ಮತ್ಸ್ಯಕನ್ನೆಯಾಗಬೇಕಂತೆ ಸೋನಾಕ್ಷಿ

Public TV
2 Min Read

ನವದೆಹಲಿ: ಕೊರೊನಾ ಮಹಾಮಾರಿಯಿಂದಾಗಿ ದೇಶವೇ ಲಾಕ್‍ಡೌನ್ ಆಗಿದ್ದು, ಊಟಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ನಟ, ನಟಿಯರಿಗೂ ಯಾವುದೇ ಚಟುವಟಿಕೆಗಳನ್ನು ಮಾಡಲು ಅವಕಾಶ ಸಿಗುತ್ತಿಲ್ಲ. ಮನೆಯಲ್ಲೇ ಹಲವರು ವಿವಿಧ ಬಗೆಯ ಕ್ರಿಯೇಟಿವಿಟಿಯಲ್ಲಿ ತೊಡಗಿದ್ದು, ಇನ್ನೂ ಹಲವರು ಬೇಸರದಿಂದ ಯಾವಾಗ ಲಾಕ್‍ಡೌನ್ ಮುಗಿಯುತ್ತದೆಯೋ ಎಂದು ಕಾಯುತ್ತಿದ್ದಾರೆ. ಬಾಲಿವುಡ್ ಬೆಡಗಿ ಸೋನಾಕ್ಷಿ ಸಿನ್ಹಾ ಸಹ ಲಾಕ್‍ಡೌನ್ ಮುಗಿದ ಮೇಲೆ ಮೊದಲು ಈ ಕೆಲಸ ಮಾಡುತ್ತೇನೆ ಎಂದು ತಿಳಿಸಿದ್ದಾರೆ.

ಕೊರೊನಾ ಲಾಕ್‍ಡೌನ್‍ನಿಂದಾಗಿ ಸೆಲೆಬ್ರೆಟಿಗಳ ಕೆಲಸ, ಚಟುವಟಿಕೆಗಳಿಗೂ ಬ್ರೇಕ್ ಬಿದ್ದಿದ್ದು, ಜೊತೆಗೆ ಎಂಜಾಯ್‍ಮೆಂಟ್‍ಗೂ ಕಡಿವಾಣ ಬಿದ್ದಿದೆ. ಹೀಗಾಗಿ ಹಲವರು ಈ ಕುರಿತು ತಮ್ಮ ಅನಿಸಿಕೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದು, ಕೊರೊನಾ ತುರ್ತು ಪರಿಸ್ಥಿತಿ ಮುಗಿದ ನಂತ ಈ ಕೆಲಸ ಮಾಡಬೇಕು, ಆ ಕೆಲಸ ಮಾಡಬೇಕು, ಅಲ್ಲಿಗೆ ಹೋಗಬೇಕು ಎಂದೆಲ್ಲ ಹೇಳಿಕೊಳ್ಳುತ್ತಿದ್ದಾರೆ.

ಬಹುತೇಕ ಸೆಲೆಬ್ರೆಟಿಗಳು ತಮ್ಮ ಹವ್ಯಾಸಗಳ ಕುರಿತು ಚಿತ್ತ ಹರಿಸಿದ್ದು, ಚಿತ್ರ ಬಿಡಿಸುವುದು, ಓದುವುದು, ಬರವಣಿಗೆ, ಸಹಾಯ ಮಾಡುವುದು, ಕುಟುಂಬದವರೊಂದಿಗೆ ಕಾಲ ಕಳೆಯುವುದು ಸೇರಿದಂತೆ ವಿವಿಧ ಚಟುವಟಿಕೆಗಳಲ್ಲಿ ಬ್ಯುಸಿಯಾಗಿದ್ದಾರೆ. ಅದೇ ರೀತಿ ಬಾಲಿವುಡ್ ಬೆಡಗಿ ಸೋನಾಕ್ಷಿ ಸಿನ್ಹಾ ಸಹ ಡ್ರಾಯಿಂಗ್, ಕ್ರಾಫ್ಟ್ ಸೇರಿದಂತೆ ಹಲವು ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಇದೇ ವೇಳೆ ಲಾಕ್‍ಡೌನ್ ಬಳಿಕ ಮೊದಲು ಈಜಾಡಲು ಹೋಗಬೇಕು, ನೀರಲ್ಲಿ ಡೈ ಹೊಡಿಯಬೇಕು ಎಂದು ಹೇಳಿಕೊಂಡಿದ್ದಾರೆ.

ಇತ್ತೀಚೆಗಷ್ಟೇ ಇನ್‍ಸ್ಟಾಗ್ರಾಮ್‍ನಲ್ಲಿ 19 ಮಿಲಿಯನ್ ಹಿಂಬಾಲಕರನ್ನು ಹೊಂದಿದ ಸಂತೋಷವನ್ನು ಹಂಚಿಕೊಂಡಿದ್ದು, ಇದೇ ಸಂದರ್ಭದಲ್ಲಿ ತಮ್ಮ ಮುಂದಿನ ಕೆಲಸದ ಕುರಿತು ಮಾತನಾಡಿದ್ದಾರೆ. ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿರುವ ಅವರು, 8 ದಿನಗಳ ಸಾಮಾಜಿಕ ಜಾಲತಾಣಗಳಿಂದ ಅಂತರ ಕಾಯ್ದುಕೊಂಡ ನಂತರ ಇದೀಗ 1.9 ಕೋಟಿ ಜನರು ನನ್ನನ್ನು ಹಿಂಬಾಲಿಸುತ್ತಿರುವುದಕ್ಕೆ ಧನ್ಯವಾದ ತಿಳಿಸುವ ಸಮಯ. ಈ ವಿಡಿಯೋ ಥ್ರೋಬ್ಯಾಕ್ ಹಾಗೂ ಪರಿಸ್ಥಿತಿ ಎಲ್ಲ ಸರಿಯಾದ ನಂತರ ಒಂದು ಬಾರಿ ಈ ರೀತಿ ಮಾಡಬೇಕೆಂದು ಆಸೆಯಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ.

ಬಹುತೇಕರು ಕೊರೊನಾ ತುರ್ತು ಮುಗಿದ ನಂತರ ಆ ಕೆಲಸ ಮಾಡಬೇಕು, ಈ ಕೆಲಸ ಮಾಡಬೇಕು ಎಂದುಕೊಂಡಿರುತ್ತಾರೆ. ಅದೇ ರೀತಿ ಸೋನಾಕ್ಷಿ ಸಿನ್ಹಾ ಈಜಾಡಬೇಕು, ನೀರಲ್ಲಿ ಡೈ ಹೊಡಿಯಬೇಕು ಎಂದು ತಮ್ಮ ಅನಿಸಿಕೆ ಯನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *