ವಾಷಿಂಗ್ಟನ್: ಕೋವಿಡ್-19 ಸಾಂಕ್ರಮಿಕ ರೋಗವನ್ನು ತಡೆಗಟ್ಟವ ಸಲುವಾಗಿ ಜನರು ತಮ್ಮ ದೈನಂದಿನ ಜೀವನದಲ್ಲಿ ಮಾಸ್ಕ್ ಧರಿಸವುದು ಸರ್ವೇಸಾಮಾನ್ಯವಾಗಿದೆ. ಕೊರೊನಾದಿಂದ ಹಲವಾರು ನಿಯಮಗಳನ್ನು ಜಾರಿಗೊಳಿಸಿದ್ದರೂ, ಅವುಗಳನ್ನು ಉಲ್ಲಂಘಿಸಿ ಜನರು ಅಜ್ಞಾನಿಗಳಂತೆ ವರ್ತಿಸುತ್ತಿದ್ದಾರೆ. ಇದಕ್ಕೆ ಸಾಕ್ಷಿಯಂಬಂತೆ ವಿಮಾನದಲ್ಲಿ ಮಾಸ್ಕ್ ಧರಿಸದೇ ಇರುವ ದಂಪತಿಯನ್ನು ಪ್ರಶ್ನಿಸಿದ ಸಿಬ್ಬಂದಿ ಮೇಲೆ ದೌರ್ಜನ್ಯ ಎಸಗಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಮಾಸ್ಕ್ ಧರಿಸಲು ನಿರಾಕರಿಸಿದ ದಂಪತಿ ಮತ್ತು ಅವರ ಮಕ್ಕಳನ್ನು ಜೆಟ್ ಬ್ಲೂ ವಿಮಾನದಲ್ಲಿದ್ದ ಸಿಬ್ಬಂದಿ ಹೊರಹಾಕಿದ್ದಾರೆ. ಈ ವಿಮಾನ ಫ್ಲೋರಿಡಾ ಫೋರ್ಟ್ ಲಾಡರ್‌ನಿಂದ ಕ್ಯಾಲಿಫೋರ್ನಿಯಾದ ಸ್ಯಾನ್ ಡಿಯಾಗೋದತ್ತ ಹೊರಡಬೇಕಿತ್ತು. ಈ ವೀಡಿಯೋವನ್ನು ಆಲಿಸ್ ರುಸೋ ಎಂಬವರು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದು, ಇದೀಗ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: ಮಹಿಳೆಯನ್ನು ನಗ್ನ ಮಾಡಿ ಪೈಶಾಚಿಕ ಹಲ್ಲೆ ನಡೆಸಿದ ಕಿರಾತಕರು
ಈ ಕುರಿತಂತೆ ಆಲಿಸ್ ರುಸೋ, ಮದ್ಯದ ಅಮಲಿನಲ್ಲಿದ್ದ ದಂಪತಿಗಳು ಸರಿಯಾಗಿ ಮಾಸ್ಕ್ ಧರಿಸದೇ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ. ನಾನು ಈ ವೀಡಿಯೋವನ್ನು ಪೋಸ್ಟ್ ಮಾಡಬೇಕೆಂದು ರೆಕಾರ್ಡ್ ಮಾಡಿಕೊಂಡೆ. ಅವರನ್ನು ನಿಭಾಯಿಸಿದ ಸಿಬ್ಬಂದಿಗೆ ನಿಜಕ್ಕೂ ಧನ್ಯವಾದ ತಿಳಿಸುತ್ತಾ ಮೆಚ್ಚುಗೆ ವ್ಯಕ್ತಪಡಿಸಬೇಕು. ಸದ್ಯ ಈ ಕುಟುಂಬ ವಿಮಾನವನ್ನು ಹತ್ತಿದ ನಂತರ ನಾನು ವಿಮಾನ ಹತ್ತಿದೆ. ಮಹಿಳೆ ಸೀಟ್ ಬಳಿ ಹೋಗುವ ವೇಳೆ ಬೂಮರಾಂಗ್ ತೆಗೆದುಕೊಂಡಳು. ವಿಮಾನದಲ್ಲಿ ಪದೇ, ಪದೇ ಓಡಾಡುತ್ತಿದ್ದಳು. ಆಗ ಅವಳು ಮದ್ಯಪಾನ ಮಾಡಿದ್ದಾಳೆಂದು ಅಂದುಕೊಂಡೆ. ಆಕೆಯ ಬ್ಯಾಗ್‍ನಲ್ಲಿದ್ದ ನೀರಿನ ಬಾಟಲ್‍ನಲ್ಲಿ ಕ್ಯಾಪ್ ತೆರೆದಿತ್ತು, ಆಗ ಆಕೆಗೆ ನಾನು ತಿಳಿಸಿದ್ದೆ. ಫ್ಲೈಟ್ ಸಿಬ್ಬಂದಿ ಮಹಿಳೆ ಮ್ಕಕಳೊಂದಿಗೆ ಬರುವಾಗ ಪ್ರವೇಶ ದ್ವಾರದಲ್ಲಿ ಮಾಸ್ಕ್‌ನನ್ನು ಸರಿಯಾಗಿ ಧರಿಸುವಂತೆ ತಿಳಿಸಿದ್ದಾರೆ. ಆದರೆ ಮಹಿಳೆ ಅವರ ಮಾತನ್ನು ಕೇಳಲಿಲ್ಲ. ಮಹಿಳೆ ಮತ್ತು ಆಕೆಯ ಪತಿ ಮೂಗಿನಿಂದ ಕೆಳಗೆ ಮಾಸ್ಕ್‌ನನ್ನು ಧರಿಸಿದ್ದರು ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಳ್ಳುವ ಮೂಲಕ ವಿವರಿಸಿದ್ದಾರೆ. ಇದನ್ನೂ ಓದಿ: ರುಚಿಯಾದ ಮೊಟ್ಟೆ ಗ್ರೇವಿ ಮಾಡಿ ಮನೆ ಮಂದಿ ಕುಳಿತು ಸವಿಯಿರಿ
View this post on Instagram