ಕೊರೊನಾ ತೊಲಗಿದ್ಮೇಲೆ ಹಬ್ಬ ಆಚರಿಸೋಣ ಎಂದ ಪ್ರಣೀತಾ

Public TV
2 Min Read

ಬೆಂಗಳೂರು: ಸ್ಯಾಂಡಲ್‍ವುಡ್ ಕ್ಯೂಟ್ ಬೆಡಗಿ ಪೊರ್ಕಿ ಖ್ಯಾತಿಯ ಪ್ರಣೀತಾ ಸುಭಾಶ್ ಅವರು ಬಾಲಿವುಡ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ಇದರ ಮಧ್ಯೆಯೇ ಮನೆಯವರೊಂದಿಗೆ ಸಿಂಪಲ್ ಆಗಿ ಹಬ್ಬನವನ್ನು ಆಚರಿಸಿದ್ದಾರೆ. ಈ ವೇಳೆ ಅಭಿಮಾನಿಗಳಿಗೂ ಸಲಹೆ ನೀಡಿದ್ದು, ಕೊರೊನಾ ವಿರುದ್ಧದ ಹೋರಾಟ ಮುಗಿಯುವ ವರೆಗೆ ಹೆಚ್ಚು ಜನ ಸೇರಿ ಹಬ್ಬ ಆಚರಿಸುವುದು ಬೇಡ ಎಂದು ಕರೆ ನೀಡಿದ್ದಾರೆ.

ಪ್ರಣೀತಾ ಅವರು ಪೊರ್ಕಿ ಸಿನಿಮಾ ನಂತರ ಸ್ಯಾಂಡಲ್‍ವುಡ್‍ನಲ್ಲಿ ಹೆಚ್ಚು ಕಾಣಿಸಿಕೊಳ್ಳಲಿಲ್ಲ. ಆದರೆ ತಮಿಳು ಹಾಗೂ ಬಾಲಿವುಡ್ ನಲ್ಲಿ ಅವರಿಗೆ ಅವಕಾಶ ಹುಡುಕಿಕೊಂಡು ಬಂತು. ಹೀಗಾಗಿ ತಮಿಳು ಹಾಗೂ ಹಿಂದಿಯಲ್ಲಿ ಬ್ಯುಸಿಯಾಗಿದ್ದಾರೆ. ಪ್ರಸ್ತುತ ಹಿಂದಿಯ ಹಂಗಾಮಾ-2 ಸಿನಿಮಾದಲ್ಲಿ ಪ್ರಣೀತಾ ಬ್ಯುಸಿಯಾಗಿದ್ದು, ಕೊರೊನಾ ವೈರಸ್ ಹಿನ್ನೆಲೆ ಚಿತ್ರೀಕರಣವನ್ನು ಬಂದ್ ಮಾಡಲಾಗಿದೆ. ಹೀಗಾಗಿ ಕುಟುಂಬದೊಂದಿಗೆ ಕಾಲ ಕಳೆಯುತ್ತಿದ್ದಾರೆ.

https://www.instagram.com/p/B-JKcd3g7JV/

ಕುಟುಂಬದ ಜೊತೆಗೆ ಹಬ್ಬವನ್ನೂ ಆಚರಿಸಿರುವ ಅವರು ಸಡಗರದಿಂದ ಆಚರಿಸದೇ ಸಿಂಪಲ್ ಆಗಿ ಹಬ್ಬ ಮಾಡಿದ್ದಾರೆ. ಇದರ ಜೊತೆಗೆ ಅಭಿಮಾನಿಗಳಿಗೂ ಸಲಹೆ ನೀಡಿದ್ದು, ಯಾವುದೇ ಕಾರಣಕ್ಕೂ ಹೆಚ್ಚು ಜನ ಸೇರಿ ಹಬ್ಬ ಆಚರಿಸಬೇಡಿ, ಇದೀಗ ಪರಿಸ್ಥಿತಿ ತುಂಬಾ ಗಂಭೀರವಾಗಿದ್ದು, ಸ್ವಯಂ ದಿಗ್ಬಂಧನ ವಿಧಿಸಿಕೊಳ್ಳಬೇಕಿದೆ. ಹೀಗಾಗಿ ಈ ವರ್ಷ ಸಾಧಾರಣವಾಗಿ ಹಬ್ಬ ಆಚರಿಸಿ ಕೊರೊನಾ ಪಿಡುಗು ತೊಲಗಿದ ಮೇಲೆ ಸಂಭ್ರಮದಿಂದ ಹಬ್ಬ ಆಚರಿಸಬಹುದು ಎಂದು ಕರೆ ನೀಡಿದ್ದಾರೆ.

ಈ ಕುರಿತು ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿರುವ ಅವರು, ಯುಗಾದಿ ನಮ್ಮ ಹಿಂದೂಗಳ ಹೊಸ ವರ್ಷ, ಈ ಹಬ್ಬದಲ್ಲಿ ಬೇವು ಬೆಲ್ಲದ ಮೂಲಕ ಸುಖ ದುಃಖಗಳನ್ನು ಸಮನಾಗಿಸ್ವೀಕರಿಸುವುದಾಗಿದೆ. ಬೇವು ನಮ್ಮ ಕಷ್ಟ ಹಾಗೂ ದುಃಖಗಳನ್ನು ಪ್ರತಿನಿಧಿಸಿದರೆ, ಬೆಲ್ಲ ನಮ್ಮ ಸಂತಸದ ಕ್ಷಣಗಳನ್ನು ಸೂಚಿಸುತ್ತಿದೆ. ನಮ್ಮ ಜೀವನದಲ್ಲಿ ಇವೆರಡೂ ಬಹಳ ಮುಖ್ಯ. ಇದೀಗ ನಾವು ಮನೆಯಲ್ಲಿ ದಿಗ್ಬಂಧನದಲ್ಲಿದ್ದೇವೆ. ಹೀಗಾಗಿ ಸರಳವಾಗಿ ಹಬ್ಬ ಆಚರಿಸೋಣ. ನಾನೂ ಸಹ ನಮ್ಮ ಕುಟುಂಬದವರೊಂದಿಗೆ ಸಾಧಾರಣವಾಗಿ ಹಬ್ಬ ಆಚರಿಸುತ್ತಿದ್ದೇನೆ. ನೀವೂ ಅದನ್ನೇ ಪಾಲಿಸಿ. ಹೀಗೇ ನಾವು ಸ್ವಯಂ ದಿಗ್ಬಂಧನ ವಿಧಿಸಿಕೊಂಡರೆ ಕೊರೊನಾ ವಿರುದ್ಧದ ಹೋರಾಟದಲ್ಲಿ ಜಯಗಳಿಸುತ್ತೇವೆ. ಅವತ್ತೇ ಹಬ್ಬವನ್ನು ಸಂಭ್ರಮದಿಂದ ಆಚರಿಸೋಣ. ಈಗ ನಡೆಯುತ್ತಿರುವುದನ್ನು ಬೇವು ತಿಂದ ಸಂದರ್ಭ ಎಂದು ಭಾವಿಸಬೇಕು. ಹೀಗಾಗಿ ಸಿಂಪಲ್ ಯುಗಾದಿಯ ಶುಭಾಯಶ ಎಂದು ವಿಡಿಯೋ ಪೋಸ್ಟ್‍ನಲ್ಲಿ ತಿಳಿಸಿದ್ದಾರೆ.

ಪ್ರಣೀತಾ ಅವರು ಸದ್ಯ ಹಿಂದಿಯ ಹಂಗಾಮಾ-2 ಚಿತ್ರದಲ್ಲಿ ನಟಿಸುತ್ತಿದ್ದು, ಇದರಲ್ಲಿ ಮಿಝಾನ್ ಜಫ್ರಿ, ಪರೇಷ್ ರಾವಲ್ ಹಾಗೂ ಶಿಲ್ಪಾ ಶೆಟ್ಟಿ ಯವರ ಜೊತೆಗೆ ಪ್ರಣೀತಾ ಸಹ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಸಿನಿಮಾದ ಪೋಸ್ಟರ್ ಸಾಕಷ್ಟು ಸದ್ದು ಮಾಡುತ್ತಿದ್ದು, ಕಾಮಿಡಿ ಸಿನಿಮಾ ಕುರಿತ ಕುತೂಹಲ ಹೆಚ್ಚಾಗಿದೆ. ಈ ಚಿತ್ರವನ್ನು ಪ್ರಿಯದರ್ಶನ್ ನಿರ್ದೇಶಿಸುತ್ತಿದ್ದಾರೆ.

ಕನ್ನಡದ ಪೊರ್ಕಿ ಸೇರಿದಂತೆ ತಮಿಳಿನ ಸಗುನಿ, ತೆಲುಗಿನ ಅತ್ತಾರಿಂಟಿಕಿ ದಾರೆದಿ ಸೇರಿದಂತೆ ವಿವಿಧ ಸಿನಿಮಾಗಳಲ್ಲಿ ಪ್ರಣೀತಾ ನಟಿಸಿದ್ದಾರೆ. ಇದೀಗ ಹಾಸ್ಯ ಪ್ರಧಾನ ಬಾಲಿವುಡ್ ಚಿತ್ರ ಹಂಗಾಮಾ-2ದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *