– ಪೊಲೀಸರ ನಿದ್ದೆಗೆಡಿಸಿದ ತನಿಖೆಯ ಆಳ
ಮಂಗಳೂರು: ಕುಕ್ಕರ್ ಬಾಂಬ್ ಸ್ಫೋಟ (Cooker Bomb Blast) ದ ರೂವಾರಿ ಮಹಮ್ಮದ್ ಶಾರೀಕ್ (Mohammad Shariq) ಆಸ್ಪತ್ರೆಯಲ್ಲಿ ಜೀವನ್ಮರಣ ಸ್ಥಿತಿಯಲ್ಲಿದ್ದಾನೆ. ಇದೀಗ ಪೊಲೀಸರ ತನಿಖೆಯಲ್ಲಿ ದಿನಕ್ಕೊಂದು ಸ್ಫೋಟಕ ವಿಷಯ ಬಯಲಾಗ್ತಿದೆ. ಮಂಗಳೂರಿಗೆ ಬಾಂಬ್ ಜೊತೆಗೆ ಬಂದಿದ್ದು ಕೇವಲ ಶಾರೀಕ್ ಮಾತ್ರ ಅಲ್ಲ. ಮತ್ತೊಬ್ಬ ವ್ಯಕ್ತಿ ಇದ್ದ ಅನ್ನುವ ಆತಂಕಕಾರಿ ಮಾಹಿತಿಯೂ ಬಯಲಾಗಿದೆ.
ಹೌದು.. ನವೆಂಬರ್ 19ರಂದು ಮಂಗಳೂರಿನ ನಾಗುರಿಯಲ್ಲಿ ನಡೆದ ಆಟೋ ಬಾಂಬ್ ಬ್ಲಾಸ್ಟ್ ಗೂ ಮುನ್ನ ಮೈಸೂರಿನಿಂದ ಮಂಗಳೂರಿಗೆ ಬಂದಿದ್ದ ಶಾರೀಕ್ ಜೊತೆಗೆ ಇನ್ನಿಬ್ಬರು ಇದ್ದರು ಎನ್ನುವ ವಿಚಾರ ಬಯಲಾಗಿದೆ. ಪಡೀಲ್‍ನಲ್ಲಿ ಬಸ್‍ನಿಂದ ಇಳಿದ ಶಾರೀಕ್ ನಾಗುರಿ ಬಳಿಯ ವೈನ್ ಶಾಪ್ (Wine Shop) ಗೆ ತೆರಳಿದ್ದು, ಅಲ್ಲಿ ಮದ್ಯ ಖರೀದಿಸಿದ್ದಾನೆ. ಈ ವೇಳೆ ಶಾರೀಕ್ ಜೊತೆ ಮತ್ತೊಬ್ಬ ಇದ್ನಂತೆ. ಈ ವಿಚಾರವಾಗಿ ವೈನ್ ಶಾಪ್‍ನ ಸಿಸಿಟಿವಿಯನ್ನು ಪೊಲೀಸರು ಪರಿಶೀಲಿಸಿದಾಗ ಇಬ್ಬರು ಬ್ಯಾಗ್ ಧರಿಸಿ ವೈನ್ ಶಾಪ್‍ನಿಂದ ಹೊರ ಬರುವ ದೃಶ್ಯ ಸಿಕ್ಕಿದೆ. ಇದನ್ನೂ ಓದಿ: ಝಾಕೀರ್ ನಾಯ್ಕ್ The Real Inspiration – ಐಸಿಸ್ ಉಗ್ರರಂತೆ ಪೋಸ್ ನೀಡಿ ಪ್ರತೀಕಾರದ ಪ್ರತಿಜ್ಞೆ
ಇನ್ನೊಂದೆಡೆ, ಮಂಗಳೂರು ಬಾಂಬ್ ಸ್ಪೋಟದ ಹೊಣೆ ಹೊತ್ತ ಐಆರ್‍ಸಿ ಉಗ್ರ ಸಂಘಟನೆ ಬಿಡುಗಡೆ ಮಾಡಿದ ಪೋಸ್ಟರ್ ಕೂಡಾ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಈ ಪೋಸ್ಟರ್ ನಲ್ಲಿ ಪೊಲೀಸ್ ಅಧಿಕಾರಿಗಳಿಗೆ ಬೆದರಿಕೆ ಜೊತೆಗೆ ನಿಮ್ಮ ಖುಷಿ ಬಹಳ ದಿನಗಳ ಕಾಲ ಉಳಿಯೋದಿಲ್ಲ ಅಂತಾ ಎಚ್ಚರಿಕೆ ನೀಡಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್ ಶಶಿಕುಮಾರ್, ಈ ಬಗ್ಗೆ ಕದ್ರಿ ಠಾಣೆ (Kadri Police Station) ಯಲ್ಲಿ ದೂರು ದಾಖಲಾಗಿದೆ. ಎಲ್ಲಾ ಊಹಾಪೋಹಗಳು ಸುಳ್ಳು ಅಂತಾ ಹೇಳಿದ್ದಾರೆ.
ಒಟ್ಟಿನಲ್ಲಿ ಶಾರೀಕ್ ಪೊಲೀಸರ ಸರ್ಪಗಾವಲಿನಲ್ಲಿದ್ದರೂ ಯಾವಾಗ ಏನು ಆಗುತ್ತೆ ಅನ್ನೋ ಆತಂಕ ಎದುರಾಗಿದೆ. ಹಾಗೆ ಉಗ್ರರ ಬೆದರಿಕೆಯನ್ನೂ ಗಂಭೀರವಾಗಿ ಪರಿಗಣಿಸಬೇಕಿದೆ.