊಳ್ಳುವಂತೆ ಅಭಿಷೇಕ್ ತನ್ನ ಪೋಷಕರಿಗೆ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪೋಷಕರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು, ಇನ್ನು ಸೋಂಕು ತಗಲದ ತಮ್ಮ ಮಗನನ್ನು ರಕ್ಷಿಸುವಂತೆ ಹಾಗೂ ಮರಳಿ ಭಾರತಕ್ಕೆ ಕರೆ ತರುವಂತೆ ಮನವಿ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *