2ನೇ ಮಗುವಿನ ನಿರೀಕ್ಷೆಯಲ್ಲಿ ಕನ್ನಡದ ‘ಕೂಲ್’ ಚಿತ್ರದ ನಟಿ ಸನಾ

Public TV
1 Min Read

ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ‘ಕೂಲ್’ (Cool) ಚಿತ್ರದಲ್ಲಿ ನಟಿಸಿದ್ದ ಸನಾ ಖಾನ್ (Sana Khan) ಇದೀಗ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ನಾವು ಮೂವರು ಕುಟುಂಬವು ಸಂತೋಷದಿಂದ ನಾಲ್ಕಕ್ಕೆ ಬೆಳೆಯುತ್ತಿದೆ ಎಂದು ಮತ್ತೆ ತಾಯಿಯಾಗ್ತಿರೋದಾಗಿ ನಟಿ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ:Pushpa 2: ಅಲ್ಲು ಅರ್ಜುನ್, ಶ್ರೀಲೀಲಾ ಐಟಂ ಹಾಡಿನ ಪ್ರೋಮೋ ರಿಲೀಸ್

ಸರ್ವಶಕ್ತನಾದ ಅಲ್ಲಾಹನ ಆಶೀರ್ವಾದದಿಂದ, ನಮ್ಮ ಮೂವರ ಕುಟುಂಬವು ಸಂತೋಷದಿಂದ ನಾಲ್ಕಕ್ಕೆ ಬೆಳೆಯುತ್ತಿದೆ. ಆಶೀರ್ವಾದವು ದಾರಿಯಲ್ಲಿದೆ. ಸೈಯದ್ ತಾರಿಕ್ ಜಮೀಲ್ ಅಣ್ಣನಾಗಲು ಉತ್ಸುಕರಾಗಿದ್ದಾನೆ. ಪ್ರೀತಿಯ ಅಲ್ಲಾ, ನಮ್ಮ ಹೊಸ ಆಶೀರ್ವಾದವನ್ನು ಸ್ವಾಗತಿಸಲು ಮತ್ತು ಪಾಲಿಸಲು ನಾವು ಕಾಯಲು ಸಾಧ್ಯವಿಲ್ಲ. ನಿಮ್ಮ ಆಶೀರ್ವಾದ ನಮ್ಮ ಮೇಲಿರಲಿ ಎಂದು ಬರೆದುಕೊಂಡಿದ್ದಾರೆ.

ಅಂದಹಾಗೆ, 2020ರಲ್ಲಿ ಅನಾಸ್ ಸೈಯದ್ ಜೊತೆ ಸೂರತ್‌ನಲ್ಲಿ ಸನಾ ಮದುವೆಯಾದರು. ಸಿನಿಮಾರಂಗದಿಂದ ಅವರು ಅಂತರ ಕಾಯ್ದುಕೊಂಡಿದ್ದಾರೆ. ಇದನ್ನೂ ಓದಿ:ಸ್ಟೈಲೀಶ್ ಆದ ಸಂಜನಾ ಬುರ್ಲಿ ಲುಕ್‌ಗೆ ಪಡ್ಡೆಹುಡುಗರು ಫಿದಾ

ಸನಾ ತೆಲುಗು, ತಮಿಳು ಸೇರಿದಂತೆ ಬಹುಭಾಷಾ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ‘ಬಿಗ್ ಬಾಸ್ ಹಿಂದಿ ಸೀಸನ್ 6’ರಲ್ಲಿ (Bigg Boss) ಸನಾ ರನ್ನರ್ ಅಪ್ ಆಗಿದ್ದರು. ಕನ್ನಡದ ‘ಕೂಲ್’ (Cool) ಚಿತ್ರದಲ್ಲಿ ಗಣೇಶ್‌ಗೆ (Golden Star Ganesh) ನಾಯಕಿಯಾಗಿ ನಟಿಸಿದರು.

Share This Article