ಹೌಸ್‍ಕೀಪರ್ ನಿಂದ ನಾಲ್ವರಿಗೆ ಕೊರೊನಾ – ಬೆಚ್ಚಿ ಬೀಳಿಸುತ್ತೆ ಸೋಂಕಿತರ ಟ್ರಾವೆಲ್ ಹಿಸ್ಟರಿ

Public TV
1 Min Read

– ಸೋಂಕಿತ 13 ಜನರೊಂದಿಗೆ ರೂಂ ಶೇರ್
– ಒಬ್ಬ ಮಟನ್, ಮತ್ತೊಬ್ಬ ತರಕಾರಿ ವ್ಯಾಪರಿ

ಬೆಂಗಳೂರು: ಪಾದರಾಯನಪುರದಲ್ಲಿ ಮಹಾಮಾರಿ ಕೊರೊನಾ ವೈರಸ್ ರಣಕೇಕೆ ಹಾಕುತ್ತಿದೆ. ಇದೀಗ ಶಿವಾಜಿನಗರ ಮತ್ತೊಂದು ಪಾದರಾಯನಪುರ ಆಗುತ್ತಿದಿಯಾ ಎಂಬ ಅನುಮಾನ ಮೂಡಿದೆ. ಯಾಕೆಂದರೆ ಗುರುವಾರ ಒಂದೇ ದಿನ ಶಿವಾಜಿನಗರದಲ್ಲಿ ನಾಲ್ವರಿಗೆ ಕೊರೊನಾ ಪಾಸಿಟಿವ್ ದೃಢವಾಗಿದೆ.

ರೋಗಿ ನಂಬರ್ 653ನಿಂದ ನಾಲ್ವರಿಗೆ ಸೋಂಕು ಬಂದಿದೆ. ಈ ಮೂಲಕ ಹೌಸ್‍ಕೀಪರ್ ನಿಂದ ತನ್ನ ನಾಲ್ವರು ರೂಂಮೇಟ್ಸ್‌ಗೆ ಕೊರೊನಾ ಸೋಂಕು ಬಂದಿದೆ. ಮಣಿಪುರ ಮತ್ತು ಅಸ್ಸಾಂ ಮೂಲದ ನಾಲ್ವರಲ್ಲಿ ಕೊರೊನಾ ಪಾಸಿಟಿವ್ ಬಂದಿದೆ. ಸೋಂಕಿತ ಹೌಸ್‍ಕೀಪರ್ 13 ಜನರೊಂದಿಗೆ ರೂಂ ಶೇರ್ ಮಾಡಿದ್ದ. 13 ಜನರ ಪೈಕಿ ನಾಲ್ವರಿಗೆ ಸೋಂಕು ದೃಢವಾಗಿದೆ. ಇಂದು ಉಳಿದ 9 ಮಂದಿ ರಿಪೋರ್ಟ್ ಹೊರಬೀಳಲಿದೆ.

ಆರೋಗ್ಯ ಇಲಾಖೆಗೆ ದೊಡ್ಡ ತಲೆ ನೋವಾದ ನಾಲ್ವರು:
ಹೌಸ್‍ಕೀಪರ್ ನ ಸ್ನೇಹಿತರೆಲ್ಲಾ ಬೇರೆ ಬೇರೆ ಕೆಲಸ ಮಾಡುತ್ತಿದ್ದರು. ಹೀಗಾಗಿ ಆರೋಗ್ಯ ಇಲಾಖೆ ಈ ನಾಲ್ವರಿಂದ ದೊಡ್ಡ ತಲೆ ನೋವು ಶುರುವಾಗಿದೆ. ಮೊದಲ ಸೋಂಕಿತನಿಗೆ 19 ವರ್ಷವಾಗಿದ್ದು, ಜ್ಯುವೆಲ್ಲರಿ ಶಾಪ್‍ನಲ್ಲಿ ಕೆಲಸ ಮಾಡುತ್ತಿದ್ದ. ಇನ್ನೂ ಎರಡನೇ ಸೋಂಕಿತನಿಗೆ 22 ವರ್ಷವಾಗಿದ್ದು, ಮಟನ್ ವ್ಯಾಪಾರಿಯಾಗಿದ್ದ. 25 ವರ್ಷದ ಮೂರನೇ ಸೋಂಕಿತ ಹೋಟೆಲ್‍ಗೆ ತರಕಾರಿ ಹಾಕುವ ಕೆಲಸ ಮಾಡುತ್ತಿದ್ದನು. ಇನ್ನೂ ನಾಲ್ಕನೇ ಸೋಂಕಿತನಿಗೆ 40 ವರ್ಷವಾಗಿದ್ದು, ಇವರು ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡುತ್ತಿದ್ದರು.

ಶಿವಾಜಿನಗರದ ಸೋಂಕಿತರ ಟ್ರಾವೆಲ್ ಹಿಸ್ಟ್ರಿ:
ಶಿವಾಜಿನಗರದ ನಾಲ್ವರು ಅಸ್ಸಾಂ ಮತ್ತು ಮಣಿಪುರ ಮೂಲದವರಾಗಿದ್ದು, ಇವರು ಫ್ರೀ ಊಟಕ್ಕಾಗಿ ಇಡೀ ಶಿವಾಜಿನಗರದ ಮೂಲೆ ಮೂಲೆ ಸುತ್ತಿದ್ದರು. ಶಿವಾಜಿನಗರದ ಗಲ್ಲಿ ಗಲ್ಲಿಗಳಲ್ಲಿ ಓಡಾಡಿದ್ದಾರೆ. ಅದರಲ್ಲೂ ನಾಲ್ವರು ಸೋಂಕಿತರಲ್ಲಿ ಮಟನ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದವನಿಂದ ಟೆನ್ಶನ್ ಶುರುವಾಗಿದೆ. ಲಾಕ್‍ಡೌನ್ ಇದ್ದರೂ ಭಾನುವಾರವಾಗುತ್ತಿದ್ದಂತೆ ಮಟನ್‍ಗಾಗಿ ಗ್ರಾಹಕರ ಕ್ಯೂ ನಿಂತುಕೊಳ್ಳುತ್ತಿದ್ದರು. ಅಲ್ಲದೇ ಎಲ್ಲಾ ದಿನವೂ ಈ ಸೋಂಕಿತ ಗ್ರಾಹಕರಿಗೆ ಮಟನ್ ಹಂಚಿದ್ದ. ಈ ಮೂಲಕ ಮಾಂಸ ಮಾರಿದವನಿಂದ ಎಷ್ಟು ಜನರಿಗೆ ಸೋಂಕು ಹರಡಿದಿಯೋ ಎಂಬ ಆತಂಕ ಶುರುವಾಗಿದೆ.

 

Share This Article
Leave a Comment

Leave a Reply

Your email address will not be published. Required fields are marked *