ಲಸಿಕಾಕರಣದಲ್ಲಿ ವಿದೇಶಗಳಿಂತ ಕರ್ನಾಟಕವೇ ಫಾಸ್ಟ್ ಅಂಡ್ ಬೆಸ್ಟ್

Public TV
1 Min Read

ಬೆಂಗಳೂರು: ವಿದೇಶಗಳಿಗೆ ಹೋಲಿಸಿದರೆ ಕರ್ನಾಟಕವೇ ಅತೀ ವೇಗವಾಗಿ ಸಾರ್ವಜನರಿಗೆ ಲಸಿಕೆ ವಿತರಣೆ ಮಾಡುತ್ತಿದೆ. ಅಲ್ಲದೇ ಸೆಪ್ಟೆಂಬರ್ ತಿಂಗಳಲ್ಲಿ ಮತ್ತಷ್ಟು ವೇಗವಾಗಿ ಲಸಿಕಾಕರಣ ನಡೆಸುತ್ತಿದೆ.

ಕೆಲವು ವಿದೇಶಗಳಿಗಿಂತ ದೇಶದ ಹಲವು ರಾಜ್ಯಗಳಲ್ಲಿ ಪ್ರತಿದಿನ ಹೆಚ್ಚಾಗಿ ಲಸಿಕೆ ನೀಡಲಾಗುತ್ತಿದೆ. ರಷ್ಯಾದಲ್ಲಿ ಪ್ರತಿನಿತ್ಯ 3.7 ಲಕ್ಷ ಜನರಿಗೆ ಲಸಿಕೆ ವಿತರಣೆಯಾದರೆ, ಕರ್ನಾಟಕದಲ್ಲಿ ಪ್ರತಿನಿತ್ಯ 3.8 ಲಕ್ಷ ಲಸಿಕೆ ನೀಡಲಾಗುತ್ತಿದೆ. ಕರ್ನಾಟಕ ಹೊರತುಪಡಿಸಿ ಉತ್ತರಪ್ರದೇಶ, ಮಧ್ಯಪ್ರದೇಶ, ಹರ್ಯಾಣ, ಗುಜರಾತ್‍ನಲ್ಲೂ ವಿದೇಶಗಳಿಗಿಂತ ದೈನಂದಿನಗಳಲ್ಲಿ ಹೆಚ್ಚು ಡೋಸ್ ವಿತರಿಸಲಾಗುತ್ತಿದೆ.  ಇದನ್ನೂ ಓದಿ: ಲ್ಯಾಬ್ ಉಪಕರಣ ಖರೀದಿಯಲ್ಲಿ 34 ಕೋಟಿ ರೂ. ಕಿಕ್ ಬ್ಯಾಕ್- ಸಿಬಿಐ ತನಿಖೆಗೆ ಕಾಂಗ್ರೆಸ್ ಆಗ್ರಹ

ಹೌದು, ದೇಶದಲ್ಲಿ ದೈನಂದಿನ ಲಸಿಕೆ ವಿತರಣೆಯಲ್ಲಿ ಉತ್ತರ ಪ್ರದೇಶ ನಂಬರ್ 1 ಸ್ಥಾನದಲ್ಲಿದ್ದರೆ, ಕರ್ನಾಟಕಕ್ಕೆ ಮೂರನೇ ಸ್ಥಾನ ದೊರಕಿದೆ. ಇನ್ನೂ ರಾಜ್ಯಗಳ ಲಸಿಕಾಕರಣ ವೇಗದ ಬಗ್ಗೆ ಕೇಂದ್ರ ಸರ್ಕಾರ ಖುದ್ದು ಗ್ರಾಫ್ ಮೂಲಕ ಅಂಕಿ ಅಂಶ ಬಿಡುಗಡೆಗೊಳಿಸಿದೆ. ಈ ಮೂಲಕ ಅಮೇರಿಕಕ್ಕಿಂತಲೂ ವೇಗವಾಗಿದೆ ಉತ್ತರಪ್ರದೇಶದಲ್ಲಿ ಲಸಿಕಾಕರಣ ನಡೆಯುತ್ತಿದೆ ಎಂಬ ವಿಚಾರ ಬಹಿರಂಗಗೊಂಡಿದೆ.  ಇದನ್ನೂ ಓದಿ: ಚುನಾವಣೆ ಸಂದರ್ಭ ಮಾತ್ರವಲ್ಲ, ನಿರಂತರವಾಗಿ ಜನರ ಯೋಗಕ್ಷೇಮ ವಿಚಾರಿಸಬೇಕು: ಆರ್.ಅಶೋಕ್

Indian states vaccinating at a faster pace than foreign nations

ಪ್ರತಿನಿತ್ಯ ಅಮೇರಿಕಾದಲ್ಲಿ 8.07 ಲಕ್ಷ ಡೋಸ್ ವಿತರಣೆ ಮಾಡುತ್ತಿದ್ದರೆ, ಉತ್ತರಪ್ರದೇಶ ಒಂದರಲ್ಲಿಯೇ ಪ್ರತಿದಿನ 11.73 ಲಕ್ಷ ಡೋಸ್ ಲಸಿಕೆ ನೀಡಲಾಗುತ್ತಿದೆ. ಯುಪಿ ಬಳಿಕ ಗುಜರಾತ್ ಎರಡನೇ ಸ್ಥಾನ, ಕರ್ನಾಟಕ ಮೂರನೇ ಸ್ಥಾನ, ಮಧ್ಯಪ್ರದೇಶಕ್ಕೆ ನಾಲ್ಕು ಹಾಗೂ ಹರ್ಯಾಣ ಐದನೇ ಸ್ಥಾನ ಲಭಿಸಿದೆ.

ದೇಶದ ಟಾಪ್ ಐದು ರಾಜ್ಯಗಳ ದೈನಂದಿನ ಲಸಿಕಾ ವೇಗ:
ಯುಪಿ 11.73 ಲಕ್ಷ.
ಗುಜರಾತ್ 4.80 ಲಕ್ಷ.
ಕರ್ನಾಟಕ 3.82 ಲಕ್ಷ.
ಮಧ್ಯಪ್ರದೇಶ 3.71 ಲಕ್ಷ.
ಹರ್ಯಾಣ 1.52 ಲಕ್ಷ.

ವಿದೇಶಗಳಲ್ಲಿ ಹೇಗಿದೆ ದೈನಂದಿನ ಲಸಿಕಾಕರಣ ವೇಗ:
ಅಮೆರಿಕ 8.07 ಲಕ್ಷ.
ಮೆಕ್ಸಿಕೊ 4.56 ಲಕ್ಷ.
ರಷ್ಯಾ 3.68 ಲಕ್ಷ.
ಫ್ರಾನ್ಸ್ 2.84.
ಕೆನಡಾ 85 ಸಾವಿರ

Share This Article
Leave a Comment

Leave a Reply

Your email address will not be published. Required fields are marked *