ಮತ್ತೆ ವಕ್ಕರಿಸಿಕೊಂಡ ಕೊರೊನಾ – ಸೋಮವಾರದಿಂದ ಟೆಸ್ಟ್ ಹೆಚ್ಚಳ, ಮುಂಜಾಗ್ರತೆ ವಹಿಸುವಂತೆ ಕರೆ

Public TV
3 Min Read

ಬೆಂಗಳೂರು: ಸುಮಾರು ಎರಡೂವರೆ ವರ್ಷಗಳ ಗ್ಯಾಪ್ ಬಳಿಕ ಮತ್ತೆ ಕೊರೊನಾ (Corona) ಮತ್ತೆ ವಕ್ಕರಿಸಿದೆ. ಹೆಮ್ಮಾರಿಗೆ ಬೆಂಗಳೂರಿನಲ್ಲಿ (Bengaluru) ಮೊದಲ ಬಲಿಯಾಗಿದೆ. ವೈಟ್‌ಫೀಲ್ಡ್ ಮೂಲದ 85 ವರ್ಷ ವೃದ್ಧರಲ್ಲಿ ಕೊರೊನಾ ಕಾಣಿಸಿಕೊಂಡಿತ್ತು. ಕೊರೊನಾ ಸೋಂಕಿನಿಂದ ಉಸಿರಾಟದಲ್ಲಿ ಸಮಸ್ಯೆ ಉಂಟಾಗಿ ಅಸುನೀಗಿದ್ದಾರೆ.

ಈ ಬಗ್ಗೆ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಮಾತನಾಡಿ, ಡೆತ್ ಆಡಿಟ್ ಮಾಡೋದಕ್ಕೆ ಹೇಳಿದ್ದೇನೆ. ಕೋವಿಡ್‌ನಿಂದ ಸಾವು ಆಯ್ತಾ ಬೇರೆ ಕಾರಣನಾ ಎಂದು ಪರಿಶೀಲಿಸುತ್ತೇವೆ ಎಂದು ಹೇಳಿದರು. ರಾಜ್ಯದಲ್ಲಿ ಒಟ್ಟು 47 ಪಾಸಿಟಿವ್ ಕೇಸ್‌ಗಳಿವೆ. ಬೆಂಗಳೂರು ಕೋವಿಡ್ ಹಾಟ್‌ಸ್ಪಾಟ್ ಆಗ್ತಿದ್ದು, 38 ಕೇಸ್‌ಗಳಿವೆ. ಇದನ್ನೂ ಓದಿ: ಉಡುಪಿಯಲ್ಲಿ 3 ದಿನ ಭಾರೀ ಮಳೆ ಮುನ್ಸೂಚನೆ – ರೆಡ್ ಅಲರ್ಟ್ ಘೋಷಣೆ

ಇಂದಿನಿಂದ ಕೋವಿಡ್ ಟೆಸ್ಟ್ ಆರಂಭಿಸಲಾಗಿದೆ. ಹಾಗಾಗಿ ಸಾಮಾಜಿಕ ಅಂತರ, ಮಾಸ್ಕ್ ಕಡ್ಡಾಯ. ಸಭೆ, ಸಮಾರಂಭಗಳಲ್ಲಿ ಮಾಸ್ಕ್, ಅಂತರ ಪಾಲನೆ, ಸ್ಯಾನಿಟೈಸರ್ ಬಳಕೆ, ಬಸ್, ಮೆಟ್ರೋಗಳಲ್ಲಿ ನಿಯಮಾವಳಿ ಪಾಲನೆ ಸದ್ಯಕ್ಕೆ ಮುನ್ನೆಚ್ಚರಿಕಾ ಕ್ರಮಗಳಾಗಿವೆ. ಇನ್ನು ಸೋಂಕು ಹೆಚ್ಚಾದರೆ ಟೆಸ್ಟಿಂಗ್ ಹೆಚ್ಚಿಸುವ ಎಲ್ಲಾ ಸಾಧ್ಯತೆ ಇದೆ. ಈ ಬಾರಿ ಸೌಮ್ಯ ಗುಣಲಕ್ಷಣಗಳು ಹೊಂದಿದ್ದು, ಆತಂಕ ಪಡುವ ವಾತಾವರಣ ಇಲ್ಲ. ಆದರೆ ನಿರ್ಲಕ್ಷ್ಯ ಬೇಡ ಎಚ್ಚರಿಕೆ ಇರಲಿ. ಇದನ್ನೂ ಓದಿ: ಕೊಡಗಿನಲ್ಲಿ ಮಳೆ ಆರ್ಭಟ – ಮಹಾವಿದ್ಯಾಲಯಗಳಿಗೆ 2 ದಿನ ರಜೆ ಘೋಷಣೆ

ಇನ್ನು ಉಸಿರಾಟ, ಹೃದಯ ಸಂಬಂಧಿ ಸಮಸ್ಯೆ ಇದ್ದವರಿಗೆ ಟೆಸ್ಟ್ ಕಡ್ಡಾಯ. ಗುಣಲಕ್ಷಣಗಳು ಹೊಂದಿದ್ದವರಿಗೆ ಅಗತ್ಯ ಇದ್ದರೆ ಟೆಸ್ಟ್ ಮಾಡಿಸಬಹುದು. ಮೆಡಿಕಲ್ ಕಾಲೇಜ್, ಜಿಲ್ಲಾಸ್ಪತ್ರೆಗಳಲ್ಲಿ ಟೆಸ್ಟ್ ಮಾಡಲಾಗುವುದು. ಆಸ್ಪತ್ರೆಗಳಿಗೆ ಕೋವಿಡ್ ಟೆಸ್ಟ್ ಕಿಟ್ ರವಾನಿಸಿದ್ದು, ನಾಳೆಯಿಂದ ಪೂರ್ಣ ಪ್ರಮಾಣದಲ್ಲಿ ಟೆಸ್ಟಿಂಗ್ ನಡೆಯಲಿದೆ. ನಿತ್ಯ 150 ರಿಂದ 200 ಸ್ಯಾಂಪಲ್ ಟೆಸ್ಟಿಂಗ್‌ಗೆ ಟಾರ್ಗೆಟ್ ನೀಡಲಾಗಿದೆ. ಸಾರಿ ಕೇಸ್‌ಗಳ ಕಡ್ಡಾಯ ಟೆಸ್ಟಿಂಗ್‌ಗೆ ಸೂಚನೆ ನೀಡಿದ್ದು, ಸರ್ಕಾರಿ ಪ್ರಯೋಗಲಾಯಕ್ಕೆ ಸ್ಯಾಂಪಲ್ ರವಾನೆ ಮಾಡುವಂತೆ ಸೂಚನೆ ನೀಡಿದೆ. ಕೆಸಿ ಜನರಲ್ ಆಸ್ಪತ್ರೆಯಲ್ಲಿ 20 ಬೆಡ್‌ಗಳ ವ್ಯವಸ್ಥೆ ಮಾಡಿದ್ದು, ಬೌರಿಂಗ್ ಆಸ್ಪತ್ರೆಯಲ್ಲಿ ನಾಳೆಯಿಂದ ಕೋವಿಡ್ ವಾರ್ಡ್ ತೆರಯಲಾಗುವುದು. ಇದನ್ನೂ ಓದಿ: Kolar | ಚೆನ್ನೈ-ಬೆಂಗಳೂರು ಎಕ್ಸ್‌ಪ್ರೆಸ್‌ ವೇಯಲ್ಲಿ ಕಾರು ಅಪಘಾತ – ತಾಯಿ ಸಾವು, ಮಗ ಗಂಭೀರ

ಕೋವಿಡ್ ಪ್ರಕರಣ ಹೆಚ್ಚಾದರೆ ಹೇಗೆ ತಯಾರಿ ಮಾಡಬೇಕು ಎಂದು ಈಗಾಗಲೇ ಖಾಸಗಿ ಆಸ್ಪತ್ರೆಗಳ ಒಕ್ಕೂಟ ಫನಾ ಸೂಚನೆ ಕೊಟ್ಟಿದೆ. ಈಗಾಗಲೇ ಆರೋಗ್ಯ ಇಲಾಖೆಯಿಂದ ಎಲ್ಲರಿಗೂ ಒಂದು ಸೂಚನೆ ಸಿಕ್ಕಿದೆ. ಸದ್ಯಕ್ಕೆ ಕೋವಿಡ್ ಉಲ್ಬಣವಾಗಿಲ್ಲ. ಮುಂದಿನ ದಿನಗಳಲ್ಲಿ ಏನಾದರೂ ಕೋವಿಡ್ ಸಂಖ್ಯೆ ಹೆಚ್ಚಾದರೆ ಅನ್ನೋ ಆತಂಕ ಹಿನ್ನೆಲೆ ಸರ್ಕಾರದಿಂದ ಸೂಚನೆ ಇಲ್ಲದಿದ್ರೂ ಖಾಸಗಿ ಆಸ್ಪತ್ರೆ ಹಾಗೂ ನರ್ಸಿಂಗ್ ಹೋಮ್ಸ್ ಅಸೋಸಿಯೇಷನ್ ಕಡೆಯಿಂದ ಆಸ್ಪತ್ರೆಗಳಿಗೆ ಸೂಚನೆ ನೀಡಲಾಗಿದೆ. ಇದನ್ನೂ ಓದಿ: ಭಾರತ-ಪಾಕಿಸ್ತಾನ ಕದನ ವಿರಾಮದಲ್ಲಿ 3ನೇ ವ್ಯಕ್ತಿಯ ಪಾತ್ರವಿಲ್ಲ – ಮೋದಿ

ಸೋಮವಾರ ಕ್ರಮಗಳ ಬಗ್ಗೆ ಖಾಸಗಿ ಆಸ್ಪತ್ರೆಗಳ ಸಭೆ ನಡೆಯಲಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್, ಆಕ್ಸಿಜನ್, ವೆಂಟಿಲೇಟರ್ ಸಿದ್ಧತೆಗೆ ಸೂಚನೆ ಕೊಡುವ ಸಾಧ್ಯತೆ ಇದೆ. ಅಲ್ಲದೇ ನೆಗಡಿ, ಕೆಮ್ಮಿಗಿಂತ ಬಾಡಿಪೇನ್ ಬಂದವರ ಬಗ್ಗೆ ಹೆಚ್ಚು ನಿಗಾಗೆ ಸೂಚಿಸಲಾಗಿದೆ. ಇನ್ನು ಈ ಕೋವಿಡ್ ವೇರಿಯೆಂಟ್ ನೇರವಾಗಿ ಶ್ವಾಸಕೋಶಕ್ಕೆ ದಾಳಿ ಮಾಡುತ್ತೆ ಎಂದು ಹೇಳಲಾಗುತ್ತಿದೆ. ಆದ್ದರಿಂದ ಈ ಕೆಳಗಿನವರು ಹೆಚ್ಚಿನ ನಿಗಾವಹಿಸಬೇಕು. ಇದನ್ನೂ ಓದಿ: ಕೆಸಿಇಟಿ ಪರೀಕ್ಷೆಯಲ್ಲಿ ಕಾರ್ಕಳದ ಕ್ರಿಯೇಟಿವ್ ಕಾಲೇಜಿನ ಸುಮಂತ್ ರಾಜ್ಯಕ್ಕೆ 4ನೇ ರ‍್ಯಾಂಕ್

ಯಾರೆಲ್ಲಾ ಹೆಚ್ಚಿನ ನಿಗಾ ವಹಿಸಬೇಕು?
– ಹಿರಿಯರ ನಾಗರಿಕರು
– ಮಕ್ಕಳು
– ಗರ್ಭಿಣಿಯರು
– ರೋಗನಿರೋಧಕ ಶಕ್ತಿ ಕಡಿಮೆ ಇರುವವರು
– ಕ್ಯಾನ್ಸರ್, ಟಿಬಿ ಸೇರಿ ಬೇರೆ ಆರೋಗ್ಯ ಸಮಸ್ಯೆ ಇರುವವರು

ಮಹಾರಾಷ್ಟ್ರದಲ್ಲಿ ಕೊರೊನಾ ಮಹಾಮಾರಿ ಬಲಿಗಳೊಂದಿಗೆ ಸೋಂಕು ಹೆಚ್ಚಳವಾಗುತ್ತಿದ್ದು, ಗಡಿ ಜಿಲ್ಲೆ ಬೀದರ್‌ನಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಫುಲ್ ಅಲರ್ಟ್ ಆಗಿದ್ದಾರೆ. ಬೀದರ್ ಬ್ರೀಮ್ಸ್ನಲ್ಲಿ 30 ಬೆಡ್‌ಗಳ ಕೋವಿಡ್ ವಾರ್ಡ್ ರೆಡಿಯಿದೆ. ಧಾರವಾಡ ಜಿಲ್ಲಾ ಆಸ್ಪತ್ರೆಯಲ್ಲಿ ಆಗಲೇ ಮುಂಜಾಗ್ರತಾ ಕ್ರಮವಾಗಿ 10 ಬೆಡ್ ತಯಾರಿ ಮಾಡಿಕೊಂಡಿದ್ದಾರೆ. ಮೈಸೂರಲ್ಲಿ 3 ಸಕ್ರಿಯ ಕೇಸ್‌ಗಳಿವೆ. ಇನ್ನು, ಕೇರಳಕ್ಕೆ ಹೋಗಿ ಬಂದವರ ಪರೀಕ್ಷೆಗೆ ಗಡಿ ಭಾಗದಲ್ಲಿ ಸಿದ್ಧತೆ ನಡೆದಿದೆ. ಮೈಸೂರು ಜಿಲ್ಲಾ ಆಸ್ಪತ್ರೆಯಲ್ಲಿ 20 ಬೆಡ್, ತಾಲೂಕು ಆಸ್ಪತ್ರೆಗಳಲ್ಲಿ 10 ಬೆಡ್ ಮೀಸಲಿಡಲಾಗಿದೆ. ಆದರೆ, ಕೋಲಾರದಲ್ಲಿ ಆಕ್ಸಿಜನ್ ಪ್ಲ್ಯಾಂಟ್‌ಗಳು ಕೆಟ್ಟು ನಿಂತಿವೆ. ಇದನ್ನೂ ಓದಿ: ಕೋವಿಡ್ ಮಧ್ಯೆ ಶಾಲಾ ಕಾಲೇಜುಗಳು ಆರಂಭ – ಆರೋಗ್ಯ ಇಲಾಖೆಯಿಂದ ಹೈ ಅಲರ್ಟ್!

Share This Article